ಇದು 27 ಅಂತಸ್ತಿನ ಅರಮನೆ ! ಮುಖೇಶ್ ಅಂಬಾನಿಯ ಆಂಟಿಲಿಯಾ ನಿವಾಸದ ಫೋಟೋಗಳು ಇಲ್ಲಿವೆ

Tue, 25 Jun 2024-9:14 am,

ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ಮತ್ತೆ ಸದ್ದು ಮಾಡುತ್ತಿದೆ.ಟಾಪ್ 10 ದುಬಾರಿ ಮನೆಗಳಲ್ಲಿ ಆಂಟಿಲಿಯಾ ಮೊದಲ ಸ್ಥಾನದಲ್ಲಿದೆ.   

ಆಂಟಿಲಿಯಾವನ್ನು ಮನೆ ಅನ್ನುವುದಕ್ಕಿಂತ ಅರಮನೆ ಎನ್ನಬಹುದು. ಇದು 27 ಅಂತಸ್ತಿನ ಮನೆಯಾಗಿದೆ. ಈ ಮನೆ ನಿರ್ಮಾಣಕ್ಕೆ ತಗುಲಿರುವ ವೆಚ್ಚಅಂದಾಜು 15,000 ಕೋಟಿ ರೂ  

ಇದು 4,00,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ.ಇಲ್ಲಿ 600 ಮಂದಿ ಕೆಲಸ ಮಾಡುತ್ತಾರೆ. 

ಮುಖೇಶ್ ಅಂಬಾನಿಯ ಮನೆಯ ಹೆಸರು ಕೂಡಾ ವಿಶೇಷವಾಗಿದೆ. ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಪೌರಾಣಿಕ ದ್ವೀಪದ ಆಧಾರದ ಮೇಲೆ ಈ ಮನೆಗೆ ಆಂಟಿಲಿಯಾ ಎಂದು ಹೆಸರಿಸಲಾಗಿದೆ.   

ಕಟ್ಟಡವನ್ನು 2010ರಲ್ಲಿ ಪೂರ್ಣಗೊಳಿಸಲಾಯಿತು.ಈ ಮನೆಯನ್ನು ವಿನ್ಯಾಸಗೊಳಿಸಿದ್ದು ಚಿಕಾಗೋ ಮೂಲದ ವಾಸ್ತುಶಿಲ್ಪಿ ಪರ್ಕಿನ್ಸ್. ಆದರೆ ನಿರ್ಮಾಣದ ಜವಾಬ್ದಾರಿ ಪೂರೈಸಿದ್ದು ಆಸ್ಟ್ರೇಲಿಯಾದ ಕಂಪನಿ ಲ್ಯಾಂಗ್ಟನ್ ಹೋಲ್ಡಿಂಗ್ಸ್ .

ಆಂಟಿಲಿಯಾದ 27 ಮಹಡಿಗಳಲ್ಲಿ 6 ಮಹಡಿಗಳನ್ನು ಪಾರ್ಕಿಂಗ್‌ಗಾಗಿಯೇ  ಮೀಸಲಿಡಲಾಗಿದೆ.ಇಲ್ಲಿ ಅಂಬಾನಿ ಕುಟುಂಬದ ಎಲ್ಲಾ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ನಿಲ್ಲಿಸಲಾಗಿದೆ.     

ಪಾರ್ಕಿಂಗ್ ಸ್ಥಳದ ಮೇಲಿನ ಮಹಡಿಯಲ್ಲಿ 50 ಆಸನಗಳ ಸಿನಿಮಾ ಹಾಲ್ ಇದೆ.ಅದರ ಮೇಲೆ ಹೊರಾಂಗಣ ಉದ್ಯಾನವಿದೆ.ಇದರೊಂದಿಗೆ ಈ ಕಟ್ಟಡದಲ್ಲಿ 3 ಹೆಲಿಪ್ಯಾಡ್‌ಗಳನ್ನು ಒದಗಿಸಲಾಗಿದೆ. 

ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ,ಇದು ಯೋಗ ಸ್ಟುಡಿಯೋ, ಐಸ್ ಕ್ರೀಮ್  ರೂಂ ಮತ್ತು ಮೂರಕ್ಕೂ ಹೆಚ್ಚು ಈಜುಕೊಳಗಳನ್ನು ಹೊಂದಿದೆ. ಮನೆಯಲ್ಲಿ 9 ಲಿಫ್ಟ್‌ಗಳಿದ್ದು,ಸ್ಪಾ ಮತ್ತು ದೇವಸ್ಥಾನವೂ ಇದೆ.     

ಈ ಮನೆಯ ವಿನ್ಯಾಸವು 8ರ ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವಂತಿದೆ.     

ZEENEWS TRENDING STORIES

By continuing to use the site, you agree to the use of cookies. You can find out more by Tapping this link