ಅಂಜಲಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸಚಿನ್ ತೆಂಡೂಲ್ಕರ್.. ಮೊದಲ ಭೇಟಿಗಾಗಿ ಮನೆಗೆ ಬಂದ ಅಳಿಯನ ಕಂಡು ಅತ್ತೆಗೆ ಹೆದುರುವಂತೆ ಮಾಡಿತ್ತು ʼಆʼ ವಿಚಾರ! ಏನದು ಗೊತ್ತೇ?

Wed, 14 Aug 2024-3:29 pm,

ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಮತ್ತು ಅಭಿಮಾನಿಗಳು ಅವರನ್ನು ಕ್ರಿಕೆಟ್ ದೇವರು ಎಂದು ಕರೆಯುತ್ತಾರೆ. ಸಚಿನ್ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ಅವರು ತನಗಿಂತ ಐದು ವರ್ಷ ದೊಡ್ಡವರಾದ ಅಂಜಲಿಯನ್ನು ಮದುವೆಯಾಗಿರುವುದು ಗೊತ್ತೇ ಇದೆ..   

ಸಚಿನ್-ಅಂಜಲಿ 24 ಮೇ 1995 ರಂದು ವಿವಾಹವಾದರು. ಇತ್ತೀಚೆಗಷ್ಟೇ ಅವರ ಮದುವೆ 30 ವರ್ಷ ಪೂರೈಸಿದೆ. ಆದರೆ, ಅಂಜಲಿ ಅವರ ತಾಯಿ ಅನ್ನಾಬೆಲ್ಲೆ ಮೆಹ್ತಾ ಅವರು ತನಗಿಂತ ಐದು ವರ್ಷ ಕಿರಿಯ ವ್ಯಕ್ತಿಯನ್ನು ಮದುವೆಯಾಗುವುದಾಗಿ ಹೇಳಿದಾಗ ಹೇಗೆ ಪ್ರತಿಕ್ರಿಯಿಸಿದರು ಎಂಬುದು ಅನೇಕರಿಗೆ ತಿಳಿದಿಲ್ಲ.   

ಇತ್ತೀಚೆಗೆ ಬಂದ ವರದಿಯೊಂದು ಈ ಬಗ್ಗೆ ವಿವರಣೆ ನೀಡಿದೆ.. ಇದು ಸಚಿನ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ನಡೆದ ಸಂಗತಿಗಳನ್ನು ಒಳಗೊಂಡಿದೆ.  

ಅಂಜಲಿಯವರ ಕುಟುಂಬ 1950 ರಲ್ಲಿ ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದು ನೆಲೆಸಿತು ಎಂದು ಅನ್ನಾಬೆಲ್ಲೆ ಮೆಹ್ತಾ ಹೇಳಿದರು. ಸಚಿನ್‌ ಅವರನ್ನು ಭೇಟಿಯಾಗುವ ಮುಂಚೆ ಒಂದು ದಿನ ಅಂಜಲಿ ಅವರ ಬಗ್ಗೆ ಹೇಳಿದಾಗ ನನ್ನ ಮಗಳು ತುಂಬಾ ಎತ್ತರದ ಮತ್ತು ಸ್ಫುರದ್ರೂಪಿ ವ್ಯಕ್ತಿಯನ್ನು ಮದುವೆಯಾಗುತ್ತಾಳೆ ಎಂದು ಭಾವಿಸಿದ್ದೆ, ಆದರೆ ಸಚಿನ್ ಅವರನ್ನು ನೋಡಿ ಆಶ್ಚರ್ಯವಾಯಿತು ಎಂದು ಅವರು ಹೇಳಿದರು.   

ಅಂಜಲಿ ತನಗಿಂತ ಐದು ವರ್ಷ ಕಿರಿಯ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ನಮ್ಮ ಮನೆಗೆ ಬಂದಾಗ ಅವರಿಗೆ ಕೇವಲ 19 ವರ್ಷ. ಅಂಜಲಿ ಐದೂವರೆ ಅಡಿ ಎತ್ತರ. ಸಚಿನ್ ಕೂಡ ಹಾಗೆಯೇ ಇರಬಹುದೆಂದು ಅನಿಸಿತು. ಬಳಿಕ ಅವರು ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ ಎಂದು ತಿಳಿದುಬಂದಿತು..   

ಆದರೂ.. ಕೆಲವು ಕ್ರಿಕೆಟಿಗರಂತೆ ಅವನು ಪ್ಲೇಬಾಯ್ ಆಗಬಹುದಾ ಎಂದು ನನಗೆ ಅನುಮಾನವಿತ್ತು.. ನಾನು ಈ ಬಗ್ಗೆ ಅವರೊಂದಿಗೆ ಮಾತನಾಡಲು ಬಯಸಿದ್ದೆ. ಆದರೆ, ಸಚಿನ್ ಅವರ ಉತ್ತರ ನನಗೆ ಆಶ್ಚರ್ಯ ತಂದಿತ್ತು.. ನಾವಿಬ್ಬರೂ ಮದುವೆಯಾಗಲು ಬಯಸಿದ್ದೇವೆ ಎಂದು ಅವರು ನೇರವಾಗಿಯೇ ಹೇಳಿದ್ದರು.. ಹೀಗಾಗಿ ಅವರಿಬ್ಬರ ಪ್ರೀತಿ ಅರ್ಥವಾಯಿತು’ ಎಂದು ಅನ್ನಾಬೆಲ್ಲೆ ಹೇಳಿದ್ದರು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link