ಹಸೆಮಣೆ ಏರಲಿರುವ ಅನುಶ್ರೀ ಓದಿದ್ದೇನು.. ಇವರ ನಿಜವಾದ ತಂದೆ ಯಾರು ?
ಅನುಶ್ರೀ ಕನ್ನಡದ ಖ್ಯಾತ ನಿರೂಪಕಿ. ಚಟಪಟ ಅಂತ ಅರುಳು ಹುರಿದಂತೆ ಮಾತನಾಡುವ ಅನುಶ್ರೀ ಓದಿದ್ದೇನು? ಇವರು ಓದಿದ ಕಾಲೇಜ್ ಯಾವುದು ಎಲ್ಲ ಮಾಹಿತಿ ಇಲ್ಲಿ ತಿಳಿಯೋಣ....
ಆಂಕರ್ ಅನುಶ್ರೀ ಸದ್ಯ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅನುಶ್ರೀ ಮದುವೆ ಆಗ್ತೀನಿ ಅಂತ ಹೇಳಿದ್ದೇ ತಡ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಮುಂದಿನ ವರ್ಷವೇ ಅನುಶ್ರೀ ಮದುವೆ ಆಗಲಿದ್ದಾರೆ ಎಂದಿದ್ದಾರೆ.
ಮಂಗಳೂರು ಚೆಲುವೆ ಅನುಶ್ರೀ ನಟಿಯಾಗಿ ಸಹ ಗುರುತಿಸಿಕೊಂಡವರು. ಬಿಗ್ ಬಾಸ್ ಗೂ ಬಂದಿದ್ದ ಅನುಶ್ರೀ ತಮ್ಮ ವ್ಯಕ್ತಿತ್ವದಿಂದಲೂ ಜನರ ಮೆಚ್ಚುಗೆ ಗಳಿಸಿದವರು.
ಅನುಶ್ರೀ 25 ಜನವರಿ 1988 ರಂದು ಜನಿಸಿದರು. ಮೂಲತಃ ಮಂಗಳೂರಿನವರಾಗಿರುವ ಅನುಶ್ರೀ ತಂದೆ ಹೆಸರು ಸಂಪತ್ ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಅನುಶ್ರೀ ತಾಯಿ ಶಶಿಕಲಾ.
ಅನುಶ್ರೀ ಐದನೇ ತರಗತಿಯವರೆಗೆ ಸೇಂಟ್ ಥಾಮಸ್ ಬೆಂಗಳೂರಿನಲ್ಲಿ ಮತ್ತು ನಂತರ ಮಂಗಳೂರಿನ ನಾರಾಯಣ ಗುರು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು.
ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅನುಶ್ರೀ ಪ್ರಿ-ಯೂನಿವರ್ಸಿಟಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಬಳಿಕ ಬೆಂಗಳೂರಿಗೆ ಬಂದ ಅನುಶ್ರೀ ದೂರದರ್ಶನ ಕಾರ್ಯಕ್ರಮಗಳನ್ನು ನಡೆಸಿಕೊಡಲು ಆರಂಭಿಸಿದರು.
ಕನ್ನಡದಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡು ಸ್ಟಾರ್ ಡಮ್ ಪಡೆದರು. ಒಂದು ಎಪಿಸೋಡ್‌ಗೆ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. (ಈ ಎಲ್ಲ ಮಾಹಿತಿಯೂ ವರದಿಗಳನ್ನು ಆಧರಿಸಿ ಬರೆದಿದ್ದು, ಯಾವುದು ಅಧಿಕೃತವಲ್ಲ)