ಭೂಮಿಯತ್ತ ನುಗ್ಗಿ ಬರುತ್ತಿದೆ ಸ್ಟೇಡಿಯಂ ಗಾತ್ರದ ಕ್ಷುದ್ರ ಗ್ರಹ
ಈ ಕ್ಷುದ್ರಗ್ರಹವು ಬಾಹ್ಯಾಕಾಶದಿಂದ ಗಂಟೆಗೆ 8 ಕಿಲೋಮೀಟರ್ ವೇಗದಲ್ಲಿ ಬರುತ್ತಿದೆ. ಈ ವೇಗವು ಬಹಳ ಹೆಚ್ಚಾಗಿದ್ದು, ಒಂದು ಗ್ರಹ ಅಥವಾ ವಸ್ತುವು ಕ್ಷುದ್ರಗ್ರಹದೊಂದಿಗೆ ಡಿಕ್ಕಿ ಹೊಡೆದರೆ, ಭೀಕರ ವಿನಾಶ ಸಂಭವಿಸಬಹುದು.
220 ಮೀಟರ್ ಅಗಲ ಅಂದರೆ ಚೀನಾದ ಬರ್ಡ್ಸ್ ನೆಸ್ಟ್ ಸ್ಟೇಡಿಯಂನಷ್ಟು ಅಗಲ ಇದರ ಗಾತ್ರ ಎನ್ನಲಾಗಿದೆ. ಈ ಕ್ಷುದ್ರಗ್ರಹವು ಭೂಮಿಯಿಂದ ಸುಮಾರು 2870847.607 ಕಿ.ಮೀ ದೂರದಿಂದ ಹೊರಹೊಮ್ಮುತ್ತದೆ. ಈ ಅಂತರವು ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 8 ಪಟ್ಟು ಹೆಚ್ಚಾಗಿದೆ.
ಡೈಲಿ ಸ್ಟಾರ್‌ನ ವರದಿಯ ಪ್ರಕಾರ, ಹೆಚ್ಚಿನ ಅಂತರದಿಂದಾಗಿ, ಈ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಈ ಕ್ಷುದ್ರಗ್ರಹವು ಹಾದುಹೋಗುವ ಕಕ್ಷೆಯನ್ನು ಅಪೊಲೊ ಎಂದು ಕರೆಯಲಾಗುತ್ತದೆ. ನಾಸಾ ಇದನ್ನು ಅಪಾಯಕಾರಿ ಕ್ಷುದ್ರಗ್ರಹಗಳ ವಿಭಾಗಕ್ಕೆ ಸೇರಿಸಿದೆ. ಅದಕ್ಕಾಗಿಯೇ ನಿರಂತರವಾಗಿ ಇದರ ಮೇಲೆ ನಿಗಾ ಇಡಲಾಗಿದೆ.
ಮಾಹಿತಿಯ ಪ್ರಕಾರ, ಈ ಹಿಂದೆ ಭೂಮಿಯ ಕಕ್ಷೆಯ ಮೂಲಕ 2020 PMZ ಕ್ಷುದ್ರ ಗ್ರಹ ಹಾದುಹೋಗಿತ್ತು. ಇದು ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಬ್ರಿಡ್ಜ್ ನಷ್ಟು ಉದ್ದವಾಗಿತ್ತು.
ಮಾಧ್ಯಮ ವರದಿಗಳ ಪ್ರಕಾರ, ಸೂರ್ಯನ ಶಾಖದಿಂದಾಗಿ ಬಾಹ್ಯಾಕಾಶದಲ್ಲಿ ಚಲಿಸುವ ಕಲ್ಲು ತನ್ನ ಮಾರ್ಗವನ್ನು ಸ್ವಲ್ಪ ಬದಲಾಯಿಸಿದಾಗ, ಅದನ್ನು ಯಾರ್ಕೊವಸ್ಕಿ ಪರಿಣಾಮ ಎಂದು ಕರೆಯಲಾಗುತ್ತದೆ. ದಿಕ್ಕು ಬದಲಾದಂತೆ ಕ್ಷುದ್ರಗ್ರಹದ ವೇಗವೂ ಬದಲಾಗುತ್ತದೆ. ಕೆಲವೊಮ್ಮೆ ಅದು ಕಡಿಮೆಯಾಗುತ್ತದೆ. ಕೆಲವೊಮ್ಮೆ ಬಹಳ ವೇಗವಾಗಿರುತ್ತದೆ.