ಸಿಟ್ಟಿಗೆದ್ದ ಹುಡುಗಿ ಮೊಬೈಲ್ ಎಸೆದು ತನ್ನ ಪ್ರಿಯಕರನನ್ನು ಕೊಂದಳು: ಏನಾಗಿತ್ತು ನೋಡಿ..!
ಈ ಘಟನೆಯಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಕೊಂದಿದ್ದಾಳೆ. 22 ವರ್ಷದ ರೊಕ್ಸಾನಾ ಅಡೆಲಿನಾ ಲೋಪೆಜ್(Roxana Adelina Lopez) ಕೋಪದಿಂದ ತನ್ನ 23 ವರ್ಷದ ಗೆಳೆಯ ಲೂಯಿಸ್ ಗ್ವಾಂಟೇ(Luis Guantay)ಗೆ ಬಿರುಸಿನಲ್ಲಿ ಫೋನ್ ಎಸೆದುಬಿಟ್ಟಿದ್ದಳು. ಆದರೆ ಅದು ಆತನ ಪ್ರಾಣವನ್ನೇ ತೆಗೆದುಕೊಂಡಿತ್ತು.
ವರದಿಗಳ ಪ್ರಕಾರ ಅರ್ಜೆಂಟೀನಾ(Argentinian)ದ ಲಾ ನ್ಯಾಸಿಯನ್(La Nacion) ನಿವಾಸಿ ರೊಕ್ಸಾನಾ ವಿರುದ್ಧ ತನಿಖೆ ನಡೆಯುತ್ತಿದೆ. ಈ ವರ್ಷ ಏಪ್ರಿಲ್ ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಗೆಳೆಯ ಲೂಯಿಸ್ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ. ಹೀಗಾಗಿ ನಾನು ಆತ್ಮರಕ್ಷಣೆಗಾಗಿ ಆತನ ಮೇಲೆ ಫೋನ್ ಎಸೆದುಬಿಟ್ಟೆ. ಅದು ಜೋರಾಗಿ ಆತನ ತಲೆಗೆ ಬಡಿದಿತ್ತು ಅಂತಾ ಆಕೆ ಪೊಲೀಸರ ಬಳಿ ಹೇಳಿದ್ದಾಳೆ.
ಯುವತಿ ತನ್ನ ತಲೆಗೆ ಬಲವಾಗಿ ಫೋನ್ ಎಸೆದ ನಂತರ ಲೂಯಿಸ್ ಈ ಬಗ್ಗೆ ದೂರು ನೀಡಿದ್ದ. ತಲೆಗೆ ಭಾರೀ ಪೆಟ್ಟಾಗಿದ್ದರಿಂದ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಲೂಯಿಸ್ ನನ್ನು ಪರೀಕ್ಷೆಗೊಳಪಡಿಸಿದ ನಂತರ ಫೋನ್ ಹೊಡೆತಕ್ಕೆ ಆತನ ತಲೆಗೆ ಗಂಭೀರ ಗಾಯಗಳಾಗಿರುವುದು ಗೊತ್ತಾಗಿತ್ತು. ಶಸ್ತ್ರಚಿಕತ್ಸೆ ಮಾಡಿ ವೈದ್ಯರು ಆತನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆತ ಚಿಕಿತ್ಸೆ ಫಲಕಾರಿಯಾಗೆ ಕೊನೆಯುಸಿರೆಳದಿದ್ದ. ಬಳಿಕ ಲೂಯಿಸ್ ತಾಯಿ ಪೊಲೀಸರಿಗೆ ದೂರು ನೀಡಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಲೂಯಿಸ್ ನ ತಲೆಯ ಬಲಭಾಗದಲ್ಲಿ ಮೊಬೈಲ್ ಫೋನ್ ಬಡಿದು ಗಂಭೀರ ಗಾಯಗಳಾಗಿದ್ದು, ಈ ಕಾರಣದಿಂದ ಆತ ಮೃತಪಟ್ಟಿದ್ದಾನೆ ಎಂದು ಸಂತ್ರಸ್ತೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಗಮನಾರ್ಹ ಸಂಗತಿಯೆಂದರೆ ಕಳೆದ ತಿಂಗಳು ಇದೇ ರೀತಿಯ ಪ್ರಕರಣದಲ್ಲಿ ಅರ್ಜೆಂಟೀನಾದ ನ್ಯಾಯಾಲಯವು ತನ್ನ ಸಂಗಾತಿಯನ್ನು ಇರಿದು ಕೊಂದ ಪ್ರಕರಣದಲ್ಲಿ 28 ವರ್ಷದ ಜೆಸ್ಸಿಕಾ ಓಸೋರ್ಸ್ ಅವರನ್ನು ಖುಲಾಸೆಗೊಳಿಸಿತ್ತು. ಜೆಸ್ಸಿಕಾ ಅವರು ಸ್ವಯಂ ರಕ್ಷಣೆಗಾಗಿ ಸಂಗಾತಿಯನ್ನು ಕೊಲೆ ಮಾಡಿದ್ದಾರೆಂದು ವಾದಿಸಲಾಗಿತ್ತು.
ಕಳೆದ 9 ವರ್ಷಗಳಿಂದ ತನ್ನ ಸಂಗಾತಿ ಕಿರುಕುಳ ನೀಡುತ್ತಿದ್ದ ಎಂದು ಜೆಸ್ಸಿಕಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಆತನ ಕಿರುಕುಳದಿಂದ ಬೇಸತ್ತು ಈ ರೀತಿ ಮಾಡಬೇಕಾಯಿತು, ನನಗೆ ಬೇರೆ ದಾರಿ ಕಾಣಲಿಲ್ಲವೆಂದು ಜೆಸ್ಸಿಕಾ ಹೇಳಿಕೊಂಡಿದ್ದಳು. ಇಂತಹ ಪರಿಸ್ಥಿತಿಯಲ್ಲಿ ಸಿಟ್ಟಿನ ಬರದಲ್ಲಿ ಪ್ರಿಯಕರನ ಮೇಲೆ ಮೊಬೈಲ್ ಎಸೆದ ರೊಕ್ಸಾನಾಳನ್ನು ನ್ಯಾಯಾಲಯವು ಖುಲಾಸೆಗೊಳಿಸಬಹುದು. ಏಕೆಂದರೆ ಆಕೆ ತನ್ನ ಗೆಳೆಯನ ಮೇಲೆ ಮೊಬೈಲ್ ಫೋನ್ ಎಸೆದಿದ್ದು ಉದ್ದೇಶಪೂರ್ವಕವಾಗಿ ಅಲ್ಲ, ಆತ್ಮರಕ್ಷಣೆಗಾಗಿ.