ಪವರ್‌ ಕಪಲ್‌ ಅನುಷ್ಕಾ-ವಿರಾಟ್‌ ಬ್ರೇಕಪ್..‌ ʼಈʼ ಕಾರಣಕ್ಕೆ ಕೊಹ್ಲಿಯನ್ನು ಬಿಟ್ಟು ಹೋಗಲು ನಿರ್ಧರಿಸಿದ್ದರಂತೆ ನಟಿ!

Thu, 01 Aug 2024-10:18 am,

ಬಾಲಿವುಡ್ ಮತ್ತು ಕ್ರಿಕೆಟ್‌ನ ಅತ್ಯಂತ ಪ್ರಸಿದ್ಧ ಜೋಡಿಗಳಲ್ಲಿ ಒಂದು ಅನುಷ್ಕಾ ಮತ್ತು ವಿರಾಟ್ ಜೋಡಿ.. ಈ‌ ಪವರ್ ಕಪಲ್ 11 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು..   

ಮದುವೆಯ ನಂತರ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ ಮತ್ತು ಆಗಾಗ್ಗೆ ಫೋಟೋಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ.. ಆದರೆ ಅನುಷ್ಕಾ ಮತ್ತು ವಿರಾಟ್ ನಡುವೆಯೂ ಮನಸ್ಥಾಪ ಬಂದು ಒಮ್ಮೆ ಬ್ರೇಕಪ್ ಆಗಿದ್ದರು ಎಂಬುದು ನಿಮಗೆ ತಿಳಿದಿದೆಯೇ?  

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟಿವಿ ಜಾಹೀರಾತು ಶೂಟಿಂಗ್‌ ಸೆಟ್‌ನಲ್ಲಿ ಮೊದಲು ಭೇಟಿಯಾದರು. ಈ ಜೋಡಿಗೆ ಮೊದಲ ನೋಟದಲ್ಲೇ ಪ್ರೇಮವಾಗದಿದ್ದರೂ, ಶೂಟಿಂಗ್ ನಂತರವೂ ಕನೆಕ್ಟ್ ಆಗಿದ್ದರು.   

ಬಳಿಕ 2014 ರಲ್ಲಿ ಪುಣೆಯಲ್ಲಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅರ್ಧ ಶತಕ ಗಳಿಸಿದ ನಂತರ, ವಿರಾಟ್ ಅನುಷ್ಕಾಗೆ ಬ್ಯಾಟ್‌ನಿಂದ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಅವರ ಸಂಬಂಧವನ್ನು ಎಲ್ಲರಿಗೂ ತಿಳಿಸಿದ್ದರು..   

ವಿರಾಟ್ ಮತ್ತು ಅನುಷ್ಕಾ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿ ಅವರಿಬ್ಬರೂ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಬಂದಿತು. ಹೌದು 2016 ರಲ್ಲಿ, ವಿರಾಟ್ ಕೊಹ್ಲಿ Instagram ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು.. ಅದರಲ್ಲಿ ಹಾರ್ಟ್ ಬ್ರೋಕನ್ ಎಂದು ಬರೆಯಲಾಗಿತ್ತು.. ಇದರ ನಂತರ, ವಿರಾಟ್ ಮತ್ತು ಅನುಷ್ಕಾ ಒಟ್ಟಿಗೆ ಕಾಣಿಸಿಕೊಳ್ಳುವುದನ್ನೂ ನಿಲ್ಲಿಸಿದರು, ಇದರಿಂದಾಗಿ ಇಬ್ಬರೂ ಬೇರ್ಪಟ್ಟಿದ್ದರು ಎಂದು ಹೇಳಲಾಗಿತ್ತು..  

ಮಾಧ್ಯಮ ವರದಿಗಳ ಪ್ರಕಾರ, ಅನುಷ್ಕಾ ಶರ್ಮಾ ಅವರ 'ಬಾಂಬೆ ವೆಲ್ವೆಟ್' ಚಿತ್ರದ ಫ್ಲಾಪ್‌ನಿಂದ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ನಂಬಲಾಗಿದೆ..   

ಅಷ್ಟೇ ಅಲ್ಲ.. ಈ ಹಿಂದೆ, ವಿರಾಟ್ ಮತ್ತು ಅನುಷ್ಕಾ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಕೂಡ ಮಾಡಿದ್ದರು.. ಇದನ್ನು ವಿರುಷ್ಕಾ ಅಭಿಮಾನಿಯೊಬ್ಬರು ಗಮನಿಸಿ.. ಈ ಬಗ್ಗೆ ಟ್ವೀಟ್‌ ಸಹ ಮಾಡಿದ್ದರು..     

ಆದರೆ ಅದೆಲ್ಲವನ್ನೂ ಮೀರಿ ಇಬ್ಬರೂ ಮತ್ತೆ ಒಂದಾದರು.. ಬಳಿಕ ಯುವರಾಜ್ ಸಿಂಗ್ ಮತ್ತು ಹೇಝಲ್ ಕೀಚ್ ಅವರ ಮದುವೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು.. ಹೀಗೆ ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಸಂಬಂಧವನ್ನು ಗಟ್ಟಿಯಾಗಿಸಿ 11 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link