ಗುಟ್ಟಾಗಿ MLA ಜೊತೆ ಖ್ಯಾತ ಆ್ಯಂಕರ್ ಲವ್..! ಶೀರ್ಘ್ರವೇ ಹೊರಬಿಳಲಿದೆ ಶಾಕಿಂಗ್ ಸುದ್ದಿ..
ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆ್ಯಂಕರ್ ಪ್ರದೀಪ್ ಮಾಚಿರಾಜು (Pradeep Machiraju) ಯಾರಿಗೆ ಗೊತ್ತಿಲ್ಲ ಹೇಳಿ.. ತಮ್ಮ ಮಾತಿನ ಚತುರತೆಯಿಂದ ತೆಲುಗು ಕಿರುತೆರೆಯಲ್ಲಿ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಇತ್ತೀಚಿಗೆ ಅವರ ಲವ್ ಸ್ಟೋರಿ ಒಂದು ವೈರಲ್ ಆಗುತ್ತಿದೆ. ಪ್ರದೀಪ್ ಮಹಿಳಾ ಶಾಸಕರೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..
ಹೌದು.. ಇವರಿಬ್ಬರು ಗುಟ್ಟಾಗಿ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಸದ್ಯ ಹಿರಿತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ಪ್ರದೀಪ್ ಶೀಘ್ರದಲ್ಲೇ ಅಕ್ಕಡ ಅಮ್ಮಾಯಿ, ಇಕ್ಕಡ ಅಬ್ಬಾಯಿ ಎಂಬ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ..
ಪ್ರದೀಪ್ ತಮ್ಮ ವೃತ್ತಿಜೀವನವನ್ನು RJ ಆಗಿ ಪ್ರಾರಂಭಿಸಿದರು. ನಂತರ ಕಿರಿತೆರೆ ಆಂಕರ್ ಆದರು. ತಮ್ಮದೆಯಾದ ನಿರೂಪಣಾ ಶೈಲಿಯ ಮೂಲಕ ಪುರುಷ ಆ್ಯಂಕರ್ ಗಳಲ್ಲಿ ಅಗ್ರಸ್ಥಾನಕ್ಕೆ ಬಂದರು. ಪ್ರತಿ ಕಾರ್ಯಕ್ರಮದಿಂದಲೂ ಪ್ರದೀಪ್ ಇದ್ದೇ ಇರುತ್ತಾರೆ.. ಒಂದೇ ಚಾನೆಲ್‌ಗೆ ಸೀಮಿತವಾಗದೆ ಎಲ್ಲಾ ವಾಹಿನಿಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಬೆಳ್ಳಿತೆರೆಯಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ರಂಜಿಸಿದ ಪ್ರದೀಪ್.. 30 ದಿನದಲ್ಲಿ ಪ್ರೀತಿಯಲ್ಲಿ ಬೀಳೋದು ಹೇಗೆ..? ಎಂಬ ಚಿತ್ರದ ಮೂಲಕ ಹೀರೋ ಆದರು. ಸದ್ಯ ಅಕ್ಕಡ ಅಮ್ಮಾಯಿ, ಇಕ್ಕಡ ಅಬ್ಬಾಯಿ ಎಂಬ ಟೈಟಲ್ ಇಟ್ಟುಕೊಂಡು ತಯಾರಾಗುತ್ತಿರುವ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಇದರ ನಡುವೆ ಪ್ರದೀಪ್ 40ನೇ ವಯಸ್ಸಿಗೆ ಬಂದರೂ ಮದುವೆಯಾಗದೆ ಬ್ರಹ್ಮಚಾರಿಯಾಗಿ ಉಳಿದಿದ್ದಾರೆ. ಆದರೆ, ಪ್ರದೀಪ್ ಅವರು ಎಪಿಯ ಶಾಸಕರೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಪ್ರದೀಪ್ ಮತ್ತು ಶಾಸಕಿ (Pradeep Machiraju love MLA) ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಎಂಎಲ್‌ಎ ವಿದೇಶದಲ್ಲಿ ಓದಿರುವ ಹಾಗಿದೆ. ಮೊದಲ ಬಾರಿಗೆ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದಾಗಲೇ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಹೇಗೆ ಭೇಟಿಯಾದರು? ಪ್ರೀತಿಯ ಪಯಣ ಹೇಗೆ ಆರಂಭವಾಯಿತು? ಮದುವೆ ಯಾವಾಗ? ಸೇರಿದಂತೆ ಹಲವಾರು ಪ್ರಶ್ನೆಗಳನ್ನು ನೆಟಿಗರು ಕೇಳುತ್ತಿದ್ದಾರೆ.