ಮದುವೆನೇ ವರ್ಕ್ ಆಗಿಲ್ಲಾ ಅಂದ್ರೆ? - ವಿಚ್ಛೇದನದ ಬಗ್ಗೆ ನಟಿ ಅನು ಪ್ರಭಾಕರ್ ಹೇಳಿದ್ದೇನು?
ಹಿಂದೂ ಧರ್ಮದಲ್ಲಿ ಮದುವೆ ಎನ್ನೋದು ಇಬ್ಬರ ನಡುವಿನ ಬಾಂಧವ್ಯ ಅಲ್ಲ. ಇದು ಎರಡು ಕುಟುಂಬಗಳ ಸಂಬಂಧ. ಎರಡು ಕುಟುಂಬಗಳ ನಡುವಿನ ಸಾಮರಸ್ಯದ ಬಂಧವಾಗಿದೆ. ಇದನ್ನು ಒಪ್ಪಿಕೊಳ್ಳೋಣ ಎಂದು ನಟಿ ನಟಿ ಅನು ಪ್ರಭಾಕರ್ ಹೇಳಿದ್ದಾರೆ.
ಆದರೆ ಮದುವೆನೇ ವರ್ಕ್ ಆಗಿಲ್ಲಾ ಅಂದಾಗ... ಎರಡು ಕುಟುಂಬಗಳ ನಡುವಿನ ಸಂಬಂಧವಪ್ಪಾ... ಡಿವೋರ್ಸ್ ತಗೋಬೇಡಿ ಅನ್ನೋಕೆ ಆಗುತ್ತಾ? ಆ ಮದುವೆ ಯಾಕೆ ಮುರಿದು ಬೀಳುತ್ತಾ ಇದೆ ಅನ್ನೋದು ದಂಪತಿಗಳಿಗೆ ಮಾತ್ರ ಗೊತ್ತಿರುತ್ತದೆ ಎಂದು ಅನು ಪ್ರಭಾಕರ್ ಹೇಳಿದ್ದಾರೆ.
ಗಂಡನೇ ಆಗಿರಬಹುದು. ಹೆಂಡತಿಯೇ ಆಗಿರಬಹುದು. ಯಾವ ಸಂದರ್ಭದಲ್ಲಿ ಇದ್ದಾರೆ. ತಮ್ಮಿಬ್ಬರ ನಡುವೆ ಏನು ಆಗ್ತಿದೆ, ಯಾಕೆ ಹೀಗಾಗ್ತಿದೆ, ಇಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗದಿರುವ ಕಾರಣ ಎಲ್ಲವೂ ಗೊತ್ತಿರೋದು ಅವರಿಬ್ಬರಿಗೆ ಮಾತ್ರ ಎಂದು ಅನು ಪ್ರಭಾಕರ್ ಹೇಳಿದ್ದಾರೆ.
ಈ ರೀತಿಯ ಸಂದರ್ಭದಲ್ಲಿ ವಿಚ್ಛೇದನ ಪಡೆಯಲು ಮುಂದಾದರೆ ಕುಟುಂಬದವರು ವಿರೋಧಿಸೋದು ಯಾಕೆ? ಇದು ನನಗೆ ಅರ್ಥವಾಗಿಲ್ಲ ಎಂದು ಅನು ಪ್ರಭಾಕರ್ ಹೇಳಿದ್ದಾರೆ.
ರ‍್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ಅನು ಪ್ರಭಾಕರ್ ವಿಚ್ಛೇದನದ ಕುರಿತು ಮಾತನಾಡಿದ್ದಾರೆ.