“ನಟ ರಕ್ಷಿತ್ ಶೆಟ್ಟಿ ಜೊತೆ ನನ್ನ ಮದುವೆಯಾಗಿದೆ”- ಆ್ಯಂಕರ್ ಅನುಶ್ರೀ ಸೆನ್ಸೇಷನಲ್ ಹೇಳಿಕೆ ವೈರಲ್
ಕನ್ನಡದ ಪ್ರಖ್ಯಾತ ನಿರೂಪಕಿ ಅಂದ್ರೆ ಅದು ಅನುಶ್ರೀ. ಯಾವುದೇ ಶೋ ಆಗಿರಲಿ, ಸ್ವಚ್ಛಂದವಾಗಿ-ನಿರರ್ಗಳವಾಗಿ ಮಾತನಾಡುತ್ತಾ ಆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿ ಕೊಡುವ ಸ್ಟಾರ್ ನಿರೂಪಕಿ ಅನುಶ್ರೀ ತಮ್ಮ ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಅಂದಹಾಗೆ ಅನುಶ್ರೀ ವಯಸ್ಸು ಮೂವತ್ತು ದಾಟಿದೆ. ಹೀಗಿದ್ದರೂ ಇನ್ನೂ ಮದುವೆಯಾಗಿಲ್ಲ ಎಂದು ಅನೇಕರು ಅವರನ್ನು ಪ್ರಶ್ನೆ ಮಾಡಿದ್ದುಂಟು, ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಮದುವೆಯನ್ನೂ ಮಾಡಿಸಿ, ಟ್ರೋಲ್’ಗಳನ್ನು ಮಾಡಿದ ಉದಾಹರಣೆಗಳಿವೆ.
ಇಷ್ಟೆಲ್ಲಾ ನಡೆಯುತ್ತಿರುವಾಗ, ತಮ್ಮ ಮದುವೆಯ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ಕಂಡು ಅನುಶ್ರೀ ಬಿದ್ದು ಬಿದ್ದು ನಕ್ಕು ಹೇಳಿಕೆಯನ್ನು ನೀಡಿದ್ದಾರೆ.
ದಿ ಪವರ್ ಹೌಸ್ ವೈನ್ಸ್ ಯುಟ್ಯೂಬ್ ಚಾನೆಲ್’ನ ಪಾಡ್ ಕಾಸ್ಟ್’ನಲ್ಲಿ ಅನುಶ್ರೀ ಸಂದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಯೂಟ್ಯೂಬ್’ನಲ್ಲಿ ನನಗೆ ಇಲ್ಲಿಯವರೆಗೆ 10 ಸಾವಿರ ಬಾರಿ ಮದುವೆ ಮಾಡಿಸಿದ್ದಾರೆ. ಈ ಕಾರಣಕ್ಕೆ ನಾನು ನಿಜಕ್ಕೂ ಮದುವೆಯಾದರೂ ನನ್ನನ್ನು ನಂಬಲ್ಲ. ರಕ್ಷಿತ್ ಶೆಟ್ಟಿ ಜೊತೆಯೂ ಮೂರು ಸಲ ನನ್ನ ಮದುವೆ ಮಾಡಿಸಿದ್ದಾರೆ” ಎಂದು ಜೋರಾಗಿ ನಕ್ಕಿದ್ದಾರೆ.
“ಒಂದು ಸಲ ಈ ಮದುವೆ ಸುದ್ದಿ ನೋಡಿ, ಅದರ ಲಿಂಕ್ ರಕ್ಷಿತ್’ಗೆ ಕಳುಹಿಸಿ ಕಂಗ್ರಾಟ್ಸ್ ಕೂಡ ಹೇಳಿದ್ದೆ. ಅದಕ್ಕೆ ಅವರು ಹೋ ಇದ್ಯಾವಾಗ ಮಾರ್ರೆ! ನೀವು ಕರಿಯಲೇ ಇಲ್ಲ ಅಂದ್ರು. ನಾವೂ ಇಬ್ಬರು ಮದುವೆಗೆ ಬರಲಿಲ್ಲ ಆದರೂ ನಮ್ಮ ಮದುವೆಯಾಗಿದೆ ನೋಡಿ ಎಂದೆ” ಎಂದರು.
“ಇದಷ್ಟೇ ಅಲ್ಲ, ನನ್ನ ಸೋದರ ಸಂಬಂಧಿಯ ಗಂಡನನ್ನೂ ಕೂಡ ಬಿಟ್ಟಿಲ್ಲ. ನಿನ್ನ ಮದುವೆ ಮಾಡುವುದರಲ್ಲಿ ನನ್ನ ಗಂಡನನ್ನೂ ಬಿಟ್ಟಿಲ್ಲ ಮಾರಾಯ್ತಿ ಎಂದು ನನ್ನ ಕಸಿನ್ ಫೋನ್ ಮಾಡಿ ಹೇಳಿದ್ದಳು” ಎಂದಿದ್ದಾರೆ.
“ಇಷ್ಟೇ ವರ್ಷದಲ್ಲಿ ಮದುವೆ ಆಗಬೇಕೆಂದು ಯಾರೋ ಹೇಳುತ್ತಾರೆ. ದಯವಿಟ್ಟು ಅದನ್ನೆಲ್ಲಾ ಕೇಳಬೇಡಿ. ನೀವು ಮಾನಸಿಕವಾಗಿ ಮದುವೆ ಆಗಲು ರೆಡಿಯಾದ ನಂತರವೇ ಮದುವೆಯಾಗಿ. ಭಾವನಾತ್ಮಕವಾಗಿ, ದೈಹಿಕವಾಗಿ, ಆರ್ಥಿಕವಾಗಿ, ನೈತಿಕವಾಗಿ, ಪ್ರಾಕ್ಟಿಕಲಿ ರೆಡಿ ಇದ್ರೆ ಮಾತ್ರ ಮದುವೆ ಆಗಿ ಇಲ್ಲದಿದ್ರೆ ಆಗಲೇ ಬೇಡಿ” ಎಂದಿದ್ದಾರೆ.