ಆಜಾದಿ ಕಾ ಅಮೃತ್ ಮಹೋತ್ಸವ : ಏಕಾಂಗಿಯಾಗಿ 22000 ಕಿಮೀ. ಯಾತ್ರೆ ಮುಗಿಸಿದ ಕನ್ನಡತಿ
ಏಕಾಂಗಿಯಾಗಿ 22000 ಕಿಮೀ. ಯಾತ್ರೆ ಮುಗಿಸಿದ ಕನ್ನಡತಿ.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸವಿನೆನಪಿನಲ್ಲಿ ಕಾಸರಗೋಡು ಮೂಲದ ಮಂಗಳೂರಿನ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿನಿ ಅಮೃತಾ ಜೋಷಿ ಇದೇ ಆಗಸ್ಟ್ 10 ರಂದು ಬೆಳಿಗ್ಗೆ 10.30 ಗಂಟೆಗೆ ಡೊಂಗರಕೇರಿ ಕೆನರಾ ಹೈಸ್ಕೂಲಿಗೆ ಭೇಟಿ ನೀಡಲಿದ್ದಾರೆ.
ಇವರನ್ನು ಕೆನರಾ ಅಸೋಸಿಯೇಶನ್ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಗುತ್ತದೆ.
ಅಮೃತಾ ಜೋಷಿಯವರು ತಿರಂಗಾ ಯಾತ್ರಾ ಅಭಿಯಾನದ ಅಂಗವಾಗಿ ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶವ್ಯಾಪಿ 22000 ಕಿ.ಮೀ ಸಂಚರಿಸಿದ್ದಾರೆ.
ಬರ್ಮಾ, ಬಾಂಗ್ಲಾ, ನೇಪಾಳದ ಗಡಿಯಲ್ಲಿಯೂ ಸಂಚರಿಸಿ ಅಲ್ಲಿ ನಮ್ಮ ಭಾರತೀಯ ಸೈನಿಕರ ಸವಾಲಿನ ಪರಿಸ್ಥಿತಿಯನ್ನು ಕೂಡ ಕಣ್ಣಾರೆ ಕಂಡು ಬಂದಿದ್ದಾರೆ.
ರಾಜ್ಯದ ಸಾಂಸ್ಕೃತಿಕ ರಾಯಭಾರಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಅಮೃತಾ ಜೋಷಿಯವರನ್ನು ಸ್ವಾಗತಿಸಿ, ಅಭಿನಂದಿಸುವ ಕಾರ್ಯಕ್ರಮ ನಡೆಯಲಿದೆ.