`ಯಾರ ಗೌರವವನ್ನು ಪಡೆಯಲು ಇಲ್ಲಿ ಬಂದಿಲ್ಲ...` ಹಣ, ಅಂತಸ್ತು ಬಂದ್ಮೇಲೆ ದುರಾಹಂಕಾರದ ಹೇಳಿಕೆ ನೀಡಿದ್ರಾ ವಿರಾಟ್ ಕೊಹ್ಲಿ!?
ಭಾರತದ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ, ಪಾಡ್‌ಕ್ಯಾಸ್ಟ್ ಒಂದರಲ್ಲಿ ವಿರಾಟ್ ಕೊಹ್ಲಿ ಕುರಿತು ನೀಡಿರುವ ಹೇಳಿಕೆ ಸದ್ಯ ವೈರಲ್ ಆಗುತ್ತಿದೆ.
'ಖ್ಯಾತಿ ಮತ್ತು ಶಕ್ತಿ'ಯಿಂದಾಗಿ ಕೊಹ್ಲಿ ಬದಲಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರಿಂದ ಹಿಡಿದು, ಐಪಿಎಲ್ 2023ರ ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಹ ಆಟಗಾರರನ್ನು ನಿಂದಿಸಿರುವ ಬಗ್ಗೆ ನೀಡಿರುವ ಹೇಳಿಕೆವರೆಗೆ ಮಾತನಾಡಿದ ಮಿಶ್ರಾ, ಕೊಹ್ಲಿಯ ಮೇಲೆ ನೇರ ದಾಳಿ ನಡೆಸಿದ್ದಾರೆ.
ಇಶಾಂತ್ ಶರ್ಮಾ ಅವರಂತಹ ಇತರ ಕೆಲವು ಮಾಜಿ ಸಹ ಆಟಗಾರರ ಜೊತೆ ವಿರಾಟ್ ಇನ್ನೂ ಅತ್ಯುತ್ತಮ ಒಡನಾಟವನ್ನು ಹೊಂದಿದ್ದಾರೆ ಎಂದಿದ್ದಾರೆ.
ಇನ್ನೊಂದೆಡೆ ಈ ವಿಷಯ ಚರ್ಚೆಯಲ್ಲಿರುವಾಗಲೇ, 2014 ರಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ವಿರಾಟ್ ನೀಡಿರುವ ಹೇಳಿಕೆಯೊಂದರ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯನ್ನರಿಗೆ, ವಿಶೇಷವಾಗಿ ಮಿಚೆಲ್ ಜಾನ್ಸನ್ ವಿರಾಟ್ ಕೊಹ್ಲಿಯನ್ನು ನಿರಂತರ ಟಾರ್ಗೆಟ್ ಮಾಡಿದ್ದರು. ಈ ಬಗ್ಗೆ ಇವರಿಬ್ಬರ ನಡುವೆ ಮಾತಿನ ಯುದ್ಧ ನಡೆದಿತ್ತು.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ವಿರಾಟ್, "ನಾನು ಕ್ರಿಕೆಟ್ ಆಡಲು ಇಲ್ಲಿ ಬಂದಿದ್ದೇನೆ, ಯಾರ ಗೌರವವನ್ನು ಪಡೆಯಲು ಅಲ್ಲ. ನಾನು ರನ್ ಗಳಿಸುವವರೆಗೆ ಸಂತೋಷವಾಗಿರುತ್ತೇನೆ. ನನ್ನ್ ಈ ವರ್ತನೆಯನ್ನು ನೀವು ಇಷ್ಟಪಟ್ಟರೆ ಒಳ್ಳೆಯದು" ಎಂದು ಹೇಳಿದ್ದಾರೆ.
"ನಾನು ಒಬ್ಬರನ್ನು ಗೌರವಿಸುತ್ತೇನೆ ಅಥವಾ ನನ್ನನ್ನು ಯಾರು ಗೌರವಿಸುತ್ತಾರೆ ಎಂಬುದರ ಬಗ್ಗೆ ನಾನು ನಿಜವಾಗಿಯೂ ಕಾಳಜಿ ವಹಿಸಲ್ಲ. ನಾನು ಕೆಲವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿರುತ್ತೇನೆ. ಆದರೆ ಯಾರೋ ತನ್ನ ಬಾಯಿಗೆ ಬಂದದ್ದನ್ನು ಹೇಳಿದರೆ, ಅವರನ್ನು ನಾನು ಗೌರವಿಸುವುದಿಲ್ಲ" ಎಂದಿದ್ದಾರೆ.
ಯೂಟ್ಯೂಬ್ ಶೋ 'ಅನ್‌ಪ್ಲಗ್ಡ್' ನಲ್ಲಿ ಶುಭಂಕರ್ ಅವರೊಂದಿಗಿನ ಚಾಟ್‌ನಲ್ಲಿ ಅಮಿತ್ ಮಿಶ್ರಾ ಹೀಗೆ ಹೇಳಿದ್ದರು: "ನಾನು ವಿರಾಟ್ ಬಹಳಷ್ಟು ಬದಲಾಗಿರುವುದನ್ನು ನೋಡಿದ್ದೇನೆ. ನಾವು ಮಾತನಾಡುವುದನ್ನು ಬಹುತೇಕ ನಿಲ್ಲಿಸಿದ್ದೇವೆ. ಖ್ಯಾತಿ ಮತ್ತು ಅಧಿಕಾರವನ್ನು ಪಡೆದಾಗ, ಜನರು ತಮ್ಮ ಬಳಿಗೆ ಬರುತ್ತಿದ್ದಾರೆ ಎಂದು ಅವರು ಭಾವಿಸುತ್ತಾರೆ. ನಾನು ಚೀಕು 14 ವರ್ಷದವನಾಗಿದ್ದಾಗಿನಿಂದ ಪರಿಚಯ. ಅವನು ಪ್ರತಿ ರಾತ್ರಿಯೂ ಪಿಜ್ಜಾ ತಿನ್ನುತ್ತಿದ್ದ. ಆದರೆ ನನಗೆ ತಿಳಿದಿರುವ ಚೀಕು ಮತ್ತು ಈಗಿನ ವಿರಾಟ್ ಕೊಹ್ಲಿಯಲ್ಲಿ ಬಹಳ ವ್ಯತ್ಯಾಸವಿದೆ" ಎಂದು ಹೇಳಿದ್ದಾರೆ.