ಶಸ್ತ್ರ ಚಿಕಿತ್ಸೆಯ ಅಗತ್ಯವೇ ಇಲ್ಲ ! ಕಿಡ್ನಿ ಸ್ಟೋನ್ ಮಾತ್ರವಲ್ಲ ಪಿತ್ತಕೋಶದ ಕಲ್ಲುಗಳನ್ನು ಕೂಡಾ ಕರಗಿಸಿ ಬಿಡುತ್ತದೆ ಈ ಹಣ್ಣಿನ ಬೀಜ !
ಕಿಡ್ನಿ ಸ್ಟೋನ್ ನಂತೆಯೇ ಪಿತ್ತಕೋಶದಲ್ಲಿನ ಕಲ್ಲುಗಳು ಕೂಡಾ ತಡೆಯಲು ಸಾಧ್ಯವಾಗದ ನೋವಿಗೆ ಕಾರಣವಾಗುತ್ತದೆ. ಇದು ದೀರ್ಘಕಾಲದವರೆಗೆ ಕಾಡುವ ನೋವು. ಆದರೆ,ಈ ನೋವನ್ನು ಕೆಲವು ನೈಸರ್ಗಿಕ ಪದಾರ್ಥಗಳ ಮೂಲಕ ಪರಿಹರಿಸಿಕೊಳ್ಳಬಹುದು.
ಹೌದು, ಪಿತ್ತ ಕೋಶದ ಕಲ್ಲಿನ ಸಮಸ್ಯೆಗೆ ನೆಲ್ಲಿಕಾಯಿ ಬೀಜ ಪರಿಹಾರವಾಗಬಹುದು. ನೆಲ್ಲಿ ಕಾಯಿ ಬೀಜ ಪಿತ್ತಕೋಶದ ಕಲ್ಲುಗಳ ವಿರುದ್ದ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಆದರೆ,ಅದನ್ನು ಹೇಗೆ ಸೇವಿಸಬೇಕು ನೋಡೋಣ.
ನೆಲ್ಲಿಕಾಯಿ ಬೀಜಗಳು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದಂತಹ ಗುಣಲಕ್ಷಣಗಳ ಆಗರವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದು ಪಿತ್ತಕೋಶದಲ್ಲಿನ ಕಲ್ಲುಗಳಿಗೆ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ.
ನೆಲ್ಲಿ ಕಾಯಿ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ, ಗ್ಯಾಸ್ಟ್ರಿಕ್ ಸಮಸ್ಯೆಗಳು ಕೂಡಾ ಕಡಿಮೆಯಾಗುತ್ತದೆ. ಇದು ಉತ್ತಮ ಪ್ರಮಾಣದ ವಿಟಮಿನ್ ಸಿಯನ್ನು ಹೊಂದಿದೆ. ಹಾಗಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡಾ ಕಡಿಮೆ ಮಾಡುತ್ತದೆ.
ಪಿತ್ತಕೋಶದ ಕಲ್ಲಿನ ಚಿಕಿತ್ಸೆಗಾಗಿ ನೆಲ್ಲಿಕಾಯಿ ಬೀಜವನ್ನು ಸೇವಿಸಬೇಕಾದರೆ ಮೊದಲು ಈ ಬೀಜಗಳನ್ನು ಚೆನ್ನಾಗಿ ಒಣಗಿಸಿ.ನಂತರ ಈ ಬೀಜಗಳನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಈ ಪುಡಿಯನ್ನು ಪ್ರತಿದಿನ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯಬೇಕು. ಇದರಿಂದ ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಪಿತ್ತಕೋಶದ ಕಲ್ಲುಗಳು ಕೂಡಾ ಕರಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.