ಹಳೆಯ 1 ರೂಪಾಯಿ ನಾಣ್ಯವನ್ನು ಈ ಸೈಟ್‌ನಲ್ಲಿ ಮಾರಾಟ ಮಾಡಿದ್ರೆ 10 ಲಕ್ಷ ರೂಪಾಯಿ ಪಡೆಯಬಹುದು! ಕಾಯಿನ್‌ ಮಾರಾಟ ಮಾಡುವ ಸೈಟ್ ಇಲ್ಲಿದೆ

Wed, 06 Nov 2024-5:37 pm,

ಹಣೆಯ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸುವುದು ಅನೇಕರಿಗೆ ಹವ್ಯಾಸವಿದೆ. ಆದರೆ ಈ ಹವ್ಯಾಸವೇ ಲಕ್ಷ-ಕೋಟಿ ಸಂಪಾದನೆಗೆ ಕಾರಣವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಇತ್ತೀಚೆಗೆ ಆನ್‌ಲೈನ್ ಹರಾಜಿನಲ್ಲಿ ರೂ. 1 ಅಪರೂಪದ ನಾಣ್ಯ ರೂ. 10 ಕೋಟಿಗೆ ಮಾರಾಟವಾಗಿತ್ತು. ಅಂತೆಯೇ ಹಳೆಯ 1, 2, 5 ರೂ. ನಾಣ್ಯ ಅಥವಾ ನೋಟುಗಳಿಗೆ ಭಾರೀ ಬೇಡಿಕೆಯಿದೆ.

 

ಈ ಕೆಲವು ಅಪರೂಪದ, ಹಳೆಯ ನಾಣ್ಯಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ನೀವು ರೂ.10 ಲಕ್ಷದವರೆಗೆ ಗಳಿಸಬಹುದು. ಆದರೆ ಅವುಗಳಿಗೆ ಕೆಲ ಷರತ್ತುಗಳು ಅನ್ವಯವಾಗುತ್ತದೆ. ನಿಮ್ಮ ಬಳಿ 1885ನೇ ಇಸವಿಯಲ್ಲಿ ಬಿಡುಗಡೆಯಾದ ಒಂದು ರೂಪಾಯಿ ನಾಣ್ಯವಿದ್ದರೆ ಅದನ್ನು ಕೆಲವೊಂದು ಸೈಟ್‌ ಮೂಲಕ ಮಾರಾಟ ಮಾಡಬಹುದು.

 

Coinbazaar ನಂತಹ ಹಲವು ವೆಬ್‌ಸೈಟ್‌ಗಳು ಹಳೆಯ ಮತ್ತು ಅಪರೂಪದ ನಾಣ್ಯಗಳನ್ನು ಮಾರಾಟ ಮಾಡುತ್ತವೆ. ಇಲ್ಲಿ ಬಳಕೆದಾರರು ಹೆಸರು, ವಿಳಾಸ, ಇಮೇಲ್, ಫೋನ್ ಸಂಖ್ಯೆ ಮುಂತಾದ ಮೂಲಭೂತ ವಿವರಗಳನ್ನು ನಮೂದಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು.

 

1885ರ ನಾಣ್ಯಗಳನ್ನು ಹೊರತುಪಡಿಸಿ, ಕೆಲವು ವಿಶೇಷ ಸಂದರ್ಭಗಳಲ್ಲಿ ಇತರ ವರ್ಷಗಳಲ್ಲಿ ತಯಾರಿಸಲಾದ ನಾಣ್ಯಗಳಿಗೆ ಬೇಡಿಕೆಯಿದೆ. ಇವುಗಳನ್ನು coinbazzar.com ನಲ್ಲಿ ಪರಿಶೀಲಿಸಬಹುದು.

 

ಅಂದಹಾಗೆ 1992 ರಿಂದ ಬಳಸುತ್ತಿರುವ ಒಂದು ರೂಪಾಯಿ ನಾಣ್ಯವನ್ನು ಸಿದ್ಧಪಡಿಸಲು, ಭಾರತ ಸರ್ಕಾರಕ್ಕೆ ಆ ರೂಪಾಯಿಯ ಮೌಲ್ಯಕ್ಕಿಂತ ಸ್ವಲ್ಪ ಹೆಚ್ಚು ವೆಚ್ಚವಾಗುತ್ತದೆ. 2018 ರ ವರದಿಯ ಪ್ರಕಾರ, ಒಂದು ರೂಪಾಯಿ ನಾಣ್ಯದ ಉತ್ಪಾದನೆಗೆ ಸುಮಾರು ರೂ.1.11 ವೆಚ್ಚವಾಗುತ್ತದೆ. ಇದು ನಾಣ್ಯದ ಮೂಲ ಮೌಲ್ಯಕ್ಕಿಂತ ಸ್ವಲ್ಪ ಹೆಚ್ಚು. ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಲ್ಪಟ್ಟಿದ್ದು, ಈ ನಾಣ್ಯವು 21.93 ಮಿಮೀ ವ್ಯಾಸವನ್ನು, 1.45 ಮಿಮೀ ದಪ್ಪವನ್ನು ಮತ್ತು 3.76 ಗ್ರಾಂ ತೂಕವನ್ನು ಹೊಂದಿದೆ.

 

ಸೂಚನೆ: ಇಲ್ಲಿ ನೀಡಲಾದ ವರದಿ ಕೇವಲ ಮಾಹಿತಿ ನೀಡುವುದಕಷ್ಟೇ ಸೀಮಿತವಾಗಿ. ಇದರ ಜವಾಬ್ದಾರಿಯನ್ನು ಜೀ ಕನ್ನಡ ನ್ಯೂಸ್‌ ವಹಿಸಿಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link