ಇವನೇ ನನ್ನ ಕನಸು ಎನ್ನುತ್ತಾ ತಮ್ಮನನ್ನು ಪರಿಚಯಿಸಿದ ಅನುಶ್ರೀ! ಹೇಗಿದ್ದಾರೆ ನೋಡಿ ಮಾತಿನ ಮಲ್ಲಿಯ ಸಹೋದರ... ಯಾವ ಹೀರೋಗೂ ಕಮ್ಮಿಯಿಲ್ಲ

Mon, 28 Oct 2024-4:29 pm,

ಅನುಶ್ರೀ… ಕನ್ನಡದ ಹೆಸರಾಂತ ನಟಿ, ನಿರೂಪಕಿ. ಅಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರಲ್ಲಿ ಇವರೂ ಒಬ್ಬರು. ನಾವಿಂದು ಈ ವರದಿಯ ಮೂಲಕ ಅನುಶ್ರೀ ಬಗ್ಗೆ ಅಲ್ಲ, ಅವರ ಸಹೋದರನ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಗೆದ್ದಿರುವ ಮಾತಿನ ಮಲ್ಲಿ ಅನುಶ್ರೀ ಡಾ. ಪುನೀತ್ ರಾಜ್’ಕುಮಾರ್ ಅವರ ಅಪ್ಪಟ ಅಭಿಮಾನಿ.

 

ಇನ್ನು ಇವರ ಆರಂಭಿಕ ಜೀವನದ ಬಗ್ಗೆ ನೋಡುವುದಾದರೆ, ಮಂಗಳೂರಿನ ಸುರತ್ಕಲ್‌’ನಲ್ಲಿ ಸಂಪತ್ ಮತ್ತು ಶಶಿಕಲಾ ದಂಪತಿಯ ಪುತ್ರಿಯಾಗಿ ಜನಿಸಿರುವ ಅನುಶ್ರೀ ಇಂದು ಕರುನಾಡೇ ಮೆಚ್ಚುವಂತಹ ಸಾಧನೆ ಮಾಡುತ್ತಿದ್ದಾರೆ.

 

ಅನುಶ್ರೀ ಅವರ ತಮ್ಮನ ಹೆಸರು ಅಭಿಜಿತ್. ಈ ಹಿಂದೆ ಕಾರ್ಯಕ್ರಮವೊಂದಲ್ಲಿ ತಮ್ಮನನ್ನು ನೆನೆದು ಕಣ್ಣೀರು ಹಾಕಿದ್ದ ಅನುಶ್ರೀ 'ನನ್ನ ತಮ್ಮ ನನಗೆ ಫ್ರೆಂಡ್ ಇದ್ದಂತೆ. ಇವನೇ ನನ್ನ ಕನಸು. 13 ವರ್ಷ ತಾಯಿಯನ್ನು ಒಂದು ಚೂರು ನೋವಾಗದಂತೆ ನೋಡಿಕೊಂಡಿದ್ದಾನೆ. ಜೀವನದಲ್ಲಿ ನನಗೆ ಏನೇನು ಮಾಡೋಕ್ಕೆ ಆಗಲಿಲ್ಲ ಅದೆಲ್ಲವನ್ನೂ ಅವನು ಮಾಡುತ್ತಿದ್ದಾನೆ'' ಎಂದು ಹೇಳಿದ್ದರು.

 

ಸುವರ್ಣ ಫಿಲ್ಮ್ ಅವಾರ್ಡ್ಸ್, ಫಿಲ್ಮ್‌ ಫೇರ್ ಅವಾರ್ಡ್ಸ್, ಟಿವಿ9 ಫಿಲ್ಮ್ ಅವಾರ್ಡ್ಸ್, ಝೀ ಮ್ಯೂಸಿಕ್ ಅವಾರ್ಡ್ಸ್, ಸೈಮಾ ಅವಾರ್ಡ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌’ನಂತಹ ಹಲವಾರು ಸ್ಟೇಜ್ ಶೋಗಳನ್ನು ನಿರೂಪಣೆ ಮಾಡಿರುವ ಅನುಶ್ರೀ, ಕಾಮಿಡಿ ಕಿಲಾಡಿಗಳು, ಟ್ವೆಂಟಿ-ಟ್ವೆಂಟಿ ಕಾಮಿಡಿ ಕಪ್, ಕುಣಿಯೋಣ ಬಾರ ಹೀಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.

 

ಬೆಂಕಿಪಟ್ಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಅನುಶ್ರೀ, Best Debut Actress ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇದರ ಜೊತೆಗೆ, 2011 ರಲ್ಲಿ ಮುರಳಿ ಮೀಟ್ಸ್ ಮೀರಾ ಚಿತ್ರಕ್ಕಾಗಿ ಅತ್ಯುತ್ತಮ ಡಬ್ಬಿಂಗ್ ಕಲಾವಿದೆ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link