Amruthadhare serial: ಅಮೃತಧಾರೆ ಸಿರೀಯಲ್ ಮಲ್ಲಿ ನಿಜವಾದ ಹಿನ್ನಲೆ ಏನು ಗೊತ್ತೇ? ಈಕೆ ಬರೀ ನಟಿ ಮಾತ್ರವಲ್ಲ!!

Thu, 19 Sep 2024-7:42 pm,

ಜೀ ಕನ್ನಡದಲ್ಲಿ ಸಾಕಷ್ಟು ಧಾರವಾಹಿಗಳು ಪ್ರಸಾರವಾಗುತ್ತವೆ.. ಅದರಲ್ಲಿ ಕೆಲವು ಪ್ರೇಕ್ಷಕರಿಗೆ ಅಚ್ಚುಮೆಚ್ಚು... ಆ ಲಿಸ್ಟ್‌ನಲ್ಲಿ ಅಮೃತಧಾರೆಯೂ ಒಂದು.. ಈ ಧಾರವಾಹಿಯೂ ಕಿರುತೆರೆ ಪ್ರಿಯರ ನೆಚ್ಚಿನದ್ದಾಗಿದೆ..     

ಅಮೃತಧಾರೆ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ.. ಬಹುಭಾಷೆ ಸಿನಿಮಾಗಳಲ್ಲಿ ನಟಿಸಿರುವ ಛಾಯಾಸಿಂಗ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.. ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗಿದೆ ಎಂದರೇ ತಪ್ಪಾಗುವುದಿಲ್ಲ..    

ಈ ಅಮೃತಧಾರೆ ಧಾರವಾಹಿಯಲ್ಲಿ ಮಲ್ಲಿ ಎಂಬ ಪಾತ್ರವೂ ಇತ್ತೀಚೆಗೆ ಹೆಚ್ಚು ಮುನ್ನಲೆಗೆ ಬಂದಿದೆ.. ಮಲ್ಲಿಯಾಗಿ ನಟಿಸುತ್ತಿರುವ ರಾಧಾ ಭಾಗವತಿ ಅವರ ಹಿನ್ನಲೆ ಏನು? ಅವರ ನಿಜ ಜೀವನ ಹೇಗಿದೆ ಎನ್ನುವುದನ್ನು ಇದೀಗ ತಿಳಿಯೋಣ..    

ಮಲ್ಲಿ ಅಲಿಯಾಸ್‌ ರಾಧಾ ಭಗವತಿ ಅಮೃತಧಾರೆಗೂ ಮುನ್ನ ರಾಮಾಚಾರಿ ಸಿರೀಯಲ್‌ನಲ್ಲಿ ನಟಿಸಿದ್ದರು.. ರಾಮಾಚಾರಿಯ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡು ಜನಮನ ಸೆಳೆದಿದ್ದರು..     

ಸಿರೀಯಲ್‌ ಮಾತ್ರವಲ್ಲದೇ ಸಿನಿಮಾದಲ್ಲಿಯೂ ನಟನೆ ಮಾಡುತ್ತಿರುವ ರಾಧಾ ಭಗವತಿ ಹಿನ್ನಲೆ ಗಾಯಕಿಯೂ ಹೌದು.. ಹೀಗೆ ದೊಡ್ಡ ಕಲೆಯನ್ನು ಹೊಂದಿರುವ ಇವರು ನಟಿಸಿರುವ ಬಹುತೇಕ ಧಾರವಾಹಿಗಳು ಜನಪ್ರಿಯವಾಗಿವೆ.     

ಸದ್ಯ ನಟಿ ರಾಧಾ ಭಗವತಿ ಅಮೃತಧಾರೆಯಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಎಲ್ಲ ಮನ ಗೆದ್ದಿರುವುದಲ್ಲದೇ ಕಿರುತೆರೆ ಲೋಕದಲ್ಲಿ ಬಹುಬೇಡಿಕೆಯ ಕಲಾವಿದೆಯಾಗುತ್ತಿದ್ದಾರೆ..   

ಅಷ್ಟೇ ಅಲ್ಲ.. ಅಮೃತಧಾರೆ ಸಿರೀಯಲ್‌ನಲ್ಲಿ ಮಲ್ಲಿ ಪಾತ್ರವೂ ಅಷ್ಟೇ ಜನಪ್ರಿಯತೆ ಗಳಿಸಿದ್ದು, ಪ್ರೇಕ್ಷಕರು ಆ ಪಾತ್ರದ ಮುಗ್ಧತೆಗೆ ಬೆರಗಾಗಿದ್ದಾರೆ ಎನ್ನುವುದು ಅತಿಶಯೋಕ್ತಿಯಲ್ಲ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link