‘ಇವನೇ ನನ್ನ ಪ್ರಪಂಚ...’ ಅನುಪಮಾ ಗೌಡ ಜೀವದ ಗೆಳೆಯ ಇವರೇ ನೋಡಿ
ಅನುಪಮಾ ಗೌಡ ʻಅಕ್ಕʼ ಸೀರಿಯಲ್ ಮೂಲಕ ನಟಿಯಾಗಿ ಫುಲ್ ಫೇಮಸ್ ಆದರು. ಬಿಗ್ ಬಾಸ್ ಸ್ಪರ್ಧಿಯಾಗಿ ಚಾನ್ಸ್ ಗಿಟ್ಟಿಸಿಕೊಂಡರು. ನಂತರ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಮಿಂಚಿರುವ ಅನುಪಮಾ ಗೌಡ ಮದುವೆ ಬಗ್ಗೆ ಅನೇಕ ಚರ್ಚೆಗಳು ನಡೆದಿರುತ್ತವೆ. ಈ ನಡುವೆ ‘ಗಿಚ್ಚಿ ಗಿಲಿಗಿಲಿ’ ವೇದಿಕೆ ಮೇಲೆ ಅನುಪಮಾ ತನ್ನ ಗೆಳೆಯನನ್ನು ಪರಿಚಯಿಸಿದ ಫೋಟೋ ವೈರಲ್ ಆಗುತ್ತಿದೆ.
ಅನುಪಮಾ ಗೌಡ ತನ್ನ ಪ್ರೀತಿಯ ಗೆಳೆಯನನ್ನು ವೇದಿಕೆ ಮೇಲೆ ಕರೆಸಿ ಎಲ್ಲರಿಗೂ ಪರಿಚಯಿಸಿದ್ದಾರೆ. ಇವನೇ ನನ್ನ ಪ್ರಪಂಚ ಎಂದು ಎಲ್ಲರೆದುರೇ ಖುಷಿಯಿಂದ ಹೇಳಿಕೊಂಡಿದ್ದರು. ಇದು ಫ್ರೆಂಡ್‌ಶಿಪ್ ಡೇ ದಿನ ನಡೆದ ಘಟನೆಯಾಗಿದೆ.
ಅನುಪಮಾ ಗೌಡ ತಮ್ಮ ಜೀವದ ಗೆಳೆಯನ ಬಗ್ಗೆ ಹೇಳಿಕೊಂಡಿದ್ದಾರೆ ʻʻಇವನೇ ನನ್ನ ಪ್ರಪಂಚ... ತಂದೆ ತೀರಿಹೋದಾಗ ಮಗುವಿನ ರೂಪದಲ್ಲಿ ಬರುತ್ತಾರೆ ಎಂದು ಅನೇಕರು ಹೇಳುತ್ತಾರೆ. ಹಾಗೆ ನನ್ನ ಜೀವನದಲ್ಲಿ ಈತ ಬಂದಿದ್ದಾನೆ. ಇವನಿಗೆ ನಾನು ತಾಯಿ ಆಗಿದೀನಿ. ನನಗೆ ಇವನೇ ಎಲ್ಲʼʼಎಂದು ಅನುಪಮಾ ಗೌಡ ಹೇಳಿದ್ದಾರೆ.
ನಟಿ ಅನುಪಮಾ ಗೌಡ ಜೀವದ ಗೆಳೆಯ ಅವರ ಮುದ್ದಿನ ಸಾಕು ನಾಯಿ. ಈ ಪುಟಾಣಿ ಶ್ವಾನವೇ ಅನುಪಮಾ ಗೌಡ ಬೆಸ್ಟ್ ಫ್ರೆಂಡ್. ಇದನ್ನು ಅನುಪಮಾ ತಮ್ಮ ಜೀವಕ್ಕೂ ಮಿಗಿಲಾಗಿ ಪ್ರೀತಿಸುತ್ತಾರೆ.