ʼದೈಹಿಕವಾಗಿ, ಭಾವನಾತ್ಮಕವಾಗಿ ನಿಂದನೆಗೊಳಗಾಗಿದ್ದೇನೆʼ.. ಕೊನೆಗೂ ಡಿವೋರ್ಸ್ ಬಗ್ಗೆ ಮೌನ ಮುರಿದ ಐಶ್ವರ್ಯ ರೈ!
2007ರಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಅವರಿಗೆ ಆರಾಧ್ಯ ಎಂಬ ಮಗಳೂ ಇದ್ದಾಳೆ. 16 ವರ್ಷಗಳಿಂದ ಉತ್ತಮವಾಗಿ ನಡೆಯುತ್ತಿರುವ ದಾಂಪತ್ಯದಲ್ಲಿಒ ಭಿನ್ನಾಭಿಪ್ರಾಯಗಳು ನಡೆದಿವೆಯಂತೆ. ಕಳೆದ ಕೆಲವು ದಿನಗಳಿಂದ ಬಾಲಿವುಡ್ ಮಾಧ್ಯಮಗಳಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಯನ್ನು ಬಿತ್ತರಿಸಲಾಗುತ್ತಿದೆ..
ಐಶ್ವರ್ಯಾ ರೈ ತಮ್ಮ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಂಡರೂ, ವಿಚ್ಛೇದನ ಪಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡುತ್ತಾ ಬಂದರೂ ಈ ವದಂತಿಗಳು ನಿಂತಿಲ್ಲ. ಅದೇ ಸಮಯದಲ್ಲಿ ಐಶ್ವರ್ಯ ರೈ ಒಬ್ಬ ವ್ಯಕ್ತಿಯ ಜೊತೆ ಕ್ಲೋಸ್ ಆಗುತ್ತಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಝಿರಾಕ್ ಮಾರ್ಕರ್ ಎಂಬ ವೈದ್ಯರಿಗೆ ಐಶ್ವರ್ಯಾ ರೈ ಆಪ್ತರಾಗಿದ್ದಾರೆ ಎಂಬ ಸುದ್ದಿ ಇದೆ. ಆದರೆ ಈ ಗೆಳೆತನ ಈಗ ಬೇರೆ ಸಂಬಂಧಕ್ಕೆ ತಿರುಗಿದೆ ಎಂದು ಬಾಲಿವುಡ್ ಮಂದಿ ಚರ್ಚಿಸಿದ್ದಾರೆ. ಆದರೆ ಅವರು ಐಶ್ವರ್ಯಾ ರೈ ಅವರ ಬಾಲ್ಯದ ಗೆಳಯ ಎಂದು ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನಕ್ಕೆ ನಾಯಕಿಯ ಕಾರಣದಿಂದ ಬಿರುಕು ಮೂಡಿದೆ ಎಂಬ ಮಾತುಗಳು ಮುನ್ನೆಲೆಗೆ ಬರುತ್ತಿವೆ. ಅಭಿಷೇಕ್ ಬಚ್ಚನ್ ಜೀವನದಲ್ಲಿ ಮತ್ತೊಬ್ಬ ಮಹಿಳೆಯ ಪ್ರವೇಶದಿಂದಾಗಿ ಅವರ ನಡುವೆ ಜಗಳವಾಗಿದೆ ಎಂಬ ವದಂತಿ ಇದೆ.
ದಾಸ್ವಿ ಸಿನಿಮಾದಲ್ಲಿ ನಟಿಸಿದ ನಟಿ ನಿಮ್ರತ್ ಕೌರ್ ಜೊತೆ ಅಭಿಷೇಕ್ ಬಚ್ಚನ್ ಹತ್ತಿರವಾಗುತ್ತಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಬ್ಬರೂ ಸಂಬಂಧದಲ್ಲಿದ್ದಾರೆ ಎಂದು ತಿಳಿದು ಐಶ್ವರ್ಯಾ ಜಗಳವಾಡಿದ್ದಾರೆ ಎನ್ನಲಾಗಿದೆ.
ಅದರ ನಂತರ, ಇತ್ತೀಚಿನ ರೆಡ್ಡಿಟ್ ಪೋಸ್ಟ್‌ನಲ್ಲಿ, ಅವರ ವೈವಾಹಿಕ ಸಂಬಂಧದಲ್ಲಿನ ಸಮಸ್ಯೆಗಳು ಹೆಚ್ಚು ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.. ಆದರೆ ಅಂಥದ್ದೇನೂ ಇಲ್ಲ ಎನ್ನುತ್ತಾರೆ ಬಚ್ಚನ್ ಕುಟುಂಬದ ಆಪ್ತರು.
ಇದರ ಮಧ್ಯೆ ಸಂದರ್ಶನವೊಂದರಲ್ಲಿ ಆಂಕರ್ ಐಶ್ವರ್ಯಾ ರೈ ಅವರನ್ನು ಸಲ್ಮಾನ್ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯಾ ರೈ.. "ಸಲ್ಮಾನ್ ಖಾನ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾಗ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಸಲ್ಮಾನ್ ಮದ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದರು".
"ಇದು ನನ್ನ ಜೀವನದ ಅತ್ಯಂತ ಕೆಟ್ಟ ಹಂತ ಎಂದು ನಾನು ಪರಿಗಣಿಸುತ್ತೇನೆ. ಅವರು ನನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸಿದ್ದಾರೆ. ಇದರಿಂದ ನಾನು ಅವನೊಂದಿಗೆ ಬೇರ್ಪಟ್ಟಿದ್ದೇನೆ" ಎಂದು ಸಲ್ಮಾನ್ ಬಗ್ಗೆ ಐಶ್ವರ್ಯಾ ರೈ ಮಾಡಿರುವ ಕಾಮೆಂಟ್ ಈಗ ವೈರಲ್ ಆಗಿದೆ.