ಆಮ್ಲಾ ಜೊತೆ ಇದನ್ನು ಬೆರೆಸಿ ತಲೆಗೆ ಹಚ್ಚಿದರೆ.. 2 ದಿನಗಳಲ್ಲಿ ಬಿಳಿ ಕೂದಲು ಕಡು ಕಪ್ಪಾಗುವುದು!
ಬಿಳಿ ಕೂದಲನ್ನು ಕಪ್ಪಾಗಿಸಲು ಆಮ್ಲಾ ಅತ್ಯುತ್ತಮ ಆಯ್ಕೆಯಾಗಿದೆ. ಇದು ವಿಟಮಿನ್ ಸಿ, ರಂಜಕ, ಕಬ್ಬಿಣ, ಕ್ಯಾಲ್ಸಿಯಂ, ಕ್ಯಾರೋಟಿನ್, ವಿಟಮಿನ್ ಬಿ, ಫೈಬರ್ ಮತ್ತು ಅಂತಹ ಅನೇಕ ಅಂಶಗಳನ್ನು ಒಳಗೊಂಡಿದೆ.
ಆಮ್ಲಾ ಪುಡಿಯನ್ನು ಬಳಸಿ ಬಿಳಿ ಕೂದಲನ್ನು ಬುಡ ಸಮೇತ ಕಪ್ಪಾಗಿಸಬಹುದು. ಇದರಿಂದ ಕೂದಲಿನ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.
ಕಬ್ಬಿಣದ ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು, ಅದರಲ್ಲಿ 1 ಕಪ್ ನೀರು ಸುರಿಯಿರಿ. ನಂತರ ಅದಕ್ಕೆ ಆಮ್ಲಾ ಪೌಡರ್ ಹಾಕಿ 15 ನಿಮಿಷ ಕುದಿಸಿ.
ಅದು ಕುದಿಯಲು ಪ್ರಾರಂಭಿಸಿದಾಗ ಗ್ಯಾಸ್ ಆಫ್ ಮಾಡಿ. ಸ್ವಲ್ಪ ತಣ್ಣಾಗದ ನಂತರ ಈ ಮಿಶ್ರಣವನ್ನು ಸ್ಟೀಲ್ ಬಟ್ಟಲಿನಲ್ಲಿ ಫಿಲ್ಟರ್ ಮಾಡಿ. ಇದಕ್ಕೆ ಸ್ವಲ್ಪ ಅಲೊವೆರಾ ಜೆಲ್ ಸೇರಿಸಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿಕೊಳ್ಳಿ.
ಈ ಹೇರ್ ಪ್ಯಾಕ್‌ನ್ನು 20 ನಿಮಿಷದವರೆಗೆ ಇಟ್ಟುಕೊಂಡು ಬಳಿಕ ತಲೆಸ್ನಾನ ಮಾಡಿ. ಇದರಿಂದ ಬಿಳಿ ಕೂದಲು ಕಡು ಕಪ್ಪಾಗುವುದರ ಜೊತೆಗೆ ಮಾರುದ್ದ ಬೆಳೆಯವುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.