ಮದುವೆ ಸಿದ್ಧತೆಯಲ್ಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ... ಮಾತಿನ ಮಲ್ಲಿ ಪ್ರೀತಿಸುವ ಹುಡುಗ ಯಾರು?
)
ಸ್ಯಾಂಡಲ್‌ವುಡ್ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀಗೆ ಈಗ 37 ವರ್ಷ ವಯಸ್ಸು. ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಹಸೆಮಣೆ ಏರಲು ರೆಡಿಯಾದ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತಾ?
)
ಪಟ ಪಟ ಅಂತಾ ಅರಳು ಹುರಿದಂತೆ ಕನ್ನಡದಲ್ಲಿ ಮಾತನಾಡುತ್ತ ಎಲ್ಲರ ಮನಸೆಳೆಯುವ ಹಾಗೆ ನಿರೂಪಣೆ ಮಾಡುವ ಕೌಶಲ್ಯ ಆಂಕರ್ ಅನುಶ್ರೀಗೆ ಕರಗತವಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅನುಶ್ರೀ ಮದುವೆ ಯಾವಾಗ ಅನ್ನೋದೆ ಎಲ್ಲರ ಪ್ರಶ್ನೆ.
)
ಅನುಶ್ರೀ 37 ವರ್ಷ ವಯಸ್ಸಾದರೂ ಮದುವೆ ಯಾಕೆ ಆಗಿಲ್ಲ ಎಂಬುದು ಅವರ ಫ್ಯಾನ್ಸ್ ಚಿಂತೆ ಆಗಿತ್ತು. ಆದರೆ ಅನುಶ್ರೀ ಈಗ 2025 ರ ಮಾರ್ಚ್‌ನಲ್ಲಿ ಮದುವೆ ಆಗುವುದಾಗಿ ಹೇಳಿಬಿಟ್ಟರು. ಆ ಬಳಿಕ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಅನುಶ್ರೀ ಕನ್ನಡದಲ್ಲಿ ಹತ್ತಾರು ವರ್ಷಗಳಿಂದಲೂ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅನುಶ್ರೀ ಒಂದು ಎಪಿಸೋಡ್‌ಗೆ ಆಂಕರಿಂಗ್ ಮಾಡಲು ಸುಮಾರು ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಅನುಶ್ರೀ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದವರು, ಬಡತನ ಹಸಿವು ನೋಡುತ್ತ ಬೆಳೆದ ಅನುಶ್ರೀ ಈಗ ಉತ್ತಮ ಬದುಕು ಕಟ್ಟಿಕೊಂಡು ಹತ್ತಾರು ಹೆಣ್ಣು ಮಕ್ಕಳಿಗೆ ಮಾದರಿ ಆಗಿದ್ದಾರೆ.
ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ್ದಾರೆ. ಐಷಾರಾಮಿ ಮನೆ ಮತ್ತು ಕಾರನ್ನು ಅನುಶ್ರೀ ಹೊಂದಿದ್ದಾರೆ ಎನ್ನಲಾಗುತ್ತದೆ. ಅನುಶ್ರೀ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಇದೆ ಎನ್ನಲಾಗುತ್ತದೆ.
ಸ್ಯಾಂಡಲ್‌ವುಡ್ ಸ್ಟಾರ್ ನಿರೂಪಕಿ ಅನುಶ್ರೀ ಒಟ್ಟು ಆಸ್ತಿ ಸುಮಾರು 50 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಆದರೆ ಅನುಶ್ರೀ ಅಧಿಕೃತವಾಗಿ ತಮ್ಮ ಆಸ್ತಿಯ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಹಾಗಾಗಿ ಇದೇ ನಿಖರವೆಂದು ಹೇಳಲಾಗಲ್ಲ.