ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?
ಸ್ಯಾಂಡಲ್‌ವುಡ್ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ತಮ್ಮ ಮದುವೆಯ ಬಗ್ಗೆ ಸ್ವತಃ ಅನುಶ್ರೀ ಅವರೇ ಹೇಳಿಕೆ ನೀಡಿದ್ದಾರೆ. ಹಸೆಮಣೆ ಏರಲು ರೆಡಿಯಾದ ಅನುಶ್ರೀ ಎಷ್ಟು ಕೋಟಿ ಆಸ್ತಿ ಹೊಂದಿದ್ದಾರೆ ಗೊತ್ತಾ?
ಕನ್ನಡದಲ್ಲಿ ಪಟ ಪಟ ಅಂತಾ ಮಾತನಾಡುತ್ತ ಎಲ್ಲರ ಮನಸೆಳೆಯುವಂತೆ ನಿರೂಪಣೆ ಮಾಡುವ ಆಂಕರ್ ಅನುಶ್ರೀ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಅನುಶ್ರೀ ಅವರು ಇಷ್ಟು ವಯಸ್ಸಾದರೂ ಮದುವೆ ಯಾಕೆ ಆಗಿಲ್ಲ ಎಂಬುದು ಅವರ ಫ್ಯಾನ್ಸ್ ಬೇಸರವಾಗಿತ್ತು. ಅನುಶ್ರೀ ಈಗ ಮುಂದಿನ ವರ್ಷ ಮಾರ್ಚ್‌ನಲ್ಲಿ ಮದುವೆ ಆಗುವುದಾಗಿ ಹೇಳಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಆಂಕರ್ ಅನುಶ್ರೀ ಪ್ರೀತಿ ಮಾಡುವ ಹುಡುಗನ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ತಮಗೆ ಇಷ್ಟುದಿನ ಮದುವೆ ಆಗುವ ಮನಸ್ಸು ಇರಲಿಲ್ಲ. ಆದ್ರೆ ಈಗ ಮದುವೆ ಆಗಬೇಕು ಎನಿಸಿದೆ ಎಂದಿದ್ದಾರೆ.
ಕನ್ನಡದಲ್ಲಿ ಅನುಶ್ರೀ ಹತ್ತಾರು ವರ್ಷಗಳಿಂದಲೂ ನಿರೂಪಕಿಯಾಗಿದ್ದಾರೆ. ಸದ್ಯ ಒಂದು ಎಪಿಸೋಡ್‌ಗೆ ಅನುಶ್ರೀ ಸಂಭಾವನೆ ಒಂದು ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.
ಅನುಶ್ರೀ ಕಷ್ಟಪಟ್ಟು ದುಡಿದು ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ ಎಂದು ಸಹ ಹೇಳಲಾಗುತ್ತದೆ. ಐಷಾರಾಮಿ ಮನೆ ಮತ್ತು ಕಾರನ್ನು ಅನುಶ್ರೀ ಹೊಂದಿದ್ದಾರೆ ಎನ್ನಲಾಗುತ್ತದೆ.
ಈ ಸ್ಟಾರ್ ನಿರೂಪಕಿ ಅನುಶ್ರೀ ಒಟ್ಟು ಆಸ್ತಿ ಸುಮಾರು 50 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಆದರೆ ಅನುಶ್ರೀ ಅಧಿಕೃತವಾಗಿ ತಮ್ಮ ಆಸ್ತಿಯ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ.