ಹಾಲಿನ ಜೊತೆ ಈ ಡ್ರೈ ಫ್ರೂಟ್ ಸೇವಿಸಿದ್ರೆ ಬೊಜ್ಜು ಮಂಜಿನಂತೆ ಕರಗಿ ಮಾಯವಾಗುತ್ತೆ!
ಅಂಜೂರದ ಹಣ್ಣು ಕೂಡ ಚಳಿಗಾಲಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅಂಜೂರದಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ.
ಅಂಜೂರ ಸೇವಿಸಿದರೆ ದೇಹದಲ್ಲಿ ಶಕ್ತಿಯ ಕೊರತೆ ಇರುವುದಿಲ್ಲ. ವಿಟಮಿನ್ಸ್, ಸಲ್ಫರ್, ಕ್ಲೋರಿನ್ ಅಂಜೂರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಕಾರಣದಿಂದಾಗಿ ದೇಹದಲ್ಲಿ ಶಕ್ತಿಯು ಹೆಚ್ಚುತ್ತದೆ.
ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ಅಂಜೂರವನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಅಂಜೂರದ ಹಣ್ಣುಗಳನ್ನು ಸೇವಿಸಲು ಸಲಹೆ ನೀಡುತ್ತಾರೆ.
ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯಿಂದಲೂ ಪರಿಹಾರ ದೊರೆಯುತ್ತದೆ. ಅದರಲ್ಲೂ ಪುರುಷರು ರಾತ್ರಿ ಮಲಗುವ ಮುನ್ನ ಅಂಜೂರದ ಹಣ್ಣನ್ನು ಹಾಲಿನೊಂದಿಗೆ ಬೆರೆಸಿ ತಿಂದರೆ ಅದು ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ.
ಅಂಜೂರವನ್ನು ಹಾಲಿನೊಂದಿಗೆ ಸೇವಿಸಿದರೆ ಅಧಿಕ ತೂಕವನ್ನು ಸಹ ಕಡಿಮೆ ಮಾಡಬಹುದು. ಬೊಜ್ಜಿನ ವಿರುದ್ಧ ಅಂಜೂರವನ್ನು ರಾಮಬಾಣವೆಂದು ಪರಿಗಣಿಸಲಾಗಿದೆ. ಅಂಜೂರ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಇದರಿಂದ ಅನಗತ್ಯ ಕೊಬ್ಬು ಹೊರಹೋಗುತ್ತದೆ. ಹೀಗಾಗಿ ಬೊಜ್ಜು ಕಡಿಮೆಯಾಗುತ್ತದೆ.
ಅಂಜೂರದ ಹಣ್ಣುಗಳು ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದರಿಂದ ನಿಮ್ಮ ತ್ವಚೆಯ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಏಕೆಂದರೆ ಅಂಜೂರದಲ್ಲಿ ಸಾಕಷ್ಟು ಪ್ರಮಾಣದ ನಾರಿನಂಶವಿದೆ.