ಕತ್ರಿನಾ ಕೈಫ್ `ಕನ್ಯಾದಾನ` ಮಾಡಿದ ಅಮಿತಾಭ್-ಜಯ ಬಚ್ಚನ್! ಮದುವೆ PHOTOS VIRAL
ಶಾಕ್ ಆಗ್ಬೇಡಿ, ಈಗ ನಾವು ನಿಮಗೆ ಕತ್ರಿಕಾ ಕೈಫ್ ಮದುವೆಯ ಹಿಂದಿನ ಗುಟ್ಟನ್ನು ಹೇಳುತ್ತೇವೆ. ವಾಸ್ತವವಾಗಿ ಇದು ಕತ್ರಿನಾ ಅವರ ನಿಜವಾದ ಮದುವೆ ಅಲ್ಲ. ಹೌದು, ಆದರೆ ಈ ಎಲ್ಲಾ ಸ್ಟಾರ್ ಗಳು ಆಭರಣ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜಾಹೀರಾತಿನ ಚಿತ್ರೀಕರಣದ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅಮಿತಾಭ್ ಬಚ್ಚನ್ ಮತ್ತು ಜಯ ಬಚ್ಚನ್ ಪೋಷಕರಾಗಿ ಕತ್ರಿನಾ ಅವರನ್ನು ಮಂಟಪಕ್ಕೆ ಕರೆದೊಯ್ಯುವ ಚಿತ್ರವೂ ಇದೆ.
ಅದೇ ಸಮಯದಲ್ಲಿ, ಅಮಿತಾಬ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜಯ ಬಚ್ಚನ್ ಅವರೊಂದಿಗೆ ನೃತ್ಯ ಮಾಡುತ್ತಿದ್ದಾರೆ.
ಅದೇ ಸಮಯದಲ್ಲಿ, ಕತ್ರಿನಾ ಅವರೊಂದಿಗೆ ಅಮಿತಾಬ್ ಮತ್ತು ಜಯಾ ನೃತ್ಯ ಮಾಡುವ ಚಿತ್ರಗಳೂ ತುಂಬಾ ಮುದ್ದಾಗಿವೆ.
ಈ ಚಿತ್ರಗಳಲ್ಲಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕತ್ರಿನಾ, ಅಮಿತಾಬ್ ಮತ್ತು ಜಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಈ ಮೂವರು ಬಾಲಿವುಡ್ ತಾರೆಯರ ಜೊತೆಗೆ ದಕ್ಷಿಣ ಚಿತ್ರರಂಗದ ತಾರೆಯರು ಕಾಣುವ ಮತ್ತೊಂದು ಚಿತ್ರ ಇಲ್ಲಿದೆ. ಈ ಚಿತ್ರದಲ್ಲಿ, ಒಂದು ಕಡೆ ಅಕ್ಕಿನೇನಿ ನಾಗಾರ್ಜುನ, ಕನ್ನಡದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ತಮಿಳು ಸಿನೆಮಾದ ಪ್ರಭುದೇವ ಕೂಡ ಕಾಣಿಸಿಕೊಂಡಿದ್ದಾರೆ. (ಎಲ್ಲಾ ಫೋಟೋಗಳು: ಅಮಿತಾಬ್ ಬಚ್ಚನ್ ಅವರ ಬ್ಲಾಗ್ ಕೃಪೆ)