ʼಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆʼ ಫೋಟೋ ಶೇರ್ ಮಾಡಿ ಹಿಂಗ್ಯಾಕಂದ್ರು ಆಂಕರ್ ಅನುಶ್ರೀ! ಯಾರಿಗಾಗಿ ʼಆʼ ಪೋಸ್ಟ್?!
ಆಂಕರ್ ಅನುಶ್ರೀ ನಿರೂಪಣೆಗೆ ಪ್ರತ್ಯೇಕ ಅಭಿಮಾನಿಗಳ ಬಳಗವೇ ಇದೆ.. ಚಟಪಟ ಅಂತ ಮಾತನಾಡುವ ಮೂಲಕವೇ ಎಲ್ಲರನ್ನು ಸೆಳೆಯುವ ಈ ಮಂಗಳೂರು ಚೆಲುವೆ ಸ್ಟಾರ್ ನಟಿಯರ ರೇಂಜ್‌ಗೆ ನೇಮ್ ಫೇಮ್ ಪಡೆದುಕೊಂಡಿದ್ದಾರೆ..
ಆದರೆ ಅನುಶ್ರೀ ಇನ್ನು ಯಾಕೆ ಮದುವೆಯಾಗಿಲ್ಲ ಅನ್ನೋದೆ ಕೆಲವರ ಪ್ರಶ್ನೆ ಈ ವಿಚಾರವಾಗಿ ಅವರು ಎಷ್ಟು ಭಾರಿ ಪ್ರತಿಕ್ರಿಯಿಸಿದರೂ ಅಭಿಮಾನಿಗಳ ಗೊಂದಲ ಮಾತ್ರ ಇನ್ನೂ ಹಾಗೇ ಇದೆ..
ಇನ್ನು ನಿರೂಪಕಿ ಅನುಶ್ರೀ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.. ಆಗ್ಗಾಗೆ ಪೋಟೋ.. ರೀಲ್ಸ್‌ಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ..
ಆದರೆ ಇತ್ತೀಚೆಗೆ ನಿರೂಪಕಿ ಅನುಶ್ರೀ ಹಂಚಿಕೊಂಡಿರುವ ಪೋಸ್ಟ್ ಎಲ್ಲರಲ್ಲೂ ಕುತುಹಲ ಮೂಡಿಸಿದೆ ಎಂದರೇ ತಪ್ಪಾಗುವುದಿಲ್ಲ.. ಅದರಲ್ಲೂ ಆ ಪೋಸ್ಟ್‌ಗೆ ಅನು ಹಾಕಿರುವ ಲೈನ್ಸ್ ಮಾತ್ರ ಯಾರನ್ನೋ ಟಾರ್ಗೆಟ್ ಮಾಡಿ ಹೇಳಿರುವ ರೀತಿಯೇ ಇದೆ..
ನಿನ್ನೆಯಷ್ಟೇ ಪೋಸ್ಟ್ ಶೇರ್ ಮಾಡಿರುವ ಅನುಶ್ರೀ ಅದರಲ್ಲಿ ಕಪ್ಪು ಬಣ್ಣದ ಸೂಟ್ ಧರಿಸಿ ಪೋಸ್ ಕೊಟ್ಟಿದ್ದಾರೆ.. ಇಲ್ಲಿ ಈ ಪೋಟೋಗಳಿಗಿಂತ ಅವರು ಅದಕ್ಕೆ ನೀಡಿರುವ ಕ್ಯಾಪ್ಷನ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ..
ಹೌದು ಅನುಶ್ರೀ ಶೇರ್ ಮಾಡಿರುವ ಪೋಸ್ಟ್ ಕೆಳಗೆ "ಏನಾದ್ರೂ ಹೇಳಿ.. ಏನೋ ಮಾಡಿ.. ಈ ಕಾಲ್ ಎಳೆಯೋರು ಎಲ್ಲೆಡೆ ಇದ್ದೆ ಇರ್ತಾರೆ!! ಅವರೆಲ್ಲರಿಗೂ ಕಾಲವೇ ಉತ್ತರ ಕೊಡುತ್ತೆ ನಾವ್ ಯಾಕೆ ಚಿಂತೆ ಮಾಡೋಣ!! JUST SMILE and Stay Happy.. ಎಂದು ಬರೆದುಕೊಂಡಿದ್ದಾರೆ..
ಜಿರೋದಿಂದ ಜೀವನವನ್ನು ಸ್ಟಾರ್ಟ್ ಮಾಡಿದ ಅನುಶ್ರೀ ತಮ್ಮ ಏಳಿಗೆಯ ಹಾದಿಯಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ.. ಸಾಕಷ್ಟು ಕಷ್ಟ, ಟೀಕೆಗಳನ್ನು ಈ ದೊಡ್ಡ ಮಟ್ಟಕ್ಕೆ ಬಂದುನಿಂತಿದ್ದಾರೆ.. ಸದ್ಯ ಅವರ ಕಾಲೆಳೆಯೋರಿಗೆ ಸರಿಯಾಗಿ ಉತ್ತರ ನೀಡಿದ್ದಾರೆ ಅನುಶ್ರೀ..