ಮದುವೆ ದಿನಾಂಕ ಘೋಷಿಸಿದ ಅನುಶ್ರೀ !ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿರೂಪಕಿ
ಅನುಶ್ರೀ ಎಂದ ತಕ್ಷಣ ಅಭಿಮಾನಿಗಳನ್ನು ಕಾಡುವ ಏಕೈಕ ಪ್ರಶ್ನೆ ಮದುವೆ ಯಾವಾಗ? ನಿರೂಪಕಿ ಹೋದಲ್ಲಿ ಬಂದಲ್ಲಿ ಆಕೆಯ ಮುಂದೆ ಇದೇ ಪ್ರಶ್ನೆಯನ್ನು ಮುಂದಿಡುತ್ತಿದ್ದರು.
ಮದುವೆ ಬಗ್ಗೆ ಬಹಳ ಸ್ಪಷ್ಟತೆ ಹೊಂದಿರುವ ಅನುಶ್ರೀ ತಾನು ಯಾಕೆ ಇಲ್ಲಿಯವರೆಗೆ ಮದುವೆಯಾಗಿಲ್ಲ ಎನ್ನುವುದನ್ನು ಕೂಡಾ ವಿವರಿಸಿ ಹೇಳಿದ್ದರು.
ಅನುಶ್ರೀ ಮದುವೆ ಬಗ್ಗೆ ಬೇಕಾದಷ್ಟು ಸಲ ಬೇಕಾದ ಹಾಗೆ ಸುದ್ದಿಗಳು ಹರಿದಾದಿವೆ. ಆದರೆ ಇದ್ಯಾವುದಕ್ಕೂ ನಟಿ, ನಿರೂಪಕಿ ತಲೆ ಕೆಡಿಸಿಕೊಂಡಿಲ್ಲ.
ಇದೀಗ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಖುದ್ದು ಅನುಶ್ರೀ ತಮ್ಮ ಮದುವೆ ಯಾವಾಗ ಎನ್ನುವುದನ್ನು ಘೋಷಿಸಿದ್ದಾರೆ.ಈ ಮೂಲಕ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಮುಂದಿನ ವರ್ಷವೇ ನನ್ನ ಮದುವೆ, ಮುಂದಿನ ವರ್ಷ ಖಂಡಿತವಾಗಿಯೂ ಮದುವೆಯಾಗುತ್ತೇನೆ ಎಂದು ಡಿಕೆಡಿ ಕಾರ್ಯಕ್ರಮದ ವೇದಿಕೆಯಲ್ಲಿಯೇ ಘೋಷಿಸಿ ಬಿಟ್ಟಿದ್ದಾರೆ.
ಮದುವೆ ಬಗ್ಗೆ ಅನುಶ್ರೀ ಹೇಳಿರುವ ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾದುತ್ತಿದ್ದು, ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.