ಅಮೃತಧಾರೆ ಸೀರಿಯಲ್ ಆನಂದ್ ಪತ್ನಿ ಯಾರು ಗೊತ್ತಾ? ಸಾವು ಬದುಕಿನ ಮಧ್ಯೆ ಹೋರಾಡಿದ್ದ ದಿಟ್ಟ ಮಹಿಳೆ!!
)
ಅಮೃತಧಾರೆ ಸಿರೀಯಲ್ ಸದ್ಯ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನವುಗಳ ಪೈಕಿ ಒಂದು.. ಈ ಧಾರವಾಹಿ ನೋಡಲು ಯಾವಾಗ ರಾತ್ರಿಯಾಗುತ್ತೋ ಎಂದು ಕಾಯುವವರೂ ಇದ್ದಾರೆ..
)
ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ಅಮೃತಧಾರೆಯಲ್ಲಿ ಸಿನಿರಂಗದ ಖ್ಯಾತ ನಟಿ ಛಾಯಾ ಸಿಂಗ್ ಹಾಗೂ ನಟ ರಾಜೇಶ್ ನಟರಂಗ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
)
ಈ ಸಿರೀಯಲ್‌ನಲ್ಲಿ ಗೌತಮ್ ಆಪ್ತ ಸ್ನೇಹಿತನಾಗಿ ನಟಿಸುತ್ತಿರುವ ಆನಂದ್ ಅವರ ನಿಜವಾದ ಹೆಸರೂ ಕೂಡ ಆನಂದ್.. ಈ ಮೊದಲು ಸಿಲ್ಲಿಲಲ್ಲಿ ಮೂಲಕ ಎಲ್ಲರನ್ನು ನಗಿಸಿದ್ದ ಇವರು ಈಗ ಅಮೃತಧಾರೆ ಮೂಲಕ ಎಲ್ಲರನ್ನು ನಗಿಸುವ ಒಂದೊಳ್ಳೆ ಪಾತ್ರವನ್ನು ಮಾಡುತ್ತಿದ್ದಾರೆ..
ಆನಂದ್ ಅವರ ವೈಯಕ್ತಿಕ ಜೀವನವನ್ನು ನೋಡುವುದಾದರೇ ಇವರ ಪತ್ನಿ ಹೆಸರು ಚೈತ್ರಾ.. ಈ ದಂಪತಿ ಜೋಡಿ ನಂಬರ್ ಒನ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು..
ಜೋಡಿ ನಂಬರ್ ಒನ್ ರಿಯಾಲಿಟಿ ಶೋನಲ್ಲಿ ಹೇಳಿಕೊಂಡಿರುವ ಪ್ರಕಾರ ಆನಂದ್ ಪತ್ನಿ ಚೈತ್ರಾ ಅವರು ದಪ್ಪಗಿದ್ದ ಕಾರಣ ಮಕ್ಕಳಾಗುವುದಿಲ್ಲ ಎಂದು ಅವರಿಬ್ಬರ ಮದುವೆಗೆ ಬೇಡ ಎಂದಿದ್ದರಂತೆ ಕುಟುಂಬಸ್ಥರು..
ಅದನ್ನೇಲ್ಲವನ್ನು ಮೀರಿ ಮದುವೆಯಾದ ಈ ಜೋಡಿಗೆ ಕೋರೋನಾ ಸಮಯದಲ್ಲಿ ಚೈತ್ರಾ ಅವರು ಸಾವು ಬದುಕಿನ ಮಧ್ಯೆ ಹೋರಾಡಿದ್ದರಂತೆ.. ಸದ್ಯ ಈ ದಂಪತಿಗೆ ಒಬ್ಬ ಮುದ್ದಾದ ಗಂಡು ಮಗನಿದ್ದಾನೆ.. ʻ