Amurthadhare Serial: ಅಮೃತಧಾರೆ ಆನಂದ್ ಪತ್ನಿ ಅಪರ್ಣ ರಿಯಲ್ ಪತಿ ಯಾರು ಗೊತ್ತಾ? ಇವರು ಕೂಡ ಫೇಮಸ್ ನಟ!!
![](https://kannada.cdn.zeenews.com/kannada/sites/default/files/2024/06/23/415705-amruthadhare-actress-swathi-1.jpg?im=FitAndFill=(500,286))
ನಟಿ ಸ್ವಾತಿ ಅಮೃಯವರ್ಷಿಣಿಯಲ್ಲಿ ವರ್ಷ ಪಾತ್ರಧಾರಿಯಾಗಿ ನಟಿಸಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು.. ನೆಗೆಟಿವ್ ಪಾತ್ರವಾದರೂ ಸೈ ಪಾಸಿಟಿವ್ ಪಾತ್ರವಾದರೂ ಸೈ ಎನ್ನುವಂತೆ ಅದ್ಭುತವಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದಾರೆ ಸ್ವಾತಿ..
![](https://kannada.cdn.zeenews.com/kannada/sites/default/files/2024/06/23/415704-amruthadhare-actress-swathi-5.jpg?im=FitAndFill=(500,286))
ಸ್ವಾತಿ ಅವರು ಸದ್ಯ ಅಮೃತಧಾರೆ ಸಿರೀಯಲ್‌ನಲ್ಲಿ ಆನಂದ್ ಪತ್ನಿ ಅಪರ್ಣಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.. ಹಾಗಾದ್ರೆ ಈ ಕಿರುತೆರೆ ಸುಂದರಿಯ ರಿಯಲ್ ಲೈಫ್ ಕಹಾನಿ ಹೇಗಿದೆ ಎನ್ನುವುದನ್ನು ಇದೀಗ ನೋಡೋಣ..
![](https://kannada.cdn.zeenews.com/kannada/sites/default/files/2024/06/23/415703-amruthadhare-actress-swathi-4.jpg?im=FitAndFill=(500,286))
ಅಪರ್ಣಾ ಅಲಿಯಾಸ್ ಸ್ವಾತಿ ಅವರು ತಮ್ಮ ಪಕ್ಕದ ಮನೆಯ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದಾರೆ.. ಇವರಿಬ್ಬರ ಪ್ರೀತಿ ಸುಮಾರು 24-25 ವರ್ಷಗಳದ್ದಂತೆ.. ಸಿರೀಯಲ್‌ನಲ್ಲಿ ಪತಿಯ ಕಾಲೆಳೆಯುತ್ತಾ, ಸಂಶಯಪಟ್ಟು ಕಿತ್ತಾಡುವಂತೆ ಸ್ವಾತಿ ರಿಯಲ್ ಲೈಫ್‌ನಲ್ಲೂ ತಮ್ಮ ಪತಿಯೊಂದಿಗೆ ಹಾಗೇ ಜಗಳವಾಡುತ್ತಾರಂತೆ.. ಈ ವಿಚಾರವನ್ನು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ..
ಇನ್ನು ನಟಿ ಸ್ವಾತಿ ಅವರ ಪತಿ ಹೆಸರು ಅನಿಲ್.. ಇವರು ಸಹ ನಟರಾಗಿದ್ದು, ಮೊದಲ ಬಾರಿಗೆ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಭಾಗವಹಿದ್ದರು.. ನಂತರ ಅನಿಲ್ ಸಹ ನಟನಯೆಲ್ಲಿ ಬ್ಯುಸಿಯಾಗಿದ್ದಾರೆ..
ಸಂದರ್ಶನದಲ್ಲಿ ಮಾತನಾಡಿದ ಈ ಜೋಟಿ ಈಗಿನ ಜೋಡಿಗಳಿಗೆ ನೀಡುವ ಅಡ್ವೈಸ್ ಎಂದರೇ ಎಷ್ಟೇ ಜಗಳ ಮನಸ್ಥಾಪಗಳು ಬಂದರೂ ಕುಳಿತು ಮಾತನಾಡಿ ಸರಿಪಡಿಸಿಕೊಳ್ಳಬೇಕು ಎನ್ನುವುದು..