ಎರಡು ಎಸಳು ಬೆಳ್ಳುಳ್ಳಿಗೆ ಈ ಹಣ್ಣನ್ನು ಬೆರೆಸಿ ಮಧ್ಯಾಹ್ನ ಊಟದ ಹೊತ್ತಿಗೆ ಸೇವಿಸಿ !ಸಂಜೆಯ ಒಳಗೆ ಬ್ಲಡ್ ಶುಗರ್ ಆಗುವುದು ನಾರ್ಮಲ್

Fri, 05 Jul 2024-11:38 am,

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು,ಆಹಾರಕ್ರಮದಲ್ಲಿ ಅನೇಕ ವಸ್ತಗಳನ್ನು ಸೇರಿಸಬಹುದು.ಅದರಲ್ಲೂ ಮಧ್ಯಾಹ್ನದ ಊಟದಲ್ಲಿ ಈ ಒಂದು ಚಟ್ನಿಯನ್ನು ಸೇರಿಸಿಕೊಳ್ಳಿ.  

ವಿಶೇಷವಾಗಿ ಮಳೆಗಾಲದಲ್ಲಿ ಮಧ್ಯಾಹ್ನದ ಊಟಕ್ಕೆ ಈ ಚಟ್ನಿಯನ್ನು ತಯಾರಿಸಿಕೊಳ್ಳಬಹುದು.ಈ ಚಟ್ನಿಯ ಸಹಾಯದಿಂದ ಸಕ್ಕರೆಯ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಈ ವಿಶೇಷ ಚಟ್ನಿಯನ್ನು ನೆಲ್ಲಿಕಾಯಿ ಮತ್ತು ಬೆಳ್ಳುಳ್ಳಿಯ ಸಹಾಯದಿಂದ ತಯಾರಿಸಲಾಗುತ್ತದೆ.ಇದು ಬ್ಲಡ್ ಶುಗರ್ ಅನ್ನು ನಿಯಂತ್ರಿಸುತ್ತದೆ.  

ನೆಲ್ಲಿಕಾಯಿಯಲ್ಲಿರುವ ಕ್ರೋಮಿಯಂ ಚಯಾಪಚಯವನ್ನು ಸುಧಾರಿಸುತ್ತದೆ.ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಬ್ಲಡ್ ಶುಗರ್ ನಿಯಂತ್ರಣ ಸಾಧ್ಯವಾಗುತ್ತದೆ.   

ಈ ಚಟ್ನಿಯನ್ನು ತಯಾರಿಸಲು ಹಸಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಒಂದು ಅಧ್ಯಯನದ ಪ್ರಕಾರ,ಹಸಿ ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  

2 ರಿಂದ 3 ಎಸಳು ಬೆಳ್ಳುಳ್ಳಿ, ಒಂದರಿಂದ ಎರಡು ನೆಲ್ಲಿಕಾಯಿ,  ಒಂದರಿಂದ ಎರಡು ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಇದ್ದರೆ ಈ ಚಟ್ನಿಯನ್ನು ತಯಾರಿಸಬಹುದು. 

ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ಜಾರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.ನಂತರ,ಉಪ್ಪು ಮತ್ತು ಸ್ವಲ್ಪ ಸಾಸಿವೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಇಷ್ಟು ಮಾಡಿದರೆ ಚಟ್ನಿ ರೆಡಿಯಾಗುತ್ತದೆ.

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link