2ನೇ ಬಾರಿ ಅದ್ಧೂರಿಯಾಗಿ ಫಸ್ಟ್ ನೈಟ್ ಮಾಡಿಕೊಂಡ ಖ್ಯಾತ ನಟಿ..! ಫೋಟೋ ವೈರಲ್
ಆಗಾಗ ಬಾಲಿವುಡ್ ನಟಿಯರು ತಮ್ಮ ಬೋಲ್ಡ್ ಫೋಟೋಸ್ ಮತ್ತು ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ. ಅಷ್ಟೇ ಅಲ್ಲ ತಮ್ಮ ಜೀವನದಲ್ಲಿ ಜರುಗುವ ಪ್ರತಿಯೊಂದು ವಿಚಾರವನ್ನು ಬಹಿರಂಗವಾಗಿ ಹಂಚಿಕೊಳ್ಳುವ ನಟಿಯರು ಒಮ್ಮೊಮ್ಮೆ ತಮ್ಮ ಪ್ಯಾನ್ಸ್‌ಗಳಿಗೆ ಶಾಕ್ ನೀಡುತ್ತಿರುತ್ತಾರೆ. ಅದರಂತೆ ಇದೀಗ ಬಿಟೌನ್ ಸ್ಟಾರ್ ನಟಿಯೊಬ್ಬರು ಎರಡನೇ ಬಾರಿಗೆ ಅದ್ಧೂರಿಯಾಗಿ ಫಸ್ಟ್‌ನೈಟ್ ಮಾಡಿಕೊಂಡಿದ್ದು, ಫೋಟೋಸ್ ಹಂಚಿಕೊಂಡಿದ್ದಾರೆ..
ಬಿಗ್ ಬಾಸ್ ಸೀಸನ್ 17ರ ಸ್ಪರ್ಧಿ, ʼಸ್ಯಾತಂತ್ರ್ಯ ವೀರ್ ಸಾವರ್ಕರ್ʼ ಸಿನಿಮಾದ ನಟಿ ಅಂಕಿತಾ ಲೋಖಂಡೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋ ಒಂದು ಸಖತ್ ವೈರಲ್ ಆಗುತ್ತಿದೆ. ನಟಿ ಎರಡನೇ ಬಾರಿಗೆ ಫಸ್ಟ್ ನೈಟ್ ಮಾಡಿಕೊಂಡ್ರಾ..? ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.
ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್ ಅವರ ಜೊತೆ ವಿವಾಹ ವಾರ್ಷಿಕೋತ್ಸವ ಸಂಭ್ರಮಿಸಿದ್ದಾರೆ. ಈ ಕುರಿತ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಕ್ಯೂಟ್ ಜೋಡಿ ಮದುವೆಯಾಗಿ ಇಂದಿಗೆ 6 ವರ್ಷಗಳು ಪೂರ್ಣಗೊಂಡಿದೆ. ಅದಕ್ಕಾಗಿ ಸಂಭ್ರಮಿಸಿದ್ದಾರೆ.
ಅಂಕಿತಾ ಹೂಗಳಿಂದ ಅಲಂಕರಿಸಿದ ಬೆಡ್ ರೂಮ್ ನಲ್ಲಿ ತೆಗೆದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋ ನೋಡಿದ ಫ್ಯಾನ್ಸ್ ಶುಭಕೋರಿದ್ದಾರೆ. ಅಲ್ಲದೆ, ನೆಟ್ಟಿಗರು, ಮತ್ತೊಮ್ಮೆ ಫಸ್ಟ್ ನೈಟ್ ಮಾಡಿಕೊಂಡ್ರಾ ? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಅದ್ರೆ ಫೋಟೋಗಳಂತೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ನಟಿ ಅಂಕಿತಾ ಲೋಖಂಡೆ ಕ್ರೇಜ್ ಹೆಚ್ಚಿದೆ. ಇತ್ತೀಚಿಗೆ ಅವರು, ʼಸ್ವಾತಂತ್ರ್ಯ ವೀರ್ ಸಾವರ್ಕರ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿನ ಅವರ ನಟನೆ ಪ್ರಶಂಸೆಗೆ ಕಾರಣವಾಗಿದೆ. ರಣದೀಪ್ ಹೂಡಾ ವೀರ್ ಸಾವರ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.