ನೆಲ್ಲಿಕಾಯಿ ಪುಡಿಗೆ ಇವೆರಡನ್ನು ಬೆರೆಸಿ ಹಚ್ಚಿದ್ರೆ ಕೂದಲು ಕಡು ಕಪ್ಪಾಗಿ ಮೊಣಕಾಲಿನವರೆಗೂ ಬೆಳೆಯುತ್ತೆ
ಬಿಳಿ ಕೂದಲಿನ ಸಮಸ್ಯೆಗೆ ಮಾರುಕಟ್ಟೆಯಲ್ಲಿ ನಾನಾ ವಿಧದ ಹೇರ್ ಡೈಗಳು ಲಭ್ಯವಿವೆ. ಆದರೆ, ಇದರಿಂದ ಅಡ್ಡ ಪರಿಣಾಮಗಳ ಅಪಾಯವೂ ಹೆಚ್ಚಾಗಿರುತ್ತದೆ.
ನೀವು ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಒಂದೆರಡು ಪದಾರ್ಥಗಳ ಬಳಕೆಯಿಂದ ಬಿಳಿ ಕೂದಲು ಕಡು ಕಪ್ಪಾಗಿ ಮಾರುದ್ದ ಬೆಳೆಯುವಂತೆ ಮಾಡಬಹುದು.
ನೆಲ್ಲಿಕಾಯಿ ಅಥವಾ ಆಮ್ಲಾದಲ್ಲಿರುವ ಪೋಷಕಾಂಶಗಳು ಕೂದಲನ್ನು ಹಲವು ಸಮಸ್ಯೆಗಳಿಂದ ರಕ್ಷಿಸುತ್ತದೆ. ಇದು ಕೂದಲಿಗೆ ನೈಸರ್ಗಿಕ ಗಾಢ ಬಣ್ಣವನ್ನು ನೀಡುತ್ತದೆ.
ಕಾಫಿ ಪುಡಿ ಕೂಡ ಬಿಳಿ ಕೂದಲಿಗೆ ನೈಸರ್ಗಿಕವಾಗಿ ಕಪ್ಪು ಬಣ್ಣವನ್ನು ನೀಡುತ್ತದೆ. ಇದರಲ್ಲಿ ಯಾವುದೇ ಸೈಡ್ ಎಫೆಕ್ಟ್ಸ್ ಅಪಾಯವೂ ಇರುವುದಿಲ್ಲ.
ನಿಂಬೆ ರಸವು ಕೂಡ ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತದೆ.
ಈ ನೈಸರ್ಗಿಕ ಹೇರ್ ಡೈ ತಯಾರಿಸಲು ಒಂದು ಲೋಟ ನೀರಿನಲ್ಲಿ 2 ಸ್ಪೂನ್ ಕಾಫಿಪುಡಿ ಹಾಕಿ ಡಿಕಾಕ್ಷನ್ ತಯಾರಿಸಿ. ಬಳಿಕ ಇದರಲ್ಲಿ 1 ಸ್ಪೂನ್ ಆಮ್ಲಾ ಪುಡಿ, 1 ಸ್ಪೂನ್ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯಿಡೀ ಹಾಗೇ ಬಿಡಿ.
ಹೇರ್ ವಾಶ್ ಮಾಡಿ ಚೆನ್ನಾಗಿ ಒಣಗಿರುವ ಕೂದಲಿಗೆ ರಾತ್ರಿ ತಯಾರಿಸಿಟ್ಟ ನೈಸರ್ಗಿಕ ಹೇರ್ ಡೈ ಅನ್ನು ಅನ್ವಯಿಸಿ. ಬ್ರಶ್ ಸಹಾಯದಿಂದ ಕೂದಲಿನ ಎಳೆ ಎಳೆಗೂ ಇದನ್ನು ಅನ್ವಯಿಸಿ. ಮೂರ್ನಾಲ್ಕು ಗಂಟೆಗಳ ಬಳಿಕ ಹೇರ್ ವಾಶ್ ಮಾಡಿದ್ರೆ ಕೂದಲು ಕಡು ಕಪ್ಪಾಗುವುದರ ಜೊತೆಗೆ ಕೆಲವೇ ದಿನಗಳಲ್ಲಿ ಮೊಣಕಾಲಿನವರೆಗೂ ಬೆಳೆಯುತ್ತೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.