Amruthadhaare Serial: ಅಮೃತಧಾರೆ ಸಿರೀಯಲ್ ಖಡಕ್‌ ನಟ ಜೈದೇವ್‌ ನಿಜಕ್ಕೂ ಯಾರು ಗೊತ್ತಾ? ಈತನ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

Thu, 08 Aug 2024-7:49 pm,

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರವಾಹಿ ಕಿರುತೆರೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಶುರುವಾದಾಗಿನಿಂದ ಇಲ್ಲಿಯವರೆಗೂ ಒಂದಿಷ್ಟು ಕ್ರೇಜ್‌ ಕಡಿಮೆ ಮಾಡಿಕೊಂಡಿಲ್ಲ..    

ಈ ಅಮೃತಧಾರೆ ಸಿರೀಯಲ್‌ನಲ್ಲಿ ಗೌತಮ್‌ ಹಾಗೂ ಭೂಮಿಕಾ ಕೆಮಿಸ್ಟ್ರಿ ವೀಕ್ಷಕರಿಗೆ ಸಖತ್‌ ಇಷ್ಟವಾಗಿದೆ ಎಂದರೇ ತಪ್ಪಾಗುವುದಿಲ್ಲ. ಈ ಇಬ್ಬರು ಅನುಭವಿ ಕಲಾವಿದರಿಂದ ಈ ಧಾರವಾಹಿ ಇನ್ನೂ ಹೆಚ್ಚು ಖ್ಯಾತಿ ಪಡೆದುಕೊಳ್ಳುತ್ತಿದೆ..     

ಅಮೃತಧಾರೆ ಸೀರಿಯಲ್‌ ಸದ್ಯ ಟಾಪ್‌ ಧಾರವಾಹಿಗಳಲ್ಲಿ ಒಂದಾಗಿದೆ.. ಇದರಲ್ಲಿ ಪ್ರತಿಯೊಂದು ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆಯನ್ನು ನೀಡಿದ್ದು.. ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ..    

ಅಮೃತಧಾರೆ ಸಿರೀಯಲ್‌ನಲ್ಲಿ ಮಲ್ಲಿ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡ ಜೈದೇವ್‌ ಅಲಿಯಾಸ್‌ ರಾಣವ್‌ ಗೌಡ ಸಾಕಷ್ಟು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ.. ಆದರೆ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದ್ದು ಅಮೃತಧಾರೆ ಧಾರವಾಹಿ ಎಂದರೇ ಅತಿಶಯೋಕ್ತಿಯಲ್ಲ..    

ವಿಶೇಷವಾಗಿ ನಟ ರಾಣವ್‌ ಗೌಡ ಸುಧಾರಾಣಿಯವರ ಜೊತೆ ಬಾಲನಟನಾಗಿ ಗುರುತಿಸಿಕೊಂಡಿದ್ದಾರೆ.. ಇವರು ಸದ್ಯ ಅಮೃತಧಾರೆಯಲ್ಲಿ ಮಲ್ಲಿಯ ಪತಿಯಾಗಿ ನೆಗೆಟಿವ್‌ ಶೇಡ್‌ನಲ್ಲಿ ನಟಿಸುತ್ತಿದ್ದಾರೆ..     

ಇತ್ತೀಚೆಗೆ ಜೈದೇವ್‌ ಪಾತ್ರ ಸಖತ್‌ ಹೈಲೈಟ್‌ ಆಗಿದ್ದು, ರಾಣವ್‌ ಗೌಡ ಅವರ ನಟನೆ ಕಂಡು ಕಿರುತೆರೆ ಪ್ರೇಕ್ಷಕರು ಶಾಕ್‌ ಆಗಿದ್ದಾರೆ.. ಅವರ ಅದ್ಭುತ ನ್ಯಾಚುರಲ್‌ ನಟನೆಗೆ ಬೆಂಕಿ ಬಿರುಗಾಳಿ.. ಕನ್ನಡಕ್ಕೆ ಒಬ್ಬ ಒಳ್ಳೆಯ ವಿಲನ್‌ ಸಿಕ್ಕನೆಂದು ಖುಷಿ ಪಡುತ್ತಿದ್ದಾರೆ..   

ಇದಲ್ಲದೇ ಈ ಜೈದೇವ್‌ ಪಾತ್ರ ನೆಗೆಟಿವ್‌ ಆಗಿದ್ದರೂ ಪಾತ್ರಧಾರಿ ರಾಣವ್‌ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.. ಅದರಲ್ಲೂ ಅತೀ ಹೆಚ್ಚು ಲೇಡಿ ಫ್ಯಾನ್ಸ್‌ಗಳೇ ಇದ್ದಾರೆ ಎಂದರೇ ಅತಿಶಯೋಕ್ತಿಯಲ್ಲ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link