ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆ

Wed, 03 Jul 2024-9:40 am,

ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿ ನಿರ್ಮಿಸಲಾದ ಅನಿಲ್ ಅಂಬಾನಿ ಮನೆಯನ್ನು 16000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.ಇದು 17  ಮಹಡಿಗಳನ್ನು ಒಳಗೊಂಡಿದೆ.   

ಈ ಮನೆಯಲ್ಲಿ ಹೆಲಿಪ್ಯಾಡ್, ಜಿಮ್, ಈಜುಕೊಳ, ಗ್ಯಾರೇಜ್ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳಿವೆ.ಹಿರಿಯ ಸಹೋದರ ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ನಂತರ  ದೇಶದ ಎರಡನೇ ಅತ್ಯಂತ ದುಬಾರಿ ಮನೆ ಇದಾಗಿದೆ. 

ಅನಿಲ್ ಅಂಬಾನಿಯವರ ಈ ಮನೆಯಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳು ಲಭ್ಯವಿದೆ.ಈ ಮನೆ ತುಂಬಾ ದೊಡ್ಡದಾಗಿದ್ದು, ನಿರ್ವಹಣೆಯ ವೆಚ್ಚವು ತುಂಬಾ ದುಬಾರಿಯೇ. ಇಡೀ ಮನೆಯಲ್ಲಿ ಹಲವು ಐಷಾರಾಮಿ ಕೊಠಡಿಗಳಿದ್ದು, ಅನಿಲ್ ಅಂಬಾನಿ ಅವರ ಕುಟುಂಬ ಮಾತ್ರ ಇಲ್ಲಿ ವಾಸಿಸುತ್ತಿದೆ.    

ಅನಿಲ್ ಅಂಬಾನಿಯವರ ಈ ಮನೆ ಭವ್ಯವಾದ ಅರಮನೆಗಿಂತ ಕಡಿಮೆಯಿಲ್ಲ. ಅದರ ಒಳಾಂಗಣ ಅಲಂಕಾರಕ್ಕಾಗಿ ಸಾಕಷ್ಟು ಖರ್ಚು ಮಾಡಲಾಗಿದೆ. ಈ ಮನೆಯಲ್ಲಿ ಹಲವಾರು  ಸುಸಜ್ಜಿತ ದೊಡ್ಡ ಸಭಾಂಗಣಗಳಿವೆ.   

ಅನಿಲ್ ಅಂಬಾನಿಯವರ ಈ ಮನೆಯ ಇಂಟೀರಿಯರ್ ಡಿಸೈನಿಂಗ್ ನೋಡಲೇಬೇಕಾದ ದೃಶ್ಯವಾಗಿದೆ.ಅನಿಲ್ ಅಂಬಾನಿ ಅವರು ತಮ್ಮ ಮನೆಯ ಅಲಂಕಾರವನ್ನು ವಿದೇಶದ ಇಂಟೀರಿಯರ್ ಡಿಸೈನರ್‌ಗಳಿಂದ ಮಾಡಿದ್ದಾರೆ

ಅನಿಲ್ ಅಂಬಾನಿಗೆ ದುಬಾರಿ ವಸ್ತುಗಳೆಂದರೆ ತುಂಬಾ ಇಷ್ಟ.ಅವರು ತುಂಬಾ ಆಡಂಬರದ ಜೀವನಶೈಲಿಯನ್ನು ಇಷ್ಟಪಡುವುದಿಲ್ಲ ಎಂದು ಹೇಳಲಾಗಿದ್ದರೂ, ಮನೆಯ ಅಲಂಕಾರಕ್ಕಾಗಿ ಅವರು ಪ್ರಪಂಚದ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ.ಈ ಮನೆಯಲ್ಲಿರುವ ಪೀಠೋಪಕರಣಗಳು ದುಬಾರಿ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳದ್ದಾಗಿವೆ.  

ಅನಿಲ್ ಅಂಬಾನಿ ಮತ್ತು ಅವರ ಪತ್ನಿ ಪುರಾತನ ವಿನ್ಯಾಸಗಳನ್ನು ಇಷ್ಟಪಡುತ್ತಾರೆ.ಮನೆಯ ಒಳಾಂಗಣ ಅಲಂಕಾರವು ಪ್ರಾಚೀನ ಶೈಲಿಯನ್ನು ಪ್ರತಿಬಿಂಬಿಸುತ್ತದೆ.   

ಅನಿಲ್ ಅಂಬಾನಿ ಮನೆಯ ಅಲಂಕಾರದಲ್ಲಿ ವಿವಿಧ ಬಣ್ಣಗಳನ್ನು ಬಳಸಿದ್ದಾರೆ. ಮನೆಯ ವಿವಿಧ ಕೋಣೆಗಳು ವಿಭಿನ್ನ ವಿನ್ಯಾಸಗಳು ಮತ್ತು ಬಣ್ಣದ ಯೋಜನೆಗಳನ್ನು ಹೊಂದಿವೆ.   

ಅನಿಲ್ ಅಂಬಾನಿಯವರ ಈ ಮನೆಯ ನಿರ್ವಹಣಾ ವೆಚ್ಚ ತುಂಬಾ ಹೆಚ್ಚಾಗಿದೆ. ಇದಕ್ಕಾಗಿ ಹತ್ತಾರು ಸಿಬ್ಬಂದಿಯನ್ನು ಮರುಸೇರ್ಪಡೆ ಮಾಡಲಾಗಿದೆ. ಈ ಮನೆಯ ವಿದ್ಯುತ್ ಬಿಲ್ ಬರೋಬ್ಬರಿ 8 ತಿಂಗಳಲ್ಲಿ 60 ಲಕ್ಷ ರೂದವರೆಗೆ  ಬರುತ್ತದೆಯಂತೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link