ಅತ್ತ ನಾಗಚೈತನ್ಯ-ಶೋಭಿತಾ ಮದುವೆ ಸಂಭ್ರಮ... ಇತ್ತ ಸಮಂತಾ ಪ್ರೆಗ್ನೆಂಟ್! ನಾನು ಗರ್ಭಿಣಿ... ನಿನ್ನ ಸಮಯ ಶುರುವಾಯ್ತು ಎಂದು ಪೋಸ್ಟ್ ಶೇರ್ ಮಾಡಿದ ಸ್ಯಾಮ್!?
ಆದರೆ ಈ ನಡುವೆ ನಾಗಚೈತನ್ಯ ಎರಡನೇ ಮದುವೆಯಾಗುತ್ತಿದ್ದಾರೆ. ನಟಿ ಶೋಭಿತಾ ಧೂಳಿಪಾಲ ಜೊತೆ ಎರಡನೇ ಬಾರಿ ವಿವಾಹಬಂಧಕ್ಕೊಳಗಾಗಲು ತೀರ್ಮಾನಿಸಿದ್ದಾರೆ. ಈ ಎಲ್ಲದರ ನಡುವೆ ಸಮಂತಾ ಅವರು ನಾನು ಗರ್ಭಿಣಿ ಎಂದಿರುವ ಹೇಳಿಕೆ ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಏನೆಂಬುದನ್ನು ಮುಂದೆ ತಿಳಿಯೋಣ,
ಆದರೆ ಈ ನಡುವೆ ನಾಗಚೈತನ್ಯ ಎರಡನೇ ಮದುವೆಯಾಗುತ್ತಿದ್ದಾರೆ. ನಟಿ ಶೋಭಿತಾ ಧೂಳಿಪಾಲ ಜೊತೆ ಎರಡನೇ ಬಾರಿ ವಿವಾಹಬಂಧಕ್ಕೊಳಗಾಗಲು ತೀರ್ಮಾನಿಸಿದ್ದಾರೆ. ಈ ಎಲ್ಲದರ ನಡುವೆ ಸಮಂತಾ ಅವರು ನಾನು ಗರ್ಭಿಣಿ ಎಂದಿರುವ ಹೇಳಿಕೆ ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಏನೆಂಬುದನ್ನು ಮುಂದೆ ತಿಳಿಯೋಣ,
ಸದ್ಯ ಸಮಂತಾ ಒಂಟಿ ಜೀವನ ನಡೆಸುತ್ತಿದ್ದಾರೆ. ಸಮಂತಾ ಜೊತೆಗಿನ ವಿಚ್ಛೇದನದ ನಂತರ, ನಾಗ ಚೈತನ್ಯ ಶೋಭಿತಾ ಜೊತೆ ಸಂಬಂಧ ಹೊಂದಿದ್ದರು. ಇದೀಗ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದು, ಅವರ ನಿಶ್ಚಿತಾರ್ಥ ಸಮಾರಂಭ ಕೆಲವೇ ಜನರ ಸಮ್ಮುಖದಲ್ಲಿ ಇತ್ತೀಚೆಗೆ ನಡೆದಿತ್ತು. ಮತ್ತೊಂದೆಡೆ, ಸಮಂತಾ ಸಿಂಗಲ್ ಆಗಿ ಉಳಿದಿದ್ದಾರೆ. ಈ, ಸಮಂತಾ ಬಾಲಿವುಡ್ ನಿರ್ದೇಶಕರನ್ನು ಪ್ರೀತಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಅವರು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಅವು ಪ್ರಚಾರಕ್ಕೆ ಮಾತ್ರ ಸೀಮಿತವಾಗಿವೆ.
ನಾಗ ಚೈತನ್ಯ ಮತ್ತು ಶೋಭಿತಾ ಮದುವೆ ಶೀಘ್ರದಲ್ಲೇ ನಡೆಯಲಿದೆ. ಇದರ ಅಂಗವಾಗಿ ಸೋಭಿತಾ ಧೂಳಿಪಾಲ ಅವರ ನಿವಾಸದಲ್ಲಿ ಅರಿಶಿನ ಶಾಸ್ತ್ರ ಕೂಡ ನಡೆದಿದೆ. ಇದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶೋಭಿತಾ ಅವರ ಸಹೋದರಿ ಸಮಂತಾ, ಅಕ್ಕನ ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ದಿ ಕೌಂಟ್‌ಡೌನ್ ಬಿಗಿನ್ಸ್" ಎಂಬ ಶೀರ್ಷಿಕೆಯನ್ನು ಸೇರಿಸಿ, ಅಕ್ಕ ಶೋಭಿತಾಗೆ ವಿಶ್ ಮಾಡಿದ್ದಾರೆ.
ಇದರ ಬೆನ್ನಲ್ಲೇ ಸಮಂತಾ ರುತ್‌ಪ್ರಭು ಅವರ ಹಳೆಯ ಪೋಸ್ಟ್ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದ ಸ್ಯಾಮ್‌ಗೆ ಫ್ಯಾನ್ ಒಬ್ಬರು, "ನೀವು ಗರ್ಭಿಣಿಯಾಗಿದ್ದೀರಂತೆ ಹೌದಾ?" ಎಂಬ ಪ್ರಶ್ನೆ ಕೇಳಿದ್ದ. ಅದಕ್ಕೆ ಸಮಂತಾ ಉತ್ತರ ನೀಡಿದ್ದರು.
"ಹೌದು ನಾನು ಗರ್ಭಿಣಿ... 2017ರಿಂದಲೇ ಗರ್ಭಿಣಿಯಾಗಿದ್ದೇನೆ. ನನ್ನ ಪ್ರಕಾರ ಹೊಟ್ಟೆಯಲ್ಲಿರುವ ಮಗುವಿಗೆ ಹೊರಬರಲು ಇಷ್ಟವಿಲ್ಲ" ಎಂದು ಹಾಸ್ಯಭರಿತವಾಗಿ ಉತ್ತರ ನೀಡಿದ್ದರು. ಈ ಸುದ್ದಿ ಪ್ರಸ್ತುತ ವೈರಲ್ ಆಗುತ್ತಿದೆ.
ಈ ಎರಡೂ ವಿಚಾರಗಳನ್ನು ಒಟ್ಟಾಗಿಸಿ ಸೋಶಿಯಲ್ ಮೀಡಿಯಾದಲ್ಲಿ ವದಂತಿ ಹಬ್ಬಿಸಲಾಗುತ್ತಿದೆ.