ಅನುಷ್ಕಾ ಶರ್ಮಾ.. ವಿರಾಟ್ ಕೊಹ್ಲಿ.. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ! ಇಬ್ಬರ ನಡುವಿರುವ ವಯಸ್ಸಿನ ಅಂತರವೆಷ್ಟು?

Wed, 01 May 2024-12:52 pm,

ಟೀಮ್‌ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ವಿರಾಟ್ ಕೊಹ್ಲಿಯನ್ನು ಮದುವೆಯಾಗಿರುವ ಅನುಷ್ಕಾ ಶರ್ಮಾ ಅವರಿಗಿಂತ ದೊಡ್ಡವರು. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು 11 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು. 

2013 ರಲ್ಲಿ ಶಾಂಪೂ ಜಾಹೀರಾತಿನ ಚಿತ್ರೀಕರಣದ ವೇಳೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಬಾರಿಗೆ ಭೇಟಿಯಾದರು. ಸ್ವಲ್ಪ ಸಮಯದ ನಂತರ ಇಬ್ಬರೂ ಡೇಟಿಂಗ್ ಮಾಡಿ ನಂತರ ಮದುವೆಯಾದರು.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಜನಿಸಿದ್ದು 1988 ರಲ್ಲಿ, ಆದರೂ ವಿರಾಟ್ ಕೊಹ್ಲಿಗಿಂತ ಅನುಷ್ಕಾ ಶರ್ಮಾ ದೊಡ್ಡವರು. 

ಅನುಷ್ಕಾ ಶರ್ಮಾ 01 ಮೇ 1988 ರಂದು ಜನಿಸಿದರು. ವಿರಾಟ್ ಕೊಹ್ಲಿ 05 ನವೆಂಬರ್ 1988 ರಂದು ಜನಿಸಿದರು. ಇವರಿಬ್ಬರ ನಡುವೆ 6 ತಿಂಗಳ ವಯಸ್ಸಿನ ಅಂತರವಿದೆ. ನಟಿ ಅನುಷ್ಕಾ ಶರ್ಮಾ ತನ್ನ ಪತಿ ವಿರಾಟ್‌ಗಿಂತ 6 ತಿಂಗಳು ದೊಡ್ಡವರು.

2023 ರ ಹೊತ್ತಿಗೆ ಅನುಷ್ಕಾ ಶರ್ಮಾ ಅವರ ಒಟ್ಟು ಆಸ್ತಿ 255 ಕೋಟಿ ರೂಪಾಯಿ. ಒಂದು ತಿಂಗಳಿಗೆ ಸುಮಾರು 1 ಕೋಟಿ ರೂ ಆದಾಯ ಗಳಿಸುತ್ತಾರೆ. 

ಮುಂಬೈನಲ್ಲಿ ಐಷಾರಾಮಿ ಫ್ಲ್ಯಾಟ್ ಅನ್ನು ಹೊಂದಿದ್ದಾರೆ, ಇದರ ಮಾರುಕಟ್ಟೆ ಮೌಲ್ಯ 9 ಕೋಟಿ. ಬಿಎಂಡಬ್ಲ್ಯು, ರೇಂಜ್ ರೋವರ್, ಮರ್ಸಿಡಿಸ್ ನಂತಹ ಐಷಾರಾಮಿ ಕಾರುಗಳೂ ಇವೆ. ರಿಯಲ್ ಎಸ್ಟೇಟ್ ನಲ್ಲೂ ಹೂಡಿಕೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಆಸ್ತಿ ಪತ್ನಿಗಿಂತ ಹೆಚ್ಚು. ವರದಿಗಳ ಪ್ರಕಾರ, ಕೊಹ್ಲಿ ಒಟ್ಟು ಆಸ್ತಿ 1046 ಕೋಟಿ. ಬಿಸಿಸಿಐ ಜತೆಗಿನ ಒಪ್ಪಂದದಿಂದ ವರ್ಷಕ್ಕೆ 7 ಕೋಟಿ ಪಡೆಯುತ್ತಾರೆ. 

ಹಲವು ದೊಡ್ಡ ಕಂಪನಿಗಳಲ್ಲೂ ಹೂಡಿಕೆ ಮಾಡಿದ್ದಾರೆ. ಅವರು 'One8 ಕಮ್ಯೂನ್' ಹೆಸರಿನ ಸ್ವಂತ ರೆಸ್ಟೋರೆಂಟ್ ಅನ್ನು ಸಹ ಹೊಂದಿದ್ದಾರೆ. ಹಲವು ದುಬಾರಿ ವಾಹನಗಳೂ ಇವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link