ಯಾವುದೇ ದುಬಾರಿ ಪ್ರಾಡಕ್ಟ್ ಬೇಡ.. ʼಈʼ ರಸ ಹಚ್ಚಿದ್ರೆ ಮೊಣಕಾಲುದ್ದ, ಕಡುಕಪ್ಪು ಕೂದಲು ನಿಮ್ಮದಾಗುತ್ತೆ!
ಅನೇಕ ಮಹಿಳೆಯರು ಮೊಣಕಾಲುದ್ದ, ಗಾಢ ಕಪ್ಪು ಕೂದಲು ಬೇಕೆಂದು ಬಯಸುತ್ತಾರೆ.. ಹೀಗೆ ಆರೋಗ್ಯವಂತ ಕೂದಲಿಗಾಗಿ ಎಲ್ಲರೂ ಹಂಬಲಿಸುತ್ತಾರೆ... ಆದರೆ ಆ ಭಾಗ್ಯ ಎಲ್ಲರಿಗೂ ಇರುವುದಿಲ್ಲ.. ಕಡಿಮೆ ಜನ ತಮ್ಮ ಆಸೆಯಂತೆ ಕೂದಲನ್ನು ಹೊಂದಿರುತ್ತಾರೆ..
ನಿಮ್ಮ ಕೂದಲು ದಟ್ಟವಾಗಿ, ಉದ್ದವಾಗಿ ಮತ್ತು ದಪ್ಪವಾಗಿ ಬೆಳೆಯಬೇಕೆಂದು ನೀವು ಬಯಸಿದರೆ ಅದಕ್ಕಾಗಿ ನೀವು ಆಮ್ಲಾ ನೀರನ್ನು ಬಳಸಬಹುದು. ಆಮ್ಲಾದಲ್ಲಿ ವಿಟಮಿನ್ ಸಿ ಇದ್ದು.. ಇದನ್ನು ತಲೆಗೆ ಹಚ್ಚುವುದರಿಂದ ಕೂದಲು ಉದ್ದ ಮತ್ತು ನೈಸರ್ಗಿಕ ಕಪ್ಪು ಬಣ್ಣವನ್ನು ಹೊಂದುತ್ತವೆ..
ಆಮ್ಲಾ ರಸವನ್ನು ಕೂದಲಿನ ತುದಿ ಸೀಳುವ ಸಮಸ್ಯೆಯ ನಿವಾರಕವಾಗಿಯೂ ಕೆಲಸ ಮಾಡುತ್ತದೆ.. ಇದು ಕೂದಲ ಶುಷ್ಕತೆಯನ್ನು ಕಡಿಮೆ ಮಾಡಿ... ಕೂದಲನ್ನು ಬೇರುಗಳಿಂದ ಬಲಗೊಳ್ಳುವಂತೆ ನೋಡಿಕೊಳ್ಳುತ್ತದೆ... ಹಾಗಾದ್ರೆ ಆಮ್ಲಾ ನೀರನ್ನು ಹೇಗೆ ತಯಾರಿಸುವುದು ಮತ್ತು ಅದನ್ನು ಕೂದಲಿಗೆ ಹಚ್ಚುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ಕೂದಲಿಗೆ ಆಮ್ಲಾವನ್ನು ಹೇರ್ ವಾಶ್ ಆಗಿಯೂ ಬಳಸಬಹುದಾಗಿದೆ.. ಇದಕ್ಕಾಗಿ ಒಂದು ಚಮಚ ಆಮ್ಲಾ ಪುಡಿಯನ್ನು ನೀರಿನಲ್ಲಿ ಬೆರೆಸಿ.. ನಂತರ ಅದನ್ನು ನಿಮ್ಮ ಕೂದಲಿಗೆ ಬೇರುಗಳಿಂದ ತುದಿಯವರೆಗೂ ಹಚ್ಚಿ. 4 ರಿಂದ 5 ನಿಮಿಷಗಳ ಕಾಲ ನಿಮ್ಮ ಕೈಗಳಿಂದ ಮಸಾಜ್ ಮಾಡಿ.. ನಂತರ ಕೂದಲನ್ನು ವಾಶ್ ಮಾಡಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)