Anchor Anushree: ಹಸೆಮಣೆ ಏರಲು ರೆಡಿಯಾದ ಆಂಕರ್ ಅನುಶ್ರೀ ಮನೆ ನೋಡಿದ್ದೀರಾ? ಅರಮನೆಗಿಂತ ಕಡಿಮೆಯಿಲ್ಲ!
ನಟಿ ಕಮ್ ಆಂಕರ್ ಅನುಶ್ರೀ ತಮ್ಮ ಚಟಪಟ ಮಾತಿನ ಮೂಲಕವೇ ಸಾಕಷ್ಟು ಜನರ ಮನ ಗೆದ್ದಿದ್ದಾರೆ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮ ಅಪೂರ್ಣವೆನ್ನುವಷ್ಟರ ಮಟ್ಟಿಗೆ ಕ್ರೇಜ್ ಪಡೆದುಕೊಂಡಿದ್ದಾರೆ.. ಇಂದು ನಾವು ಈ ಮಂಗಳೂರು ಚೆಲುವೆಯ ಮನೆ ಹೇಗಿದೆ ಎನ್ನುವುದನ್ನು ನೋಡೋಣ..
ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಸ್ಟಾರ್ ಫೀಮೇಲ್ ಆಂಕರ್ ಎಂದರೇ ಅದು ಅನುಶ್ರೀ.. ಜೀ ಕನ್ನಡದಲ್ಲಿ ಮೂಡಿಬರುವ ಹಲವು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಾ.. ಹಲವು ಸ್ಯಾಂಡಲ್‌ವುಡ್ ಈವೆಂಟ್‌ಗಳನ್ನು ನಡೆಸಿಕೊಡುತ್ತಾರೆ..
ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿಯೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅನುಶ್ರೀ ಪದವಿ ಮುಗಿಸುತ್ತಿದ್ದಂತೆ ದೂರದರ್ಶನದಲ್ಲಿ ಕೆಲಸಕ್ಕೆ ಸೇರಿಕೊಂಡರು.. ಅಂದು ಅಷ್ಟೇಲ್ಲ ಕಷ್ಟ ನೋಡಿದ ಈ ಚೆಲುವೆ ಇಂದು ಜನಪ್ರಿಯ ನಿರೂಪಕಿಯಾಗಿ ಕನ್ನಡಿಗರ ಹೆಮ್ಮೆಯಾಗಿದ್ದಾರೆ..
ಮೂಲತಃ ಮಂಗಳೂರಿನವರಾದ ಅನುಶ್ರೀ ತುಳು ಕುಟುಂಬದಲ್ಲಿ ಜನಿಸಿದರು.. ಆದರೆ ಇವರು ಓದಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ.. ಓದು ಮುಗಿಯುತ್ತಿದ್ದಂತೆ ಕೆಲಸ ಟೆಲಿ ಅಂತ್ಯಾಕ್ಷರಿ ಕಾರ್ಯಕ್ರಮದದಿಂದ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟರು.. ನಂತರ ಹಲವು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾ ಇಂದು ಪ್ರತಿಯೊಬ್ಬರ ಮನೆಮಗಳಾಗಿದ್ದಾರೆ..
ಜೀವನದಲ್ಲಿ ಸಾಕಷ್ಟು ನೋವು, ಕಷ್ಟಗಳನ್ನು ಎದುರಿಸಿ ಒಂದು ಹಂತಕ್ಕೆ ಬಂದಿರುವ ಅನುಶ್ರೀ ಇಂದು ಯಶಸ್ವಿ ಹೆಣ್ಣುಮಗಳಾಗಿದ್ದಾರೆ.. ಇವರ ಮನೆಯ ಕೆಲವು ಪೋಟೋಗಳು ಇಲ್ಲಿವೆ ನೋಡಿ.