ಆಪರೇಶನ್ ಇಲ್ಲದೆಯೇ ಕಣ್ಣ ಪೊರೆ ತೆಗೆದು ಹಾಕಲು ಚಳಿಗಾಲದಲ್ಲಿ ಮಾತ್ರ ಸಿಗುವ ಈ ಹಣ್ಣನ್ನು ಸೇವಿಸಿ !ಮಂದ ದೃಷ್ಟಿ ಮತ್ತೆ ಚುರುಕಾಗುವುದು
ಕಣ್ಣಿನ ಪೊರೆಗಳು ಸಾಮಾನ್ಯವಾಗಿ ಸ್ಪಷ್ಟ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಣ್ಣಿನ ಪೊರೆಯು ಕಣ್ಣಿನ ಮಸೂರದ ಮೇಲೆ ಬರುವ ಪೊರೆಯಾಗಿರುತ್ತದೆ.
ವಯಸ್ಸಾದಂತೆ, ದೃಷ್ಟಿ ಮಂದವಾಗುವುದು ಮತ್ತು ಕಣ್ಣಿನ ಪೊರೆ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಉದ್ಭವಿಸುತ್ತವೆ. ಕಣ್ಣಿನ ಪೊರೆ ಎದುರಾದರೆ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎನ್ನುವ ಶಿಫಾರಸ್ಸು ನೀಡಲಾಗುತ್ತದೆ.
ಈ ಪುಟ್ಟ ಹಣ್ಣನ್ನು ನಿತ್ಯ ಸೇವಿಸುವ ಮೂಲಕ ಕಣ್ಣಿನ ಪೊರೆ ಹೆಚ್ಚಾಗದಂತೆ ನೋಡಿಕೊಳ್ಳಬಹುದು. ಇದು ದೃಷ್ಟಿ ಮಂಜಾಗದಂತೆ ಕೂಡಾ ಕಾಪಾಡುತ್ತದೆ.
ಚಳಿಗಾಲದಲ್ಲಿ ಹೇರಳವಾಗಿ ಸಿಗುವ ನೆಲ್ಲಿಕಾಯಿ ಕಣ್ಣಿನ ಪೊರೆಗೆ ಪರಿಹಾರವಾಗಿ ಕೆಲಸ ಮಾಡಬಲ್ಲದು. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಎ ಉತ್ತಮ ದೃಷ್ಟಿ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ನೆಲ್ಲಿಕಾಯಿ ಕಣ್ಣಿನ ಪೊರೆಯನ್ನು ತಡೆಯುವುದಲ್ಲದೆ, ರಾತ್ರಿ ಕುರುಡುತನದ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ಪಷ್ಟ ಮತ್ತು ತೀಕ್ಷ್ಣವಾದ ದೃಷ್ಟಿ ಪಡೆಯುವುದು ಸಾಧ್ಯವಾಗುತ್ತದೆ.
ಕಣ್ಣಿನ ಪೊರೆ ಇದ್ದವರು ನಿತ್ಯ ಯಾವುದೇ ಸಮಯದಲ್ಲಿಯಾದರೂ ಒಂದು ನೆಲ್ಲಿಕಾಯಿ ತಿನ್ನುತ್ತಾ ಬಂದರೆ ಪೊರೆ ಹೆಚ್ಚು ಬೆಳೆಯುವುದಿಲ್ಲ. ಕಣ್ಣ ದೃಷ್ಟಿ ಮಂಜಾಗುವುದಿಲ್ಲ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.