ಐಶ್ವರ್ಯಾ ಜೊತೆ ʼಅದನ್ನುʼ ಮಾಡದಿದ್ದರೆ ನನಗೆ ನಿದ್ದೆಯೇ ಬರಲ್ಲ!- ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಶಾಕಿಂಗ್ ಹೇಳಿಕೆ ವೈರಲ್
ಪ್ರಸ್ತುತ ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನವೆಂಬ ಪೆಡಂಭೂತ ದಾಳಿ ಮಾಡುತ್ತಿದೆಯೇನೋ...! ಎಂಬಂತೆ ಭಾಸವಾಗುತ್ತಿದೆ. ಕಳೆದ ದಿನವಷ್ಟೇ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಡಿವೋರ್ಸ್ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು. ಇವೆಲ್ಲದರ ಮಧ್ಯೆ ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನದ ವದಂತಿ ಕೂಡ ಹೆಚ್ಚಾಗಿ ಸದ್ದು ಮಾಡುತ್ತಿದೆ.
ಇತ್ತೀಚಿಗೆ ಅಂಬಾನಿ ಮಗನ ಮದುವೆಯಲ್ಲಿ ಅಭಿಷೇಕ್ ಬಚ್ಚನ್, ತಮ್ಮ ಕುಟುಂಬ ಸಮೇತರಾಗಿ ಕಾಣಿಸಿಕೊಂಡಿದ್ದರು. ಆದರೆ ಐಶ್ವರ್ಯಾ ಮತ್ತು ಆರಾಧ್ಯ ಅವರ ಜೊತೆ ಕಾಣಿಸದೆ, ಪ್ರತ್ಯೇಕವಾಗಿ ಆಗಮಿಸಿದ್ದರು.
ಈ ಬೆನ್ನಲ್ಲೇ ಅಭಿಷೇಕ್ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದ್ದ ವಿಚ್ಛೇದನದ ಪೋಸ್ಟ್ ಅನ್ನು ಲೈಕ್ ಮಾಡುವ ಮೂಲಕ ಮತ್ತಷ್ಟು ಗೊಂದಲಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ಇನ್ನು ಈ ಜೋಡಿ ಯಾವಾಗ ಬೇಕಾದರೂ ವಿಚ್ಛೇದನವನ್ನು ಘೋಷಿಸಬಹುದು. ಆದರೆ, ಈ ಸುದ್ದಿಗಳ ಬಗ್ಗೆ ಅಭಿಷೇಕ್-ಐಶ್ವರ್ಯ ಮೌನವಾಗಿದ್ದಾರೆ. ಯಾರಿಂದಲೂ ಯಾವುದೇ ಹೇಳಿಕೆ ಬಂದಿಲ್ಲ.
ಹಿಂದಿನಿಂದಲೂ ಅಭಿಷೇಕ್ ಮತ್ತು ಐಶ್ವರ್ಯಾ ರೈ ನಡುವಿನ ಸಂಬಂಧದಲ್ಲಿ ಹುಳುಕಿದೆ ಎಂಬ ವರದಿಗಳಿವೆ. ಅಂದಹಾಗೆ ಸಂದರ್ಶನವೊಂದರಲ್ಲಿ ಇಬ್ಬರೂ ತಮ್ಮ ನಡುವೆ ಜಗಳ ನಡೆದಿರುವುದನ್ನು ಒಪ್ಪಿಕೊಂಡಿದ್ದರು.
2010 ರಲ್ಲಿ 'ವೋಗ್ ಇಂಡಿಯಾ' ನಿಯತಕಾಲಿಕೆಗೆ ಒಟ್ಟಿಗೆ ಸಂದರ್ಶನ ನೀಡಿದ್ದ ಈ ಜೋಡಿ, ಹಲವು ಸಂಗತಿಗಳ ಬಗ್ಗೆ ಬಹಿರಂಗಪಡಿಸಿದ್ದರು.
ಈ ಸಂದರ್ಶನದಲ್ಲಿ, ನೀವು ಜಗಳವಾಡುತ್ತೀರಾ ಎಂದು ಪ್ರಶ್ನೆ ಕೇಳಿದಾಗ, ಐಶ್ವರ್ಯಾ ತಕ್ಷಣ 'ಓಹ್, ಪ್ರತಿದಿನ' ಎಂದು ಉತ್ತರಿಸಿದ್ದರು. "ಆದರೆ, ಅದು ಆರೋಗ್ಯಕರ ಜಗಳ" ಎಂದಿದ್ದಾರೆ.
"ಐಶ್ವರ್ಯಾ ಎಂದಾದರೂ ನನ್ನ ಮಾತಿಗೆ ಒಪ್ಪದಿದ್ದರೆ ಮತ್ತು ಕೋಪಗೊಂಡರೆ, ಅವಳಲ್ಲಿ ಮೊದಲು ಕ್ಷಮೆ ಕೇಳುವುದು ನಾನೇ" ಎಂದು ಅಭಿಷೇಕ್ ಹೇಳಿದ್ದಾರೆ.
"ನಾನು ಯಾವಾಗಲೂ ಮೊದಲು ಕ್ಷಮೆಯಾಚಿಸುತ್ತೇನೆ. ಏಕೆಂದರೆ ಮಹಿಳೆಯರು ಮೊದಲು ಕ್ಷಮೆ ಕೇಳುವುದಿಲ್ಲ. ನನ್ನದೊಂದು ನಿಯಮವಿದೆ. ಜಗಳದ ಕ್ಷಮೆ ಕೇಳದಿದ್ದರೆ ನನಗೆ ನಿದ್ರೆಯೇ ಬರಲ್ಲ. ಕ್ಷಮೆ ಕೇಳಿದ ಬಳಿಕ ಚೆನ್ನಾಗಿ ನಿದ್ರೆ ಬರುತ್ತದೆ" ಎನ್ನುತ್ತಾ ಪುರುಷರಿಗೆ ಸಲಹೆಯನ್ನೂ ನೀಡಿದ್ದಾರೆ.
ಈ ಸಂದರ್ಶನದಲ್ಲಿ ಐಶ್ "ನನ್ನ ಮದುವೆಯ ಪ್ರತಿ ಕ್ಷಣವೂ ಬಹಳ ವಿಶೇಷ ಮತ್ತು ಸ್ಮರಣೀಯವಾಗಿತ್ತು. ನಾನು ಪ್ರತಿ ಕ್ಷಣವನ್ನು ತುಂಬಾ ಆನಂದಿಸಿದೆ. ನಮ್ಮ ಮದುವೆಯಾಗಿ 12 ವರ್ಷಗಳಾಗಿವೆ. ಮದುವೆಗೂ ಮುನ್ನ ನಾವಿಬ್ಬರೂ ಸ್ನೇಹಿತರಾಗಿದ್ದೆವು. ನಾವು ಬಹಳ ಸಮಯದಿಂದ ಒಬ್ಬರಿಗೊಬ್ಬರು ತಿಳಿದಿದ್ದೆವು" ಎಂದರು.