ಮುಂದಿನ ವರ್ಷವೇ ಆಂಕರ್‌ ಅನುಶ್ರೀ ಮದುವೆ... ಶಿವಣ್ಣ ಹುಡುಕಿದ ಈ ಹುಡಗನೇ ಆ ಲಕ್ಕೀ ಬಾಯ್ !

Fri, 09 Aug 2024-9:01 am,

ಅನುಶ್ರೀ ಅವರಿಗೆ ಎಲ್ಲೇ ಹೋದರು ಎಲ್ಲರೂ 'ಯಾವಾಗ ಮದುವೆ ಆಗುತ್ತೀರಾ?' ಎಂದೇ ಪ್ರಶ್ನಿಸುತ್ತಾರೆ. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ಮುಂದಿನ ವರ್ಷ ನನ್ನ ಮದುವೆ ನಡೆಯಲಿದೆ ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ.

ವೇದಿಕೆಯೊಂದರಲ್ಲಿ ನಟ ಶಿವರಾಜ್‌ ಕುಮಾರ್ ಅನುಶ್ರೀ ಮದುವೆ ಬಗ್ಗೆ ಮಾತನಾಡಿದ್ದಾರೆ. ಹುಡುಗನನ್ನು ನಾನು ಸಹ ಹುಡುಕುತ್ತಿರುವೆ ಎಂದಿದ್ದಾರೆ. ನಿನ್ನ ಮನಸ್ಸಲ್ಲಿ ಯಾರಾನಾ ಇದ್ರೆ ನನಗೆ ಹೇಳು, ಮದುವೆ ಮಾತುಕತೆ ಮುಗಿಸಿಯೇ ಬಿಡೋಣ ಎಂದಿದ್ದಾರೆ. 

ಅದಕ್ಕೆ ಅನುಶ್ರೀ ಹಾಗೇನಿಲ್ಲ, ಮನಸ್ಸಲ್ಲಿ ಯಾರನ್ನೂ ಬಚ್ಚಿಟ್ಟಿಲ್ಲ. ಮುಂದಿನ ವರ್ಷ ಮದುವೆ ಆಗ್ತೀನಿ. ನಾನು ಮದುವೆಯಾದ್ರೆ ಮಳೆ-ಬೆಳೆ ಎಲ್ಲಾ ಕಡಿಮೆ ಆಗುತ್ತೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ. 

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಎದುರಿನಲ್ಲಿಯೇ ಅನುಶ್ರೀ ಮುಂದಿನ ವರ್ಷ ಮುದುವೆ ಆಗಲಿರುವುದನ್ನು ಕನ್ಫರ್ಮ್ ಮಾಡಿದ್ದು, ಅವರ ಫ್ಯಾನ್ಸ್‌ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಅನುಶ್ರೀ ಮದುವೆ ಆಗಲಿರುವುದು ಯಾರನ್ನು ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಶಿವರಾಜ್‌ಕುಮಾರ್‌ ಹುಡುಕುವ ಆ ಹುಡುಗನ ಕೈ ಹಿಡಿತಾರಾ ಅಥವಾ ತಾವೇ ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಎಂಬ ಕುತೂಹಲ ಜನರನ್ನು ಕಾಡುತ್ತಿದೆ. ಎಲ್ಲದಕ್ಕೂ ಮುಂದಿನ ವರ್ಷ ಉತ್ತರ ಸಿಗುವ ಸಾಧ್ಯತೆಯಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link