ಜೀ ಕನ್ನಡ ವೇದಿಕೆಯಲ್ಲೇ ಅನುಶ್ರೀ ಎಂಗೇಜ್ಮೆಂಟ್ ಫೋಟೋ... ಕೊನೆಗೂ ಮದುವೆ ಡೇಟ್ ಅನೌನ್ಸ್ ಮಾಡಿದ ಕರುನಾಡ ಮನೆಮಗಳು! ಇವ್ರೇ ನೋಡಿ ಆ ಲಕ್ಕಿ ಬಾಯ್!
ಕನ್ನಡದ ಹೆಸರಾಂತ ನಿರೂಪಕಿ ಮತ್ತು ನಟಿ ಆಂಕರ್ ಅನುಶ್ರೀ ಅವರ ಮದುವೆ ವಿಚಾರ ಆಗಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಆದರೆ ಇದಕ್ಕೆಲ್ಲಾ ಹೆಚ್ಚು ತಲೆಕೆಡಿಸಿಕೊಳ್ಳದ ಅನುಶ್ರೀ, ಸುದ್ದಿಗಳನ್ನು ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ಇದೀಗ ತಮ್ಮ ಮದುವೆಯ ಬಗ್ಗೆ ಸ್ವತಃ ಅವರೇ ಜೀ ಕನ್ನಡ ವೇದಿಕೆಯಲ್ಲಿ ಹೇಳಿಕೆ ನೀಡಿದ್ದು, ವರ್ಷ ರಿವೀಲ್ ಮಾಡಿದ್ದಾರೆ. ಜೊತೆಗೆ ಹುಡುಗನ ಬಗ್ಗೆಯೂ ಮಾತನಾಡಿದ್ದಾರೆ.
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅನುಶ್ರೀ ಬಳಿ, ಅಕುಲ್ ಬಾಲಾಜಿ ಅವರು ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಾಚುತ್ತಲೇ ಅನುಶ್ರೀ ಉತ್ತರ ನೀಡಿದ್ದು, ಏನಂದಿದ್ದಾರೆ ಎಂದು ಮುಂದೆ ತಿಳಿಯೋಣ.
"ಇಡೀ ಭಾರತವೇ ಈಗ ಕೇಳುತ್ತಿರುವ ಪ್ರಶ್ನೆ ಏನಂದ್ರೆ ಅನುಶ್ರೀ ಮದುವೆ ಯಾವಾಗ? ಈಗ ಎಲ್‌ಇಡಿ ಮೇಲೆ ಬರ್ತಿದೆ ಅನುಶ್ರೀ ಅವರ ಎಂಗೇಜ್ಮೆಂಟ್ ಫೋಟೋ.. ನಿನಗೆ ಇದು ಸರ್ಪೈಸ್ ಅಲ್ವಾ!" ಎಂದು ವೇದಿಕೆ ಮೇಲೆ ಅಕುಲ್ ಬಾಲಾಜಿ ಅವ್ರು ಅನುಶ್ರೀ ಬಳಿ ಕೇಳಿದ್ದಾರೆ. ಇದಕ್ಕೆ ಮೌನವಾಗಿ ನಾಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಮತ್ತೆ ಮಾತನಾಡಿದ ಅಕುಲ್, "ನಮ್ಮ ವೇದಿಕೆಗೆ ಅನುಶ್ರೀ ಅವರನ್ನು ಮದುವೆಯಾಗಲಿರುವ ಲಕ್ಕಿ ಬಾಯ್ ಬರ್ತಿದ್ದಾರೆ" ಎಂದು ಹೇಳಿ ಎಲ್ ಇಡಿ ಕಡೆ ತೋರಿಸಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಬರದೇ ಇದ್ದಾಗ, ಮತ್ತೆ ಅನುಶ್ರೀ ಕಾಲೆಳೆಯಲು ಮುಂದಾದ ಅಕುಲ್, ಅನುಶ್ರೀ ಅವರೇ ಆತನನ್ನು ಇಲ್ಲಿಗೆ ಬರಬೇಡ ಎಂದು ಹೇಳಿದ್ದಾರೆ... ಅದ್ಕೆ ಈ ಸೆಗ್ಮೆಂಟ್‌ಗೆ ಬಂದಿಲ್ಲ. ಈಗ ನಾವು ನಿಮ್ಮ ಪ್ರೈವಸಿಗೆ ಗೌರವ ಕೊಟ್ಟು ಈ ವಿಷಯವನ್ನು ತೋರಿಸಿಲ್ಲ" ಎಂದು ಅಕುಲ್ ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಅನುಶ್ರೀ ಅವರೇ ಸ್ವತಃ ಮಾತನಾಡಿದ್ದು, "ನನ್ನ ಮದುವೆ ಚಿಂತೆ, ನನ್ನ ಮನೆಯವರಿಗಿಂತ ಜಾಸ್ತಿ ಯೂಟ್ಯೂಬ್ ಅವರಿಗೇ ಜಾಸ್ತಿ ಇದೆ. ಪ್ರತೀ ವಾರ ಯಾರೆಲ್ಲಾ ಸಿಂಗಲ್ ಇದ್ದಾರೆ, ಅವ್ರ ಜೊತೆ ಎಲ್ಲಾ ಮದುವೆ ಮಾಡಿಸಿದ್ರು,ಅದಕ್ಕೆಲ್ಲಾ ಒಂದು ಟೈಂ ಇರುತ್ತೆ, ಒಳ್ಳೆ ಬಾಳಸಂಗಾತಿ ಬರಬೇಕು" ಎಂದಿದ್ದಾರೆ.
"ಮದುವೆ ಆಗೋದಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ನಾನು ಮನಸು ಮಾಡ್ಬೇಕಿತ್ತು, ಆದ್ರೆ ಇಷ್ಟು ವರ್ಷಗಳ ಕಾಲ ಮನಸು ಮಾಡಿರ್ಲಿಲ್ಲ. ಈಗ ಆ ಮನಸ್ಸಾಗಿದೆ. ಹೀಗಾಗಿ ಮುಂದಿನ ವರ್ಷ ನಾನು ಮದುವೆಯಾಗಿ ನಿಮ್ಮೆಲ್ಲರ ಮುಂದೆ ಬರುವಂತಾಗಲಿ ಅಂತಾ ಬೇಡಿಕೊಳ್ಳುತ್ತೇನೆ" ಎಂದು ಸ್ವತಃ ಅನುಶ್ರೀ ಅವರೇ ಹೇಳಿದ್ದಾರೆ.
ಒಟ್ಟಾರೆ ಇದುವರೆಗೆ ಎಲ್ಲರಲ್ಲೂ ಕಾಡುತ್ತಿದ್ದ ಪ್ರಶ್ನೆಗೆ ಅನುಶ್ರೀ ಅವರೇ ಉತ್ತರ ನೀಡಿದ್ದಾರೆ, ಇನ್ನು ಕರುನಾಡ ಮನೆಮಗಳ ಕೈಹಿಡಿಯಲಿರುವ ಆ ಲಕ್ಕಿ ಬಾಯ್ ಯಾರೆಂಬುದು ತಿಳಿದುಬರಬೇಕಷ್ಟೇ.