ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಸುದ್ದಿ ನಡುವೆ ಶಾಕಿಂಗ್ ಪೋಸ್ಟ್ ಮಾಡಿದ ಅಭಿಷೇಕ್ ಬಚ್ಚನ್...!ಪೋಸ್ಟ್ ವೈರಲ್
ಈ ಪೋಸ್ಟ್‌ನಲ್ಲಿ, ಅಭಿಷೇಕ್ ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಬಳಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಸುತ್ತಾ ಅದು ಎಂದಿಗೂ ಮೂರ್ಖತನವನ್ನು ಸರಿಗಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಐಶ್ವರ್ಯಾ ರೈ ಅವರ ವಿಚ್ಛೇದನದ ಸುದ್ದಿಯ ನಡುವೆ, ಅಭಿಷೇಕ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇದರಲ್ಲಿ 'ಕೃತಕ ಬುದ್ಧಿಮತ್ತೆ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಮಾತನಾಡಿದ್ದಾರೆ.
ಕೃತಕ ಬುದ್ದಿಮತ್ತೆ ಈಗ ಟ್ರೆಂಡ್ ನಲ್ಲಿದೆ, ಸಾಮಾನ್ಯ ಜ್ಞಾನವು ಯಾವಾಗಲೂ ಮತ್ತು ಮೂರ್ಖತನಕ್ಕೆ ಉತ್ತಮ ಉತ್ತರವಾಗಿದೆ ಎಂಬುದನ್ನು ನೆನಪಿಡಿ.ಸಾಮಾನ್ಯ ಜ್ಞಾನವು ಡಿಯೋಡರೆಂಟ್‌ನಂತೆ, ಅಗತ್ಯವಿರುವ ಜನರು ಅದನ್ನು ಎಂದಿಗೂ ಬಳಸುವುದಿಲ್ಲ ಹಾಗಾಗಿ ಮೌಢ್ಯದ ವಿರುದ್ಧ ಹೋರಾಡಲು ಸಾಮಾನ್ಯ ಜ್ಞಾನವೇ ದೊಡ್ಡ ಅಸ್ತ್ರ ಎಂದು ಅವರು ತಿಳಿಸಿದ್ದಾರೆ.
ಈಗ ಈ ಪೋಸ್ಟ್ ಕುರಿತಾಗಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ,
ಐಶ್ವರ್ಯಾ ಜೊತೆಗಿನ ವಿಚ್ಛೇದನದ ಸುದ್ದಿಯಿಂದಾಗಿ ಮಾಧ್ಯಮಗಳಲ್ಲಿ ಆಗಾಗ ಸುದ್ದಿಗಳು ಬರುತ್ತಿರುತ್ತವೆ.ಈ ಹಿನ್ನೆಲೆಯಲ್ಲಿ ಈಗ ಅವರ ಪೋಸ್ಟ್ ಗಳನ್ನೂ ನ ಹಲವು ರೀತಿಯಲ್ಲಿ ವಾಖ್ಯಾನಿಸುತ್ತಾರೆ.