ಈ ಯುವಕನಿಗಾಗಿ ಆಂಕರ್ ಅನುಶ್ರೀ ಜೀವನ ಮುಡಿಪು !ನಿರೂಪಕಿಯ ಯಶಸ್ಸಿನಲ್ಲಿ ಈತನದ್ದೂ ಇದೆ ಬಹು ಪಾಲು

Mon, 22 Apr 2024-6:00 pm,

ನಿರೂಪಕಿ ಅನುಶ್ರೀ  ಯಶಸ್ಸಿನ ವಿಚಾರ ಎಲ್ಲರಿಗೂ ತಿಳಿದೇ ಇದೆ. ಕಡು ಕಷ್ಟದಲ್ಲಿ ಬೆಳೆದ ಈ ಹುಡುಗಿ ಇಂದು ಇನ್ನೊಬ್ಬರಿಗೆ ಸಹಾಯ ಮಾಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. 

ಹೌದು, ಸಿಗ್ನಲ್ ನಲ್ಲಿ ಬತ್ತಿ ಮಾರಿ ಜೀವನ ನಡೆಸುವ ಅಜ್ಜಿಯ ಮನೆ ಬಾಡಿಗೆಯನ್ನು ಜೀವನ  ಪರ್ಯಂತ ನೋಡಿಕೊಳ್ಳುವುದಾಗಿ ಮಹಾ ನಟಿ ವೇದಿಕೆಯಲ್ಲಿಯೇ ಅನುಶ್ರೀ ಘೋಷಿಸಿದ್ದಾರೆ.   

ಅನುಶ್ರೀಗೆ ತನ್ನ ತಾಯಿ ಎಂದರೆ ಸರ್ವಸ್ವ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ತಾಯಿಗಾಗಿ ಏನು ಬೇಕಾದರೂ ಮಾಡಲು ಸಿದ್ದ ಎನ್ನುವ ಹೆಮ್ಮೆಯ ಪುತ್ರಿ ಈಕೆ. ತಾಯಿಯಂತೆ ಮುಖ್ಯವಾದ ಮತ್ತೊಬ್ಬ ವ್ಯಕ್ತಿ ಇವರ ಬದುಕಿನಲ್ಲಿದ್ದಾರೆ. 

ನಾವಿಲ್ಲಿ ಹೇಳುತ್ತಿರುವುದು ಅನುಶ್ರೀ ಸಹೋದರ ಅಭಿಜಿತ್ ಬಗ್ಗೆ.ಅಭಿಜಿತ್ ಸಹೋದರ ಅನ್ನುವುದಕ್ಕಿಂತ ಹೆಚ್ಚು ಬೆಸ್ಟ್ ಫ್ರೆಂಡ್ ಎನ್ನುವುದನ್ನು ಅನುಶ್ರೀ ಅನೇಕ ಕಾರ್ಯಕ್ರಮಗಳಲ್ಲಿ ಅಭಿಜಿತ್ ಬಗ್ಗೆ ಹೇಳಿಕೊಂಡಿದ್ದಾರೆ.    

ತನ್ನ ವೃತ್ತಿ ಬದುಕಿನ ಆರಂಭದಲ್ಲಿ ತಾನು ಬೆಂಗಳೂರಿನಲ್ಲಿದ್ದಾಗ ತಾಯಿಯನ್ನು ಕಣ್ಣ ರೆಪ್ಪೆಯಂತೆ ನೋಡಿಕೊಂಡಿದ್ದಾನೆ.ಹಾಗಾಗಿ ತಾನು ತನ್ನ ಕೆಲಸದತ್ತ ಗಮನ ಹರಿಸುವುದು ಸಾಧ್ಯವಾಯಿತು ಎನ್ನುವುದನ್ನು ಕೂಡಾ ಅನುಶ್ರೀಯೇ ಹೇಳಿಕೊಂಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link