Anushka-Virat: ಅನುಷ್ಕಾ ಶರ್ಮಾ ಕ್ಲಾಸ್ ಟಾಪರ್… ಹಾಗಾದ್ರೆ ವಿರಾಟ್ ಕೊಹ್ಲಿ ಓದಿದ್ದೇನು? ಶಿಕ್ಷಣವೆಲ್ಲಾ ಕರ್ನಾಟಕದ ಈ ಸ್ಕೂಲ್’ನಲ್ಲೇ!

Thu, 07 Mar 2024-2:58 pm,

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವೇ ಇಲ್ಲ. ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ಈ ಜೋಡಿ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ. ಆದರೆ ಇವರಿಬ್ಬರ ವಿದ್ಯಾರ್ಹತೆ ಬಗ್ಗೆ ತಿಳಿದರೆ ನಿಮಗೆ ಶಾಕ್ ಆಗದೆ ಇರದು.

ವಿರಾಟ್ ಕೊಹ್ಲಿ ಓದಿರೋದು ಜಸ್ಟ್ 12 ನೇ ತರಗತಿ. ವಿಶಾಲ್ ಭಾರತಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಆದರೆ ಅನುಷ್ಕಾ ಬಗ್ಗೆ ಮಾತನಾಡುವುದಾದರೆ, ಆರ್ಟ್ಸ್‌’ನಲ್ಲಿ ಬ್ಯಾಚುಲರ್ ಪದವಿ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಪಿಯುಸಿ ಬಳಿಕ 1998 ರಲ್ಲಿ ಪಶ್ಚಿಮ ದೆಹಲಿ ಕ್ರಿಕೆಟ್ ಅಕಾಡೆಮಿಗೆ ಸೇರಿದರು. ಇದಾದ ನಂತರ ಹಿಂತಿರುಗಿ ನೋಡಲೇ ಇಲ್ಲ. ಕ್ರೀಡೆಯಲ್ಲಿ ಸಂಪೂರ್ಣವಾಗಿ ನಿರತರಾದರು. ಬಾಲ್ಯದಿಂದಲೂ ವಿರಾಟ್’ಗೆ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ.

ಆದರೆ ಅನುಷ್ಕಾ ಶರ್ಮಾ ಅಧ್ಯಯನದಲ್ಲಿ ತುಂಬಾ ಸ್ಮಾರ್ಟ್. ಅನುಷ್ಕಾ ಅವರೇ ಸಂದರ್ಶನವೊಂದರಲ್ಲಿ ತಮ್ಮ ಶಾಲಾ-ಕಾಲೇಜಿನಲ್ಲಿ ಟಾಪರ್ ಆಗಿದ್ದೆ ಎಂದು ಹೇಳಿದ್ದರು.

ಇನ್ನು ಅನುಷ್ಕಾ ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದರು. ಅದಾದ ಬಳಿಕ ಮಾಡೆಲಿಂಗ್ ಅಥವಾ ಪತ್ರಿಕೋದ್ಯಮದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಉದ್ದೇಶಿಸಿದ್ದರು. ಕಡೆಗೆ ಮಾಡೆಲಿಂಗ್’ನಲ್ಲೇ ಮುಂದುವರೆಯಲು ನಿರ್ಧರಿಸಿ ಮುಂಬೈಗೆ ತೆರಳಿದರು

ವಿರಾಟ್ ಕುಟುಂಬ ಬಡತನದಲ್ಲೇ ಸಾಗುತ್ತಿತ್ತು. ತಂದೆ ವಕೀಲ ಮತ್ತು ತಾಯಿ ಗೃಹಿಣಿ. ಇವರಿಗೆ ಒಬ್ಬ ಸಹೋದರ ಮತ್ತು ಸಹೋದರಿ ಇದ್ದು, ಅವರ ಹೆಸರು ವಿಕಾಸ್ ಕೊಹ್ಲಿ ಮತ್ತು ಭಾವನಾ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link