ಅನಂತ್ ಅಂಬಾನಿ ಧರಿಸುವ ಈ ಗಡಿಯಾರದ ವಿಶೇಷತೆ ಏನು ಗೊತ್ತಾ..? 50 ಕೋಟಿ ಬೆಲೆ ಬಾಳುವ ಈ ವಾಚ್‌ನಲ್ಲಿ ಅಂತಹದ್ದೇನಿದೆ..?
Anant ambani Richard milley watch: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಎಲ್ಲರಿಗೂ ಚಿರ ಪರಿಚಿತರು. ಆಗಸ್ಟ್‌ನಲ್ಲಿ ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅನಂತ್ ಅಂಬಾನಿ ಹೆಸರು ವಿಸ್ವದೆಲ್ಲೆಡೆ ತಮ್ಮ ಮದುವೆಯ ಅದ್ದೂರಿ ಆಚರಣೆಯ ಕಾರಣ ಫುಲ್ ವೈರಲ್ ಆಗಿತ್ತು.
ಅನಂತ್ ಅಂಬಾನಿ ಅವರ ದುಬಾರಿ ಹಾಗೂ ಐಶಾರಾಮಿ ಜೀವನಶೈಲಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಅನಂತ್ ಅಂಬಾನಿ ಅವರಿಗೆ ಗೈಗಡಿಯಾರದ ಮೇಲೆ ವಿಶೇಷ ಪ್ರೀತಿ, ಇವರ ಬಳಿ ಇರುವ ಕೈ ಗಡಿಯಾರಗಳ ಕಲೆಕ್ಷನ್ ಬೆಲೆ ಬರೋಬ್ಬರಿ 300 ಕೋಟಿ.
ಹೌದು, ಅನಂತ್ ಅಂಬಾನಿ ಅವರ ಬಳಿ ಸಾಕಷ್ಟು ವಾಚ್ ಕಲೆಕ್ಷನ್ ಇದೆ, ಅವರ ಬಳಿ ಲಿಮಿಟೆಡ್ ಎಡಿಷನ್‌ನ ಕೈ ಗಡಿಯಾರಗಳು ಇವೆ ಎಂಬುದು ನಿಮಗೆ ತಿಳಿದಿದೆ ಆದರೂ, ಅವರ ಬಳಿ ಇರುವ ಒಂದು ವಾಚ್ ಅವರ ಪರ್ಸನೆಲ್ ಫೇವರೆಟ್ ಅಂತಲೇ ಹೇಳಬಹುದು.
ಅಷ್ಟಕ್ಕೂ ಅವರ ಪೇವರೆಟ್ ವಾಚ್‌ನ ಬೆಲೆ ಎಷ್ಟು ಅಂತ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರೆಂಟಿ, ಅವರು ಧರಿಸುವ ಈ ವಿಶೇಷ ವಾಚ್‌ನ ಬೆಲೆ ಬರೋಬ್ಬರಿ 50 ಕೋಟಿ ರೂ. ಅಷ್ಟಕ್ಕೂ ಇಷ್ಟು ಬೆಲೆ ಬಾಳುವಂತಹದ್ದು ಈ ವಾಚ್‌ನಲ್ಲಿ ಏನಿದೆ ಎಂದು ನೀವು ಯೋಚಿಸುತ್ತಿರಬಹುದು.
ರಿಚರ್ಡ್ ಮಿಲ್ಲೆ ಕಂಪನಿಯ ಗಡಿಯಾರ ಇದಾಗಿದ್ದು, ಇದು ಲಿಮಿಟೆಡ್ ವರ್ಷನ್ ವಾಚ್. ಈವರೆಗೂ ಈ ವಾಚ್‌ನ 18 ಯೂನಿಟ್‌ಗಳನಷ್ಟೆ ಕಂಪನಿ ತಯಾರಿಸಿದೆ.