ಕಾಣದ ಪ್ರೀತಿಗೆ ಒಲಿಯಿತು ಹೃದಯ.. ಕೊನೆಗೂ ಮದುವೆಗೆ ಒಪ್ಪಿಕೊಂಡ್ರು ಆಂಕರ್‌ ಅನುಶ್ರೀ! ಇವರೇ ನೋಡಿ ಹುಡ್ಗ!!

Sun, 20 Oct 2024-7:26 am,

ಕನ್ನಡಿಗರ ಫೇವರೆಟ್‌.. ನಂಬರ್‌ ಒನ್‌ ನಿರೂಪಕಿ ಅನುಶ್ರೀ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಎದುರಿಸಿ ಈ ಮಟ್ಟಕ್ಕೆ ಬಂದಿದ್ದಾರೆ.. ಒಂದು ರೀತಿಯಲ್ಲಿ ಹೇಳುವುದಾದರೇ ಆ ಕಷ್ಟಗಳೇ ಆಕೆಯ ಇಂದಿನ ಈ ಸ್ಥಾನಕ್ಕೆ ಸ್ಫೂರ್ತಿ ಎಂದರೇ ತಪ್ಪಾಗುವುದಿಲ್ಲ..   

ಹೌದು ಏನೂ ಇಲ್ಲ ಎನ್ನುವುದರಿಂದ ಶುರುಮಾಡಿದ ಜೀವನವನ್ನು ಸಾಕು ಎನ್ನುವವಷ್ಟರ ಮಟ್ಟಿಗೆ ಬೆಳೆದು ನಿಲ್ಲುವುದು ಸಾಮಾನ್ಯವಲ್ಲ.. ಅದು ಹೆಣ್ಣುಮಗಳಾಗಿ ಇಂತಹ ಸಾಧನೆ ಮಾಡಿದ ಅವರು ಎಲ್ಲರಿಗೂ ಮಾದರಿ ಎಂದರೇ ಅತಿಶಯೋಕ್ತಿಯಲ್ಲ..  

ಇನ್ನು ಈ ಮಂಗಳೂರು ಚೆಲುವೆ ಇಷ್ಟು ವಯಸ್ಸಾದ್ರು ಯಾಕೆ ಮದುವೆಯಾಗಿಲ್ಲ ಅನ್ನೋದು ಅವರ ಅಭಿಮಾನಿಗಳ ಪ್ರಶ್ನೆ.. ಅನುಶ್ರೀ ಯಾವಾಗ? ಯಾರನ್ನು? ಮದುವೆಯಾಗುತ್ತಾರೆ ಎಂದು ಜನ ಕಾಯುತ್ತಾ ಕುಳಿತಿದ್ದಾರೆ.. ಆದರೆ ಇದೀಗ ಅನುಶ್ರೀ ಅವರ ಮೇಲಿನ ಪ್ರೀತಿಗೆ ಒಬ್ಬ ವ್ಯಕ್ತಿ ಲವ್‌ ಲೆಟರ್‌ ಬರೆದಿದ್ದಾರೆ..   

ವಾಸ್ತವವಾಗಿ ಡಾನ್ಸ್‌ ಕರ್ನಾಟಕ ಡಾನ್ಸ್‌ ರಿಯಾಲಿಟಿ ಶೋನಲ್ಲೇ ಅನುಶ್ರೀ ಅವರ ಅಭಿಮಾನಿಯೊಬ್ಬರು ಅವರ ಮೇಲಿನ ಪ್ರೀತಿಯನ್ನು ಲೆಟರ್‌ ಮೂಲಕ ವ್ಯಕ್ತ ಪಡಿಸಿದ್ದಾರೆ.. ಆ ಪತ್ರದಲ್ಲಿ "ಪ್ರೀತಿಯ ಅನುಶ್ರೀ ಅವರೇ ನಿಮ್ಮ ಪ್ರತಿ ಸಂಬಂಧದ ಭಾಗವಾಗಿ.. ಪತಿಯಾಗಿ.. ಹೆಚ್ಚಾಗಿ ಗೆಳೆಯ ಸ್ಥಾನವನ್ನು ತುಂಬಿ ನಿಮಗೆ ಹೃದಯಪೂರ್ವಕವಾದ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ..  

ಇಷ್ಟೇ ಅಲ್ಲ.. ಲೆಟರ್‌ ಬರೆದ ವ್ಯಕ್ತಿಗೆ ಕಾಲ್‌ ಕೂಡ ಮಾಡಲಾಗುತ್ತೆ.. ಆಗ ಅನುಶ್ರೀ ಮಾತಾಡುತ್ತಾರೆ.. ಆ ವ್ಯಕ್ತಿಗೆ ನಿಮಗೆ ಮದುವೆಯಾಗಿದೆಯಾ ಎಂದು ಕೇಳುತ್ತಾರೆ.. ಅವರು ಇಲ್ಲ ನೀವೆ ಮದುವೆಯಾಗುತ್ತೀರಾ ಎಂದು ನೇರವಾಗಿಯೇ ಎಲ್ಲರ ಮುಂದೆ ಪ್ರಪೋಸ್‌ ಮಾಡಿದ್ದಾರೆ.. ಇದರೊಂದಿಗೆ ಆ ವ್ಯಕ್ತಿ ಹೇಳಿದ ಕವನಕ್ಕೂ ಅನುಶ್ರೀ ಬೆರಗಾಗಿ.. ಇಷ್ಟು ಅಭಿಮಾನಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.   

ಸದ್ಯ ಅನುಶ್ರೀ ಅಭಿಮಾನಿಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಇದನ್ನು ನೋಡಿ ಈಗಲಾದರೂ ಮದುವೆ ಆಗಿ ಮೇಡಂ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಆದ್ರೆ ಅನು ಯಾವಾಗ ಮದುವೆ ಆಗ್ತಾರೆ ಅನ್ನೋದಕ್ಕೆ ಮಾತ್ರ ಅವರೇ ಉತ್ತರ ನೀಡಬೇಕಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link