ಐಶ್ವರ್ಯ ರೈ-ಅಭಿಷೇಕ್‌ ಬಚ್ಚನ್‌ ವಿಚ್ಚೇದನ ವದಂತಿ ಮಧ್ಯೆ ʼಅಂತದ್ದೊಂದುʼ ಕೆಲಸ ಮಾಡಿದ ಪುತ್ರಿ ಆರಾಧ್ಯ!! ವೈರಲ್ ಫೋಟೋ ನೋಡಿ ಶಾಕ್ ಆದ ಬಚ್ಚನ್ ಕುಟುಂಬ!

Fri, 04 Oct 2024-10:49 am,

ಐಶ್ವರ್ಯಾ ಮತ್ತು ಅಭಿಷೇಕ್ ಅವರ ಪೋಟೋಗಳು ಮತ್ತು ವೀಡಿಯೊಗಳು ಅವರು ಕುಟುಂಬದಲ್ಲಿ ಎಷ್ಟು ಸಂತೋಷವಾಗಿದ್ದಾರೆ ಎಂಬುದನ್ನು ಯಾವಾಗಲೂ ಸಾಬೀತುಪಡಿಸಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಅವರ ನಡುವೆ ಹಲವು ಸಮಸ್ಯೆಗಳಿವೆ ಎನ್ನುವ ಮಾತು ಕೇಳಿ ಬರುತ್ತಿವೆ. ಅಲ್ಲದೇ ಈ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ಐಶ್ವರ್ಯಾ ತನ್ನ ಮಗಳು ಆರಾಧ್ಯ ಜೊತೆ ವಾಸಿಸುತ್ತಾಳೆ ಹೊರತು ಬಚ್ಚನ್ ಕುಟುಂಬದೊಂದಿಗೆ ಅಲ್ಲ ಎನ್ನಲಾಗಿದೆ..   

ಐಶ್ವರ್ಯಾ ಕೂಡ ಇತ್ತೀಚೆಗೆ ಪ್ಯಾರಿಸ್ ಫ್ಯಾಶನ್ ವೀಕ್‌ಗೆ ಹೊರಡುವ ಮೊದಲು ತನ್ನ ಮದುವೆಯ ಉಂಗುರವನ್ನು ತೋರಿಸುತ್ತಿದ್ದಳು.. ಇದಾದ ನಂತರವೂ ವಿಚ್ಛೇದನದ ವದಂತಿಗಳು ನಿಂತಿಲ್ಲ.   

ಇದರ ಮಧ್ಯೆ, ಹಲವಾರು ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಸಿಕಂದರ್ ಚಿತ್ರೀಕರಣದ ಸಮಯದಲ್ಲಿ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿರುವುದನ್ನು ಕಾಣಬಹುದು.  

 ಈ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಭೇಟಿಯ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಚಿತ್ರಗಳು ನಕಲಿ ಎಂಬುದು ಸತ್ಯ. ಈ ಚಿತ್ರಗಳನ್ನು ಮಾರ್ಫಿಂಗ್‌ ಮಾಡಲಾಗಿದೆ.. ವರದಿಯ ಪ್ರಕಾರ ಆರಾಧ್ಯ ಅವರ ಚಿತ್ರಗಳನ್ನು ಭಾರತೀಯ ಬಾಕ್ಸರ್ ನಿಖತ್ ಜರೀನ್ ಅವರ ಮುಖದ ಮೇಲೆ ಎಡಿಟ್ ಮಾಡಲಾಗಿದ್ದು, ಜರೀನ್ ಮುಖದ ಮೇಲೆ ಆರಾಧ್ಯ ಅವರ ಮುಖವನ್ನು ಮಾರ್ಫಿಂಗ್‌ ಮಾಡಲಾಗಿದೆ..   

ಇನ್ನು ಸಲ್ಮಾನ್‌ ಖಾನ್‌ ಸಿನಿಮಾ ವಿಚಾರಕ್ಕೆ ಬಂದರೇ.. ಸಿಕಂದರ್ ಚಿತ್ರದಲ್ಲಿ ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2025ರಲ್ಲಿ ಬಿಡುಗಡೆಯಾಗಲಿದೆ.   

ಅಭಿಷೇಕ್ ಮತ್ತು ಐಶ್ವರ್ಯಾ ಬಗ್ಗೆ ಮಾತನಾಡುವುದಾರೇ ಅವರು ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ.. ಆದ್ದರಿಂದ ಜನರು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಭಾವಿಸುತ್ತಿದ್ದಾರೆ. ಈ ಬಗ್ಗೆ ಅವರಿಬ್ಬರ ಕುಟುಂಬಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link