ಅಬ್ಬಬ್ಬಾ..!ಹೊಳೆದದ್ದೆಲ್ಲಾ ಚಿನ್ನ: ಬಂಗಾರದ ಪೈಜಾಮ ತೊಟ್ಟು ಮಿಂಚಿದ ಅನಂತ್‌ ಅಂಬಾನಿ..

Sat, 06 Jul 2024-10:59 am,

Ananth Amabani: ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೋಡಿ ಸಂದೀಪ್ ಖೋಸ್ಲಾ ಅವರಿಂದ ವಿನ್ಯಾಸ ಮಾಡಲ್ಪಟ್ಟ ವಸ್ತ್ರಗಳನ್ನು ತೊಟ್ಟು ಮಿಂಚಿದರು. ಇದರ ವಿಶೇಷತೆ ಏನು ಅಂದರೆ, ಅನಂತ್‌ ಅವರ ಪೈಜಾಮ ನಿಜವಾದ ಚಿನ್ನದಿಂದ ಮಾಡಲಾಗಿದ್ದು, ರಾಧಿಕಾ ಮರ್ಚೆಂಟ್‌ ಅವರ ಲೆಹಂಗಾ  ಸ್ವರೋವ್ಸ್ಕಿ ಹರಳುಗಳಿಂದ ವಿನ್ಯಸಗೊಳಿಸಲಾಗಿತ್ತು.  

ಶೀಘ್ರದಲ್ಲೇ ವಿವಾಹವಾಗಲಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಂಪತಿಗಳಿಗಾಗಿ ಅಂಬಾನಿ ಕುಟುಂಬವು ಭವ್ಯವಾದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಮಾರಂಭದಲ್ಲಿ ಸ್ನೇಹಿತರು, ಕುಟುಂಬ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.   

ಶುಕ್ರವಾರ ರಾತ್ರಿ ನಡೆದ ಸಂಗೀತ ಸಮಾರಂಭದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಭುತವಾದ ಉಡುಪುಗಳನ್ನು ಧರಿಸಿ ಮಿಂಚಿದರು. ಅಬು ಜಾನಿ ಸಂದೀಪ್ ಖೋಸ್ಲಾ ಅವರ ಇನ್‌ಸ್ಟಾಗ್ರಾಮ್‌ನ ಪೋಸ್ಟ್‌ನ ಪ್ರಕಾರ, ಅನಂತ್ ಅವರ ಜಾಕೆಟ್ ನಿಜವಾದ ಚಿನ್ನದಿಂದ ಮಾಡಲ್ಪಟ್ಟಿದೆ. ರಾಧಿಕಾ ಅವರ ಉಡುಗೆಯಲ್ಲಿ ಹೊಳೆಯುವ ಸ್ವರೋವ್ಸ್ಕಿ ಹರಳುಗಳನ್ನು ಸೇರಿಸಲಾಗಿದೆ.  

ಅನಂತ್ ಕಪ್ಪು ಮತ್ತು ಚಿನ್ನದ ಬಣ್ಣ ಸಂಯೋಜನೆಯ ಬಂದ್ ಗಾಲಾ ಜಾಕೆಟ್ ಜೊತೆಗೆ ಸ್ಪ್ಲಿಟ್ ಮ್ಯಾಂಡರಿನ್ ಕಾಲರ್, ಪೂರ್ಣ ಉದ್ದದ ತೋಳುಗಳುಳ್ಳ, ನಿಜವಾದ ಚಿನ್ನದ ಹೂವಿನ ಅಲಂಕಾರಗಳು ಹೊಂದಿರುವ ಜಾಕೆಟ್‌ ಧರಿಸಿದ್ದರು.   

ರಾಧಿಕಾ ಲೈಟ್ ಬ್ರೌನ್ ಮತ್ತು ಗೋಲ್ಡನ್ ಲೆಹೆಂಗಾ ಸೆಟ್ ಸ್ವರೋವ್ಸ್ಕಿ ಹರಳುಗಳಿಂದ ಅಲಂಕರಿಸಲ್ಪಟ್ಟ ಆಫ್-ಶೋಲ್ಡರ್ ಬ್ಲೌಸ್, ಕ್ರಾಪ್ಡ್ ಹೆಮ್ ವಿನ್ಯಾಸವನ್ನು ಒಳಗೊಂಡಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link