‘ಇವನೇ ನನ್ನ ಪ್ರಪಂಚ...’ ವೇದಿಕೆ ಮೇಲೆಯೇ ಗೆಳೆಯನನ್ನು ಪರಿಚಯಿಸಿದ ನಟಿ ಅನುಪಮಾ ಗೌಡ !
ಅನುಪಮಾ ಗೌಡ ನಟಿಯಾಗಿ, ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಮಿಂಚಿದ್ದಾರೆ.
ಸದ್ಯ ‘ಗಿಚ್ಚಿ ಗಿಲಿಗಿಲಿ 3’ ವೇದಿಕೆ ಮೇಲೆ ನಟಿ ಅನುಪಮಾ ಗೌಡ ತನ್ನ ಪ್ರೀತಿಯ ಗೆಳೆಯನನ್ನು ಪರಿಚಯಿಸಿದ್ದಾರೆ. ಇವನೇ ನನ್ನ ಪ್ರಪಂಚ ಎಂದು ಎಲ್ಲೆರೆದೇ ಹೇಳಿಕೊಂಡಿದ್ದಾರೆ.
ಆಗಸ್ಟ್ 04 ಫ್ರೆಂಡ್‌ಶಿಪ್ ಡೇ. ಎಲ್ಲರೂ ತಮ್ಮ ಗೆಳೆಯರಿಗೆ ಕೃತಜ್ಞತೆ ಸಲ್ಲಿಸುವ ದಿನ. ಅದೇ ರೀತಿ ಅನುಪಮಾ ಗೌಡ ತಮ್ಮ ಬೆಸ್ಟ್ ಫ್ರೆಂಡ್ ಬಗ್ಗೆ ಜನರ ಬಳಿ ಹೇಳಿದ್ದಾರೆ.
"ಇವನೇ ನನ್ನ ಪ್ರಪಂಚ. ತಂದೆ ತೀರಿಹೋದಾಗ ಮಗುವಿನ ರೂಪದಲ್ಲಿ ಬರುತ್ತಾರೆ ಎಂದು ಅನೇಕರು ಹೇಳುತ್ತಾರೆ. ಹಾಗೆ ನನ್ನ ಜೀವನದಲ್ಲಿ ಈತ ಬಂದಿದ್ದಾನೆ. ಇವನಿಗೆ ನಾನು ತಾಯಿ ಆಗಿದೀನಿ. ನನಗೆ ಇವನೇ ಎಲ್ಲ’ ಎಂದು ನಟಿ ಅನುಪಮಾ ಗೌಡ ಹೇಳಿದ್ದಾರೆ.
ಈ ಪುಟಾಣಿ ಶ್ವಾನವೇ ಅನುಪಮಾ ಗೌಡ ಬೆಸ್ಟ್ ಫ್ರೆಂಡ್. ಇದನ್ನು ಅನುಪಮಾ ತಮ್ಮ ಜೀವಕ್ಕೂ ಮಿಗಿಲಾಗಿ ಪ್ರೀತಿಸುತ್ತಾರೆ.