ವಯಸ್ಸು 36 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ‘ಆ’ ವ್ಯಕ್ತಿ: ಕೊನೆಗೂ ಸತ್ಯ ಬಿಚ್ಚಿಟ್ಟ ಆಂಕರ್ ಅನುಶ್ರೀ
ಅನುಶ್ರೀ ಎಂದಾಕ್ಷಣ ನೆನೆಪಾಗೋದು ಮಾತು, ಅರ್ಥಬದ್ಧ ನಿರೂಪಣೆ. ಲಕ್ಷಾಂತರ ಅಭಿಮಾನಿಗಳ ಮನಗೆದ್ದರುವ ಆಂಕರ್ ಅನುಶ್ರೀಗೆ ಸದ್ಯ ಅಭಿಮಾನಿಗಳೆಲ್ಲಾ ಕೇಳೋದು ಒಂದೇ ಪ್ರಶ್ನೆ, ಅದೇನೆಂದರೆ ‘ಮದುವೆ ಯಾವಾಗ?’
ಒಂದೇ ಪ್ರಶ್ನೆಯನ್ನ ಕೇಳಿ ಕೇಳಿ ಸುಸ್ತಾದ ಅನುಶ್ರೀ, ಬೇಸರ ವ್ಯಕ್ತಪಡಿಸಿದ್ದೂ ಇದೆ. ಆದ್ರೆ ಇದೀಗ ತಮ್ಮ ಮದುವೆಯ ಬಗ್ಗೆ ಹೇಳಿಕೆ ನೀಡಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಯಸ್ಸು ಇಷ್ಟಾದರೂ ಮದುವೆ ಇನ್ನೂ ಯಾಕೆ ಆಗಿಲ್ಲ ಎನ್ನುವುದೇ ಅನುಶ್ರೀ ಫ್ಯಾನ್ಸ್ ಪ್ರಶ್ನೆ. ಅಂತೂ ಇಂತೂ ಅಭಿಮಾನಿಗಳಿಗೆ ಇವರನ್ನು ಮದುವೆ ಮಾಡಿಸದೆ ಸಮಾಧಾನವೇ ಇಲ್ಲ ಅನಿಸುತ್ತದೆ.
ಇದೀಗ ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಕುರಿತು ಓಪನ್ ಹೇಳಿಕೆ ನೀಡಿರುವುದು ಕಂಡುಬಂದಿದೆ. “ನಿಜವಾಗಿಯೂ ನನಗೆ ಮದುವೆಯಾಗೋಕೆ ಇಷ್ಟವಿಲ್ಲ. ನಾನು ಮದುವೆ ಮಟೀರಿಯಲ್ ಗರ್ಲ್ ಅಲ್ಲ. ಇದನ್ನು ನನಗೆ ಜ್ಞಾನೋದಯ ಮಾಡಿಸಿದ್ದು ಅರುಣ್ ಸಾಗರ್” ಎಂದು ಹೇಳಿದ್ದಾರೆ.
“ಒಂದು ಬಾರಿ ನನ್ನ ಬರ್ತ್ ಡೇ ದಿನ ವಿಷ್ ಮಾಡಲು ಕರೆ ಮಾಡಿದ್ರು. ಆಗ ಹುಟ್ಟುಹಬ್ಬದ ಶುಭಾಶಯಗಳು ಪುಟ್ಟಿ. ನಿನ್ನ ಜೀವನದ ಎಲ್ಲಾ ಕನಸುಗಳು ನನಸಾಗಲಿ. ಬೇಗ ಮದುವೆಯಾಗಿ ಒಂದು ಒಳ್ಳೆಯ ಜೀವನವನ್ನು ಕಂಡುಕೋ ಅಂತ ಹೇಳಿದ್ರು. ಆದ್ರೆ ಅದರ ಜೊತೆಗೆ ‘ಇಷ್ಟವಿದ್ದರೆ ಮಾತ್ರ’ ಅಂತ ಸೇರಿಸಿದ್ರು”.
“ಅವರ ಆ ಕೊನೆಯ ಮಾತು ಕೇಳಿ ನನಗೆ ಜ್ಞಾನೋದಯ ಆಯಿತು. ಜೀವನದಲ್ಲಿ ಮದುವೆಯಾಗಬೇಕೆಂದರೆ ಒಳ್ಳೆಯ ಗೆಳೆಯ ಸಿಗಬೇಕು. ಈಗ ಅಂಥವರು ಎಲ್ಲಿ ಇರ್ತಾರೆ” ಎಂದಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.