ಅನಂತ್‌- ರಾಧಿಕಾ ಹಳದಿ ಸಮಾರಂಭದಲ್ಲಿ ಬಾಲಿವುಡ್‌ ಸ್ಟಾರ್‌ ಆಕ್ಟರ್ಸ್‌

Wed, 10 Jul 2024-11:38 am,

ಅನಂತ್‌ ಹಾಗೂ ರಾಧಿಕಾ ಜೋಡಿಯ ಮದುವೆ ಶೀಘ್ರವೇ ನೆರವೇರಲಿದೆ. ಇತ್ತೀಚೆಗಷ್ಟೆ ಅಂಬಾನಿ ಕುಟುಂಬ ಅದ್ದೂರಿ ಸಂಗೀತ ಕಾರ್ಯಕ್ರಮ ಆಐೋಜಿಸಿದ್ದರು. ಈ ಸಮಾರಂಭಕ್ಕೆ ಬಾಲಿವುಡ್‌ ತಾರಾ ಗಣ ಹಾಗೂ ಕ್ರಿಕೆಟ್‌ ಸ್ಟಾರ್ಸ್‌ ಹಾಜರ್‌ ಆಗಿದ್ದರು. ಇದೀಗ ಹಳದಿ ಸಮಾರಂಭ ನಡೆಯುತ್ತಿದ್ದು ಹಲವಾರು ಬಾಲಿವುಡ್‌ ಸ್ಟಾರ್ಸ್‌ ಈ ಸಮಾರಂಭದಲ್ಲಿ ಭಾಗವಹಿಸಿದ್ರು.  

ಸೈಫ್‌ ಅಲಿ ಖಾನ್‌ ಪುತ್ರಿ ಹಾಗೂ ಬಾಲಿವುಡ್‌ ನಟಿಯಾಗಿರುವ ಸಾರಾ ಅಲಿ ಖಾನ್‌ ಕೆಂಬಣ್ಣದ ಲೆಹಂಗಾ ಧರಿಸಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು, ಅವರ ಟ್ರೆಡಿಷನಲ್‌ ಲುಕ್‌ಗೆ ನೋಡುಗರು ಫಿದಾ ಆದರು.  

ಬಾಲಿವುಡ್‌ ಸ್ಟಾರ್‌ ಹೀರೋಹಿನ್‌ ಅನನ್ಯಾ ಪಾಂಡೆ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು, ಪೀಚ್‌ ಬಣ್ಣದ ಅನಾರ್ಕಲಿ ಕುರ್ತಾ, ದೊಡ್ಡ ಕಿವಿ ಓಲೆ, ಬೈ ತಲೆ ಬೊಟ್ಟು ತೊಟ್ಟು ಸುಲ್ತಾನನ ರಾಣಿಯಂತೆ ಕಂಡರು.  

ನಟಿ ಶ್ರೀದೇವಿ ಅವರ ಮಗಳಾಗಿರುವ ಜಾನ್ಹಾವಿ ಕಪೂರ್‌ ಕೂಡ ಹಳದಿ ಸೀರೆಯನ್ನುಟ್ಟು ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಿಂಪಲ್‌ ಮೇಕಪ್‌ ಲೂಸ್‌ ಹೇರ್ಸ್‌ನ ಈ ಲುಕ್‌ ಕ್ಲಾಸಿಯಾಗಿದ್ದು, ಅಬ್ಬಬ್ಬಾ ಎಂತಾ ಚೆಲುವೆ..! ಅನ್ನುವಂತಿತ್ತು.  

ಸ್ಟಾರ್ಸ್‌ನೊಂದಿಗೆ ಒಳ್ಳೆಯ ಗೆಳತನ ಹೊಂದಿರುವ ಓರ್ರಿ ಕೂಡ ಈ ಸಮಾರಂಭದಲ್ಲಿ ಕಾಣಿಸಿಕೊಂಡರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link