Mansi Taxak : ʼಅನಿಮಲ್ʼ ವಿಲನ್‌ ಬಾಬಿ ಡಿಯೋಲ್ 3ನೇ ಪತ್ನಿ ಯಾರು ಗೊತ್ತೆ..!

Sat, 09 Dec 2023-1:01 pm,

ಕಳೆದ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಅನಿಮಲ್‌ ಸಿನಿಮಾದ ಕ್ರೇಜ್‌ ಹೆಚ್ಚುತ್ತಿದೆ. ಎಲ್ಲಿ ನೋಡಿದರೂ ಈ ಸಿನಿಮಾಗೆ ಸಂಬಂಧಿಸಿದ ವಿಡಿಯೋಗಳು ಕಾಣಿಸುತ್ತಿವೆ.

ಇನ್‌ಸ್ಟಾಗ್ರಾಂ ತೆರೆದರೆ ಸಾಕು, ಅನಿಮಲ್‌ ಸಿನಿಮಾಗಳಿಗೆ ಸಂಬಂಧಿಸಿದ ರೀಲ್ಸ್‌ ಹೆಚ್ಚು ಕಾಣಿಸುತ್ತಿವೆ. ಅಲ್ಲದೆ, ಈ ಸಿನಿಮಾದಲ್ಲಿ ಬಾಬಿ ಡಿಯೋಲ್ ಮೂರನೇ ಪತ್ನಿಯಾಗಿ ನಟಿಸಿದ್ದ ನಟಿ ಯಾರು ಅಂತ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಗಡಿ ದಾಟಿದೆ. ಈ ಸಿನಿಮಾದ ಪಾತ್ರಗಳಿಗೆ ಅವರೇ ಆಯ್ಕೆ ಮಾಡಿರುವ ನಟರು ಮತ್ತೊಂದು ಹೈಲೈಟ್. 

ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಾಯಕಿಯರು ಪಡ್ಡೆ ಹೈಕ್ಳಿಗೆ ತುಂಬಾ ಇಷ್ಟವಾಗಿದ್ದಾರೆ. ರಶ್ಮಿಕಾ ಅಭೂತಪೂರ್ವ ಅಭಿನಯದ ಎಲ್ಲರಿಗೂ ಇಷ್ಟವಾಗಿದೆ. ಮತ್ತೊಂದೆಡೆ, ಟ್ರಿಪ್ತಿ ಡಿಮ್ರಿ ಈಗ ಹುಡುಗರ ಕ್ರಶ್ ಆಗಿದ್ದಾರೆ. ಆದರೆ ಇವರಿಬ್ಬರಿಗಿಂತ ಮತ್ತೊಬ್ಬ ಹುಡುಗಿ ಯುವಕರನ್ನು ಆಕರ್ಷಿಸುತ್ತಾಳೆ. 

ನಟನೆಯ ವಿಷಯದಲ್ಲಿ ರಶ್ಮಿಕಾ ಮಂದಣ್ಣ ಅನಿಮಲ್ ಚಿತ್ರದ ಮೂಲಕ ಸಾಕಷ್ಟು ಕ್ರೇಜ್ ಪಡೆದರು. ಆದರೆ, ಅಬ್ರಾರ್‌ (ಬಾಬಿ ಡಿಯೋಲ್‌) ಮೂರನೇ ಹೆಂಡತಿ ಯುವಕರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಈಗಾಗಲೇ ಜೋಯಾ ಪಾತ್ರದಲ್ಲಿ ನಟಿಸಿರುವ ತ್ರಿಪ್ತಿ ಧಿಮ್ರಿ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್ ಹೊಂದಿದ್ದಾರೆ. 

ಸಧ್ಯ ಎಲ್ಲರೂ ಖಳನಾಯಕ ಬಾಬಿ ಡಿಯೋಲ್ ಅವರ ಮೂರನೇ ಹೆಂಡತಿಯ ಮೇಲೆ ಗಮನಹರಿಸಿದ್ದಾರೆ. ದೊಡ್ಡ ಸೀನ್ ಗಳಿಲ್ಲದಿದ್ದರೂ ಕೆಲವು ಸೀನ್ ಗಳಲ್ಲಿ ಮುಗ್ಧ ನೋಟದಿಂದ ಮನಸೆಳೆಯುವ ಈ ನಟಿ ಯಾರು ಎಂದು ಹುಡುಕಾಡುತ್ತಿದ್ದಾರೆ. 

ಆ ನಟಿ ಹೆಸರು ಮಾನ್ಸಿ ತಕ್ಷಕ್. ಅನಿಮಲ್‌ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದರೂ ಸಹ ಪ್ರೇಕ್ಷಕರಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಈಗ ಎಲ್ಲರೂ ಇವರ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲದೆ, ಅನಿಮಲ್‌ ಭಾಗ 2 ರಲ್ಲಿ ಮಾನ್ಸಿ ಪಾತ್ರ ಬಹಳ ಮುಖ್ಯವಾಗಿರುತ್ತೆ ಅಂತ ಭಾಗ 1ರ ಕ್ಲೈಮ್ಯಾಕ್ಸ್ ನೋಡಿದವರು ಹೇಳುತ್ತಿದ್ದಾರೆ. 

ಪಠಾಣ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಮಾನ್ಸಿಗೆ ಅಷ್ಟು ಕ್ರೇಜ್‌ ಸಿಕ್ಕಿರಲಿಲ್ಲ, ಇದೀಗ ಅನಿಮಲ್‌ ಮೂಲಕ ಸಾಕಷ್ಟು ಫಾಲೋವರ್ಸ್ ಹೊಂದಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಲ್ಲದೆ, ಮಾನ್ಸಿ ಅಭಿಮಾನಿಗಳು ಅವರ ಮುಂದಿನ ಸಿನಿಮಾದ ಅಪ್‌ಡೇಟ್ಸ್‌ಗಾಗಿ ಕಾಯುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link